ಒಳ್ಳೇ ಮನಸ್ಸು ಇದ್ರೇನೇ ಇದೆಲ್ಲಾ ಸಾಧ್ಯ: ಹೋಳಿ ದಿನ ನಟ ಕಿರಣ್ ರಾಜ್ ಮಾಡಿದ ಅದ್ಭುತ ಕೆಲಸ! ರಿಯಲಿ ಗ್ರೇಟ್

Entertainment Featured-Articles News Viral Video

ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ನಟನಾಗಿ ಸ್ಯಾಂಡಲ್ ವುಡ್ ಗೂ ಎಂಟ್ರಿ ನೀಡಿರುವ ನಟ ಕಿರಣ್ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಇವರಿಗೆ ದೊಡ್ಡ ಮಟ್ಟದ ಹಿಂಬಾಲಕರು ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ನಟ ಮಾಡುತ್ತಿರುವ ಕೆಲವು ಅತ್ಯುತ್ತಮ ಕಾರ್ಯಗಳಿಂದಲೇ ಅವರು ಸಾಕಷ್ಟು ಜನ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಸಮಾಜಕ್ಕೆ ಏನಾದರೂ ಒಳ್ಳೆಯದು ಮಾಡಬೇಕೆಂದು ಬಂದಾಗ ತಮ್ಮ ಕೈಲಾದ ನೆರವನ್ನು ನೀಡುವುದಕ್ಕೆ ಕಿರಣ್ ರಾಜ್ ಸದಾ ಮುಂದಿರುತ್ತಾರೆ.‌ ಕಿರಣ್ ರಾಜ್ ಅವರು ತಮ್ಮ ಗಳಿಕೆಯಲ್ಲಿ ಸ್ವಲ್ಪ ಭಾಗವನ್ನು ಅವಶ್ಯಕತೆ ಇರುವವರಿಗಾಗಿ ಬಳಸುವ ಮೂಲಕ ಬಹಳಷ್ಟು ಜನರಿಗೆ ಮಾದರಿಯಾಗಿದ್ದಾರೆ.

ಎಲ್ಲರೂ ಹೋಳಿ ಹಬ್ಬವನ್ನು ಸಂಭ್ರಮಿಸಿದ್ದಾರೆ. ಬಣ್ಣಗಳನ್ನು ಹಚ್ಚಿಕೊಂಡು ಖುಷಿ ಪಟ್ಟಿದ್ದಾರೆ. ಈ ವೇಳೆ ಕಿರಣ್ ರಾಜ್ ಅವರು ತಮ್ಮ ಹೋಳಿ ಹಬ್ಬವನ್ನು ಇನ್ನೂ ಅರ್ಥಪೂರ್ಣ ಹಾಗೂ ಮಾದರಿ ಆಚರಣೆಯನ್ನಾಗಿ ಮಾಡಿಕೊಂಡಿದ್ದಾರೆ. ಹೌದು ಹೋಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ನಟ ಕಿರಣ್ ರಾಜ್ ಅವರು ಬಡ ಮಕ್ಕಳಿಗೆ ಪುಸ್ತಕಗಳನ್ನು ಹಂಚುವ ಕೆಲಸವನ್ನು ಮಾಡಿದ್ದಾರೆ. ಅವರೇ ಸ್ವತಃ ಮಕ್ಕಳನ್ನು ಭೇಟಿ ಮಾಡಿ ಅವರಿಗೆ ಅಗತ್ಯವಿರುವಂತಹ ಪುಸ್ತಕಗಳನ್ನು ನೀಡುವ ಮೂಲಕ ಮಕ್ಕಳ ಮುಖದಲ್ಲಿ ನಗುವಿನ ಬಣ್ಣ ಮೂಡಿಸಿದ್ದಾರೆ.

ಕಿರಣ್ ರಾಜ್ ಅವರು ಈ ವಿಶೇಷ ಸಂದರ್ಭದ ವೀಡಿಯೋ ತುಣುಕನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು, ಹೋಳಿ ಬಣ್ಣಗಳ ಹಬ್ಬ, ಕೆಲವು ಬಣ್ಣಗಳೊಂದಿಗೆ ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಗೆ ಬಹಳಷ್ಟು ಜನರು ಮೆಚ್ಚುಗೆಗಳನ್ನು ನೀಡಿದ್ದಾರೆ. ‌ಅನೇಕರು ಕಾಮೆಂಟ್ ಗಳನ್ನು ಮಾಡುವ ಮೂಲಕ ಕಿರಣ್ ರಾಜ್ ಅವರ ಈ ಕಾರ್ಯವನ್ನು ಹೊಗಳಿದ್ದಾರೆ. ಇನ್ನು ವೃತ್ತಿ ವಿಚಾರಕ್ಕೆ ಬಂದರೆ ಕಿರಣ್ ರಾಜ್ ಅವರು ಪ್ರಸ್ತುತ ಜನಪ್ರಿಯ ಧಾರಾವಾಹಿ ಕನ್ನಡತಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಇದಲ್ಲದೇ ಅವರ ಅಭಿನಯದ ಕೆಲವು ಸಿನಿಮಾಗಳು ಸಹಾ ಬಿಡುಗಡೆಗೆ ಸಜ್ಜಾಗಿವೆ. ಇದಲ್ಲದೇ ಅವರು ಹೊಸ ಸಿನಿಮಾ ಪ್ರಾಜೆಕ್ಟ್ ಗಳಲ್ಲಿ ಸಹಾ ತೊಡಗಿಕೊಂಡಿದ್ದಾರೆ. ಅವರ ಅಭಿನಯದ ದ್ವಿಭಾಷಾ ಸಿನಿಮಾಗಳು ಕೂಡಾ ಬಿಡುಗಡೆ ಆಗಬೇಕಿದೆ ಎನ್ನಲಾಗಿದೆ. ಒಟ್ಟಾರೆ ಹೋಳಿ ಹಬ್ಬದಂದು ಮಕ್ಕಳ ಮುಖದಲ್ಲಿ ನಗುವಿನ ಬಣ್ಣವನ್ನು ಮೂಡಿಸಿರುವ ನಟ ಕಿರಣ್ ರಾಜ್ ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಶಸ್ಸು ಸಿಗಲಿ ಹಾಗೂ ಅವರ ಈ ಸಾಮಾಜಿಕ ಕಳಕಳಿಯ ಕಾರ್ಯಗಳು ಇನ್ನಷ್ಟು, ಮತ್ತಷ್ಟು ನಡೆಯಲೆಂದು ಶುಭ ಹಾರೈಸೋಣ.

Leave a Reply

Your email address will not be published.