ಒಲಂಪಿಕ್ಸ್ ವಿಚಾರದಲ್ಲಿ ಭಾರತಕ್ಕೆ ಮತ್ತೊಂದು ಬಂಗಾರ, ಆದರೆ ಇದು ಕ್ರೀಡೆಯಲ್ಲಿ ಅಲ್ಲ

Written by Soma Shekar

Published on:

---Join Our Channel---

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಒಂದು ಚಿನ್ನದ ಪದಕವನ್ನು ಗೆದ್ದಿರುವ ವಿಷಯ ಈಗಾಗಲೇ ಸಮಸ್ತ ಭಾರತೀಯರಿಗೂ ತಿಳಿದಿದೆ. ಅಲ್ಲದೇ ಈ ಮೂಲಕ ಭಾರತದ ಬಹುವರ್ಷಗಳ ನಿರೀಕ್ಷೆ ಒಂದಕ್ಕೆ ಸಫಲತೆ ದೊರಕಿದೆ. ಆದರೆ ಇದೀಗ ಭಾರತ ಇನ್ನೊಂದು ಚಿನ್ನವನ್ನು ತನ್ನದಾಗಿಸಿಕೊಂಡಿದೆ. ಹೌದು ಹಾಗೆಂದ ಮಾತ್ರಕ್ಕೆ ಇದು ಕ್ರೀಡೆಯಲ್ಲಿ ಅಲ್ಲ, ಬದಲಾಗಿ ಒಲಂಪಿಕ್ ಕ್ರೀಡಾಕೂಟ ನಡೆಯುವ ಸಮಯದಲ್ಲಿ ಫೇಸ್ ಬುಕ್ ಎಂಗೇಜ್ಮೆಂಟ್ ನಲ್ಲಿ ಭಾರತವು ವಿಶ್ವದಲ್ಲೇ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಹೌದು, ಫೇಸ್ ಬುಕ್ ಜುಲೈ 23ರಿಂದ ಆಗಸ್ಟ್ 8 ರ ವರೆಗಿನ ಒಲಂಪಿಕ್ಸ್ ಗೆ ಸಂಬಂಧಪಟ್ಟಂತಹ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಟ್ರೆಂಡ್ಸ್ ಅನ್ನು ಬಿಡುಗಡೆ ಮಾಡಿದೆ.

ಫೇಸ್ ಬುಕ್ ಬಿಡುಗಡೆ ಮಾಡಿರುವ ಒಲಿಂಪಿಕ್ಸ್ ಗೆ ಸಂಬಂಧಪಟ್ಟಂತಹ ಟ್ರೆಂಡ್ಸ್ ನಲ್ಲಿ ಫೇಸ್ ಬುಕ್ ನಲ್ಲಿ ಒಲಂಪಿಕ್ಸ್ ವಿಚಾರವಾಗಿ, ಕ್ರೀಡಾಕಾರರ ಕುರಿತಾಗಿ ಅತಿ ಹೆಚ್ಚು ಚರ್ಚೆ ನಡೆಸಿದಂತಹ ದೇಶಗಳ ಸಾಲಿನಲ್ಲಿ ಭಾರತಕ್ಕೆ ಮೊದಲನೇ ಸ್ಥಾನವು ದೊರೆತಿದೆ. ಭಾರತದ ನಂತರದ ಸ್ಥಾನಗಳಲ್ಲಿ ಅನುಕ್ರಮವಾಗಿ ಅಮೇರಿಕಾ, ಬ್ರೆಜಿಲ್ ,‌ಫಿಲಿಫೈನ್ಸ್, ಹಾಗೂ ಮೆಕ್ಸಿಕೋ ದೇಶಗಳು ಸ್ಥಾನವನ್ನು ಪಡೆದುಕೊಂಡಿದೆ. ಚರ್ಚೆಯ ಮುಖ್ಯ
ಕ್ರೀಡೆಗಳ ಪೈಕಿ ಟ್ರ್ಯಾಕ್ ಮತ್ತು ಫೀಲ್ಡ್ ಬಳಿಕ ಜಿಮ್ನಾಸ್ಟಿಕ್, ರೋಯಿಂಗ್, ಬಾಕ್ಸಿಂಗ್, ಸ್ವಿಮ್ಮಿಂಗ್ ಬಗ್ಗೆ ಜಾಸ್ತಿ ಟ್ರೆಂಡ್ ಆಗಿದೆ ಎನ್ನುವ ವಿಷಯ ತಿಳಿದು ಬಂದಿದೆ.

ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ಗಮನಸೆಳೆದ ಅಂತಹ ಕ್ರೀಡಾಪಟುಗಳಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಂತಹ, ಚಿನ್ನದ ಹುಡುಗ ಎಂದೇ ಹೆಸರಾಗಿರುವ ನೀರಜ್ ಚೋಪ್ರಾ ಅವರು ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.‌ ಮೊದಲನೇ ಸ್ಥಾನವನ್ನು ಅಮೇರಿಕಾದ ಆರ್ಟಿಸ್ಟಿಕ್ ಜಿಮ್ನಾಸ್ಟ್ ಸಿಮೋನೆ ಬೋಯ್ಸ್ ತನ್ನದಾಗಿಸಿಕೊಂಡಿದ್ದಾರೆ. ಇನ್ನು ಒಲಂಪಿಕ್ಸ್ ನ ಸಾಧನೆಯ ನಂತರ ಇನ್ಸ್ಟಾಗ್ರಾಮ್ ನಲ್ಲಿ ನೀರಜ್ ಚೋಪ್ರಾ ಅವರ ಹಿಂಬಾಲಕರ ಸಂಖ್ಯೆ 28 ಲಕ್ಷ ಹೆಚ್ಚಾಗಿದ್ದರೆ, ಪಿವಿ ಸಿಂದು ಅವರ ಹಿಂಬಾಲಕರ ಸಂಖ್ಯೆ 7 ಲಕ್ಷ ಹೆಚ್ಚಾಗಿದ್ದು, ಇದೇ ವೇಳೆ ಮೇರಿ ಕೋಮ್ ಅವರು ಎರಡು ಲಕ್ಷ ಅಧಿಕ ಫಾಲೋಯರ್ ಗಳನ್ನು ಪಡೆದುಕೊಂಡಿದ್ದಾರೆ.

Leave a Comment