ಒಲಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಪರಿಸ್ಥಿತಿ ಕಂಡು, ಮಾತನಾಡಲು ಪದಗಳಿಲ್ಲ ಎಂದ ನಟ ಮಾಧವನ್

0 1

ಟೋಕಿಯೊ ಒಲಂಪಿಕ್ಸ್ 2021ರಲ್ಲಿ ವೈಟ್ ಲಿಫ್ಟಿಂಗ್ ನಲ್ಲಿ ರಜತ ಪದಕವನ್ನು ಗೆದ್ದು ಬಂದ ಮೀರಾಬಾಯಿ ಚಾನು ಇದೀಗ ದೇಶದಲ್ಲಿ ಬಹು ಚರ್ಚಿತ ವ್ಯಕ್ತಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೀರಾಬಾಯಿ ಅವರ ಫೋಟೋಗಳು, ವೀಡಿಯೋ ಗಳು ಭರ್ಜರಿಯಾಗಿ ವೈರಲ್ ಆಗುತ್ತಾ ಸಾಗಿದೆ. ಮೀರಾಬಾಯಿ ಅವರ ಸಾಧನೆಗೆ ದೇಶದ ವಿವಿಧ ಭಾಗಗಳಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಎಲ್ಲೆಲ್ಲೂ ಮೀರಾಬಾಯಿಯವರ ಸಾಧನೆಯ ಕುರಿತಾದ ಅನೇಕ ಸುದ್ದಿಗಳು ಸದ್ದು ಮಾಡುತ್ತಿದೆ. ಇವೆಲ್ಲವುಗಳ ನಡುವೆಯೇ ಒಲಂಪಿಕ್ ಗೆದ್ದು ಬಂದ ಮೀರಾಬಾಯಿ ಚಾನು ಅವರ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮೀರಾಬಾಯಿ ಚಾನು ತಮ್ಮ ಕುಟುಂಬದ ಸದಸ್ಯರ ಜೊತೆ ಒಂದು ಸಾಧಾರಣ ಮನೆಯಲ್ಲಿ, ನೆಲದ ಮೇಲೆ ಕುಳಿತು ಊಟವನ್ನು ಮಾಡುತ್ತಿರುವ ಫೋಟೋ ಎನ್ನುವ ಶೀರ್ಷಿಕೆಯಲ್ಲಿ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಗಮನಿಸಿದಾಗ ಮೀರಾಬಾಯಿ ನೆಲದ ಮೇಲೆ ಕುಳಿತುಕೊಂಡು ಕುಟುಂಬದ ಸದಸ್ಯರ ಜೊತೆಗೆ ಊಟ ಮಾಡುವುದನ್ನು ನೋಡಬಹುದಾಗಿದೆ. ಈ ಫೋಟೋ ಕುರಿತಾಗಿ ಬಹಳಷ್ಟು ಜನ ಬಹಳಷ್ಟು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಡವರ ಮನೆಯಂತಹ ಮನೆ, ಮೀರಾಬಾಯಿಯವರ ಪರಿಸ್ಥಿತಿ ಕಂಡು ಆಶ್ಚರ್ಯ ಪಟ್ಟಿದ್ದಾರೆ.

ವೈರಲ್ ಆದ ಫೋಟೋವನ್ನು ನೋಡಿ ಸಾಮಾನ್ಯ ಜನರು ಮಾತ್ರವೇ ಅಲ್ಲದೆ ಬಾಲಿವುಡ್ ಮತ್ತು ದಕ್ಷಿಣ ಸಿನಿರಂಗದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಮಾಧವನ್ ಅವರು ಸಹಾ ಬಹಳ ಆಶ್ಚರ್ಯ ಪಟ್ಟಿದ್ದಾರೆ. ಅವರು ತಮ್ಮ ಟ್ವಿಟರ್ ನಲ್ಲಿ ಈ ಕುರಿತಾಗಿ ಒಂದು ಟ್ವೀಟ್ ಮಾಡಿದ್ದಾರೆ. ಮಾಧವನ್ ಅವರು ಮೀರಾಬಾಯಿ ಚಾನು ನೆಲದ ಮೇಲೆ ಕುಳಿತು ಊಟ ಮಾಡುತ್ತಿರುವುದನ್ನು ನೋಡಿ ತಮ್ಮ ಟ್ವೀಟ್ ನಲ್ಲಿ, “ಇದು ಸತ್ಯವಾಗಲಾರದು, ನಾನು ಸಂಪೂರ್ಣವಾಗಿ ಪದಗಳನ್ನೇ ಕಳೆದುಕೊಂಡಿದ್ದೇನೆ ಅಥವಾ ಮಾತನಾಡಲು ಯಾವುದೇ ಪದಗಳಿಲ್ಲ” ಎಂದು ಹೇಳಿದ್ದಾರೆ.

ಇನ್ನು ಈ ಫೋಟೋ ಬಹಳಷ್ಟು ಚರ್ಚೆಗಳನ್ನು ಹುಟ್ಟು ಹಾಕಿರುವಾಗಲೇ ಮೀರಾಬಾಯಿ ಚಾನು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು “ಎರಡು ವರ್ಷಗಳ ನಂತರ ಮನೆಯ ಊಟ ಮಾಡುವಾಗ ಮೂಡುವ ಮುಗುಳ್ನಗೆ” ಎನ್ನುವ ಶೀರ್ಷಿಕೆಯನ್ನು ಹಾಕಿಕೊಂಡು ಒಂದು ಒಳ್ಳೆಯ ನೆಲದ ಮೇಲೆ ಕುಳಿತು ಮನೆಯ ಊಟವನ್ನು ಸವಿಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೊದಲು ವೈರಲ್ ಆದ ಫೋಟೋ ಹಾಗೂ ಮೀರಾಬಾಯಿ ಚಾನು ಹಂಚಿಕೊಂಡ ಫೋಟೋಗಳಿಗೆ ಬಹಳಷ್ಟು ವ್ಯತ್ಯಾಸ ಇರುವುದನ್ನು ಕಾಣಬಹುದಾಗಿದೆ.

Leave A Reply

Your email address will not be published.