ಒಬ್ಬರು, ಇಬ್ಬರಲ್ಲ ಬರೋಬ್ಬರಿ 800 ಮಂದಿಯ ತಂದೆಯಾದ ಮಿಲ್ಕ್ ಡಿಲೆವರಿ ಬಾಯ್: ಇದು ಖಂಡಿತ ಅಚ್ಚರಿ!!!
ಒಬ್ಬರಲ್ಲ, ಇಬ್ಬರಲ್ಲ ಒಟ್ಟು 800 ಮಂದಿಗೆ ತಂದೆಯಾದವನು ಆತನು. ಹಾಗೆಂದ ಮಾತ್ರಕ್ಕೆ ಆತನೇನು ದೊಡ್ಡ ಸೆಲೆಬ್ರಿಟಿಯೋ ಅಥವಾ ಉದ್ಯಮಪತಿಯೋ ಅಲ್ಲ, ಆತನೊಬ್ಬ ಹಾಲು ಡಿಲೆವರಿ ಮಾಡುವ ಬಾಯ್ ಆಗಿದ್ದವನು. ಹೌದು ಇಂತಹುದೊಂದು ಶಾ ಕಿಂ ಗ್ ವಿಷಯವನ್ನು ಡೈಲಿ ಮೇಲ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ದೊಡ್ಡ ಸಂಚಲನವನ್ನು ಹುಟ್ಟು ಹಾಕಿದೆ. ಹಾಗಾದರೆ ಈ ವ್ಯಕ್ತಿ 800 ಮಕ್ಕಳ ತಂದೆಯಾಗಿದ್ದು ಹೇಗೆ?? ಇದರ ಹಿಂದಿನ ರೋಚಕ ಕಥೆಯಾದರೂ ಏನು?? ಎನ್ನುವ ಕುತೂಹಲ ಇದ್ದರೆ ಅದಕ್ಕೆ ಇಲ್ಲಿದೆ ಉತ್ತರ.
ಅದು 1950 ರಿಂದ 1960 ರ ಕಾಲ, ರಾಂಡಾಲ್ ಜೆಫ್ರಿನ್ ಎನ್ನುವ ಹೆಸರಿನ ವ್ಯಕ್ತಿಯು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಪ್ರಾಂತ್ಯದಲ್ಲಿ ಹಾಲು ಡಿಲೆವರಿ ಮಾಡುವ ಕೆಲಸವನ್ನು ಮಾಡುತ್ತಿದ್ದರು. ಆ ದಿನಗಳಲ್ಲಿ ಇಂದಿನಂತೆ ಹಾಲಿನ ಪ್ಯಾಕೆಟ್ ಗಳು ಇರಲಿಲ್ಲ. ಬದಲಾಗಿ ನೇರವಾಗಿ ಕ್ಯಾನ್ ಮೂಲಕ ತೆಗೆದುಕೊಂಡು ಹೋಗಿ ಹಾಲು ಹಾಕಬೇಕಿತ್ತು ಅಥವಾ ಹಾಲಿನ ಬಾಟಲಿಗಳನ್ನು ಡಿಲೆವರಿ ನೀಡಬೇಕಿತ್ತು. ರಾಂಡಾಲ್ ಅದೇ ವೃತ್ತಿಯನ್ನು ಮಾಡುತ್ತಿದ್ದರು.
ರಾಂಡಾಲ್ ಗೆ ಇದೇ ಬಹು ಲಾಭದಾಯಕವಾಗಿದ್ದು, ಸಹಜವಾಗಿಯೇ ಅಂದಗಾರನಾಗಿದ್ದ ರಾಂಡಾಲ್ ಮಹಿಳೆಯರ ಗಮನ ಸೆಳೆದಿದ್ದ, ಗೃಹಿಣಿಯರು ಆತನಿಗೆ ಬೇಗ ಆತ್ಮೀಯರಾಗುತ್ತಿದ್ದರು, ಆತನಿಗೆ ಸ್ನಾಕ್ಸ್ ಗಳನ್ನು ನೀಡುತ್ತಿದ್ದರು. ಹಲವು ಸೈನಿಕರ ಪತ್ನಿಯರು ಈತನಿಗೆ ಬಹಳ ಆಪ್ತರಾಗಿದ್ದರು ಎನ್ನಲಾಗಿದ್ದು, ಆ ಆಪ್ತತೆಯೇ ಆತನನ್ನು ಅವರು ಹಾಸಿಗೆಯವರೆಗೆ ಕೊಂಡೊಯ್ದಿತ್ತು ಎನ್ನುವುದು ಕೂಡಾ ವಾಸ್ತವ.
ಆ ಕಾಲದಲ್ಲಿ ಇಂದಿನಂತಹ ತಂತ್ರಜ್ಞಾನ ಇಲ್ಲದ ಕಾರಣ ಅ ಕ್ರ ಮ ಸಂಬಂಧಗಳು ಅಷ್ಟಾಗಿ ಹೊರ ಜಗತ್ತಿಗೆ ತಿಳಿಯುತ್ತಿರಲಿಲ್ಲ. ಆದರೆ ರಾಂಡಾಲ್ ವಿಚಾರದಲ್ಲಿ ಆದ ಸಮಸ್ಯೆ ಎಂದರೆ ಮಹಿಳೆಯರಿಗೆ ಜನ್ಮಸಿದ ಮಕ್ಕಳ ಬಣ್ಣ ಹಾಗೂ ಕೂದಲಿನ ಹೋಲಿಕೆ ಭಿನ್ನವಾಗಿರುವುದು. ಇದೆಲ್ಲಾ ಆದ ಮೇಲೆ ಇತ್ತೀಚಿಗೆ ಸ್ಯಾಂಡಿಯಾಗೋ ಪ್ರದೇಶದಲ್ಲಿ ಕೆಲವು ಕೇಸ್ ಗಳ ಪರಿಶೋಧನೆಯ ವೇಳೆ ಬಹಳಷ್ಟು ಡಿಎನ್ಎ ಗಳ ನಡುವೆ ಹೋಲಿಕೆ ಕಂಡು ಬಂದಿದೆ.
ಸುಮಾರು 800 ಡಿಎನ್ಎ ಗಳು ಒಂದೇ ಹೋಲಿಕೆಯನ್ನು ಹೊಂದಿವೆ ಎನ್ನಲಾಗಿದೆ. ಅಲ್ಲದೇ ಅವು ಅವರ ತಂದೆ ರಕ್ತಸಂಬಂಧವನ್ನು ಹೊಂದಿಲ್ಲ ಎಂದು ತಿಳಿದು ಬಂದಿದೆ. ಇದೊಂದು ಸಂಚಲನಕ್ಕೆ ಕಾರಣವಾಗಿತ್ತು. ಅನಂತರ ವಿಜ್ಞಾನಿಗಳು ರಾಂಡಾಲ್ ಡಿಎನ್ಎ ಪರೀಕ್ಷೆ ಮಾಡಿದಾಗ ಅವರ ಡಿಎನ್ಎ ಗೆ ಈ ಎಂಟುನೂರು ಡಿಎನ್ಎ ಮ್ಯಾಚ್ ಆಗಿದೆ ಎನ್ನಲಾಗಿದೆ. ಇನ್ನು ಹೆಂಡತಿ, ಮಕ್ಕಳು ಇಲ್ಲದೇ ಒಂಟಿಯಾಗಿರುವ ರಾಂಡಾಲ್ ಈ ವಿಚಾರ ಕೇಳಿ ಖುಷಿಪಟ್ಟಿದ್ದು, ಮಕ್ಕಳನ್ನು ಭೇಟಿ ಮಾಡುವ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.