ವೈರಲ್ ವೀಡಿಯೋ ನೋಡಿ ದಂಗಾದ ನೆಟ್ಟಿಗರು: ಒಣಗಿದ ಮರದಲ್ಲಿ ಇಂತಹ ಅದ್ಭುತ ಕಲಾಕೃತಿ??

Entertainment Featured-Articles News Viral Video

ಈ ಜಗತ್ತಿನಲ್ಲಿ ಅದೆಷ್ಟೋ ಜನ ಅದ್ಭುತ ಕಲಾವಿದರು, ವಿಶೇಷ ಪಾಂಡಿತ್ಯವುಳ್ಳವರು ಇದ್ದಾರೆ. ಇಂದು ಸಾಮಾಜಿಕ ಜಾಲತಾಣಗಳ ಕಾರಣದಿಂದಾಗಿ ಇಂತಹ ಅದ್ಭುತವಾದ ಕಲಾವಿದರು ಮಾಡುವ ವಿಸ್ಮಯ ಹುಟ್ಟಿಸುವ ಕಾರ್ಯಗಳು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿರುತ್ತವೆ. ಹಿಂದೆ ಪ್ರತಿಭೆಯ ಪ್ರದರ್ಶನಕ್ಕಾಗಿ ಪರದಾಡಬೇಕಿತ್ತು. ಆದರೆ ಇಂದು ಕಾಲ ಬದಲಾಗಿದೆ. ಪ್ರತಿಭಾವಂತರು, ಕಲಾವಿದರು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಅವಕಾಶಕ್ಕಾಗಿ ಕಾಯಬೇಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅನೇಕ ಅವಕಾಶಗಳು ಇವೆ.

ಕೆಲವರು ಹಾಡಿನಲ್ಲಿ , ಕೆಲವರು ಡ್ಯಾನ್ಸ್ ನಲ್ಲಿ, ಕೆಲವರು ಚಿತ್ರಕಲೆಯಲ್ಲಿ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೊಂದಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಿದಾಗ ನೆಟ್ಟಿಗರು ಅದನ್ನು ನೋಡಿ ಅಚ್ಚರಿ ಪಡುತ್ತಾರೆ. ಹ್ಯಾಟ್ಸಾಫ್ ಹೇಳುತ್ತಾರೆ. ಈಗ ಹೊಸದೊಂದು ವೀಡಿಯೋ ವೈರಲ್ ಆಗಿ ಸಂಚಲನವನ್ನು ಸೃಷ್ಟಿಸುತ್ತಲಿದ್ದು, ವೀಡಿಯೋದಲ್ಲಿ ಕಲಾಕಾರನೊಬ್ಬರ ಅದ್ಭುತ ಪ್ರತಿಭೆಯನ್ನು ನೋಡಿದ ನೆಟ್ಟಿಗರು ಕಣ್ಣರಳಿಸಿದ್ದಾರೆ, ವಾವ್ ಎಂತಹ ವಿಸ್ಮಯ ಎಂದು ಉದ್ಗಾರವನ್ನು ತೆಗೆಯುತ್ತಿದ್ದಾರೆ.

ಹೌದು, ವೀಡಿಯೋವನ್ನು ನೋಡಿದರೆ ನೀವು ಇದನ್ನು ಅದ್ಭುತ ಎನ್ನದೇ ಇರಲಾರಿರಿ. ವೀಡಿಯೋದಲ್ಲಿ ಒಬ್ಬ ವ್ಯಕ್ತಿಯು ಒಣಗಿ ಹೋದ ಮರವೊಂದರಲ್ಲಿ ಏನೋ ಹೊಸದನ್ನು ಅರಳಿಸುವ ಪ್ರಯತ್ನವನ್ನು ಮಾಡುತ್ತಿರುವುದನ್ನು ನಾವು ನೋಡಬಹುದು. ಅನಂತರ ಅದನ್ನು ಕತ್ತರಿಸುತ್ತಾ ಅದಕ್ಕೊಂದು ರೂಪವನ್ನು ನೀಡುವ ಪ್ರಯತ್ನವನ್ನು ಮಾಡುವನು. ಕೊನೆಗೆ ಆ ಮರಕ್ಕೆ ಒಂದು ಅದ್ಭುತ ಆಕೃತಿಯನ್ನು ನೀಡಿ, ಅಂದವಾದ ಬೊಂಬೆಯನ್ನಾಗಿ ಪರವರ್ತಿಸುವುದನ್ನು ನಾವು ಈ ವೀಡಿಯೋದಲ್ಲಿ ನೋಡಬಹುದಾಗಿದೆ.

ಸಣ್ಣ, ಸಣ್ಣ ಸಲಕರಣೆಗಳನ್ನು ಬಳಸುವ ಮೂಲಕ ಒಂದು ಒಣಗಿದ ಮರವನ್ನು ಇಂತಹ ಅದ್ಭುತ ಕಲಾಕೃತಿಯನ್ನಾಗಿ ಪರಿವರ್ತಿಸುವುದು ಖಂಡಿತ ಸುಲಭವಾದ ಕೆಲಸವಲ್ಲ. ಈ ವೀಡಿಯೋ ನೋಡಿದ ನೆಟ್ಟಿಗರು ಆ ಕಲಾಕಾರನನ್ನು ಹೊಗಳಿಕೆಯಲ್ಲಿ ಮುಳುಗಿಸುತ್ತಿದ್ದಾರೆ. ಈಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ಅಪಾರವಾದ ಜನ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ ಹಾಗೂ ಜನಾಕರ್ಷಣೆಯಾಗಿ ಮಾರ್ಪಡುತ್ತಿದೆ.

ಇಂತಹ ಸುಂದರವಾದ ವೀಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅವರು ಶೀರ್ಷಿಕೆಯಲ್ಲಿ, “ಪ್ರತಿಯೊಬ್ಬ ಕಲಾಕಾರನ ಆಲೋಚನೆಯಲ್ಲಿ ಒಂದು ಕಲಾಖಂಡವೇ ಇರುತ್ತದೆ” ಎ‌ಂದು ಬರೆದುಕೊಂಡಿದ್ದಾರೆ. ಅಲ್ಲದೇ ಈ ವೀಡಿಯೋ ನೆಟ್ಟಿಗರ ಮನಸ್ಸು ಗೆದ್ದಿದೆ. ಇದೊಂದು ಅದ್ಭುತವಾದ ಸಹಜ ನೈಪುಣ್ಯ ಎಂದು ಕೆಲವರು ನೆಟ್ಟಿಗರು ಹೊಗಳಿದ್ದಾರೆ.‌ ಸಾವಿರಾರು ಜನರು ವೀಡಿಯೋ ವೀಕ್ಷಣೆ ಮಾಡಿ, ಲೈಕ್ ನೀಡಿದ್ದಾರೆ.‌

Leave a Reply

Your email address will not be published.