ಬಾಲಿವುಡ್ ನ ಖ್ಯಾತ ನಿರ್ಮಾಪಕ, ನಿರೂಪಕ ಆಗಿರುವ ಕರಣ್ ಜೋಹರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಕಾಫಿ ವಿತ್ ಕರಣ್ ಶೋ ತನ್ನದೇ ಆದ ರೀತಿಯಲ್ಲಿ ಪ್ರತಿ ಬಾರಿ ಸಹಾ ಸಾಕಷ್ಟು ಚರ್ಚೆಗಳಿಗೆ ಕಾರಣವಾಗುತ್ತದೆ. ಈ ಬಾರಿ ಕಾಫಿ ವಿತ್ ಕರಣ್ ಸೀಸನ್ 7 ಟಿವಿ ಬದಲಾಗಿ ಓಟಿಟಿಯಲ್ಲಿ ಎಂಟ್ರಿ ನೀಡಿದೆ. ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಪ್ರಸಾರ ಕಾಣುತ್ತಿರುವ ಶೋ ನಲ್ಲಿ ಈ ಬಾರಿ ಈಗಾಗಲೇ ಬಹಳಷ್ಟು ಜನ ಸೆಲೆಬ್ರಿಟಿಗಳು ಬಂದು ಸಖತ್ ಸದ್ದು ಮಾಡಿದ್ದಾರೆ. ಬಾಲಿವುಡ್ ಮತ್ತು ದಕ್ಷಿಣದ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಜಾನ್ವಿ ಕಪೂರ್, ಸಾರಾ ಆಲಿ ಖಾನ್, ರಣವೀರ್ ಸಿಂಗ್, ಅಕ್ಷಯ್ ಕುಮಾರ್, ನಟಿ ಸಮಂತಾ, ವಿಜಯ ದೇವರಕೊಂಡ, ಅಮೀರ್ ಖಾನ್, ವಿಕ್ಕಿ ಕೌಶಲ್, ಕರೀನಾ ಕಪೂರ್ ಹೀಗೆ ಬಹಳ ಮಂದಿ ಭಾಗಿಯಾಗಿದ್ದರು.
ಕರಣ್ ಜೋಹರ್ ಶೋ ಎಂದರೆ ಅಲ್ಲಿ ಸೆಲೆಬ್ರಿಟಿಗಳ ಸಾಕಷ್ಟು ವೈಯಕ್ತಿಕ ವಿಚಾರಗಳು ಬಹಿರಂಗವಾಗುವುದು ವಾಸ್ತವ. ಕರಣ್ ಜೋಹರ್ ಶೋ ನಲ್ಲಿ ಲವ್, ಬ್ರೇಕಪ್, ಸೆ ಕ್ಸ್ , ಡೇಟಿಂಗ್ ವಿಚಾರಗಳನ್ನು ಕೇಳುವುದು ಸಾಮಾನ್ಯ. ಇದಕ್ಕೆ ಕೆಲವು ಸೆಲೆಬ್ರಿಟಿಗಳು ಸಹಾ ಯಾವುದೇ ಮುಚ್ಚು ಮರೆಯಿಲ್ಲದೇ ಉತ್ತರವನ್ನು ನೀಡುವ ಮೂಲಕ ಸುದ್ದಿಯಾಗುತ್ತಾರೆ. ಈ ಬಾರಿ ವಿಶೇಷ ಎನ್ನುವಂತೆ ಹೊಸ ಸಂಚಿಕೆಗಾಗಿ ಶಾರೂಖ್ ಖಾನ್ ಪತ್ನಿ ಗೌರಿ ಖಾನ್, ಮಹೀಪ್ ಕಪೂರ್ ಮತ್ತು ಭಾವನಾ ಪಾಂಡೆ ಶೋ ಗೆ ಅತಿಥಿಗಳಾಗಿ ಆಗಮಿಸಿ ಕರಣ್ ಜೋಹರ್ ಶೋ ನಲ್ಲಿ ಸಾಕಷ್ಟು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಶಾರೂಖ್ ಪತ್ನಿ ಸೇರಿದಂತೆ ಉಳಿದ ಇಬ್ಬರೂ ಸೆಲೆಬ್ರಿಟಿಗಳು ಸಹಾ ತಮ್ಮ ತಮ್ಮ ಕುಟುಂಬದ ಸೀಕ್ರೇಟ್ ಗಳನ್ನು ಸಹಾ ಬಹಿರಂಗಪಡಿಸಿದ್ದಾರೆ. ಇನ್ನು ಶೋ ನಲ್ಲಿ ಕರಣ್ ಜೋಹರ್ ತನ್ನದೇ ಶೈಲಿಯಲ್ಲಿ ಪ್ರಶ್ನೆಗಳನ್ನು ಕೇಳುತ್ತಾ, ಗೌರಿ ಖಾನ್ ಅವರನ್ನು ನಿಮ್ಮ ಮಗಳು ಸುಹಾನಾ ಖಾನ್ ಗೆ ಡೇಟಿಂಗ್ ವಿಚಾರದಲ್ಲಿ ಯಾವ ಸಲಹೆಯನ್ನು ನೀಡಲು ಬಯಸುವಿರಿ ಎಂದು ಕೇಳಿದ್ದಾರೆ. ಕರಣ್ ಕೇಳಿದ ಪ್ರಶ್ನೆಗೆ ಗೌರಿ ಖಾನ್ ಕೊಟ್ಟ ಉತ್ತರ ನಿಜಕ್ಕೂ ಶಾಕಿಂಗ್ ಎನಿಸಿದೆ. ಏಕೆಂದರೆ ಗೌರಿ ಖಾನ್, ಒಟ್ಟಿಗೆ ಇಬ್ಬರು ಹುಡುಗರ ಜೊತೆ ಡೇಟಿಂಗ್ ಮಾಡಬೇಡ ಎನ್ನುವ ಸಲಹೆಯನ್ನು ನೀಡುವುದಾಗಿ ಹೇಳುವ ಮೂಲಕ ಅಚ್ಚರಿಯನ್ನು ಮೂಡಿಸಿದ್ದಾರೆ.