ಒಂದ್ಸಲ ಹಾಕಿದ್ದ ಡ್ರೆಸ್ ಮತ್ತೆ ರಿಪೀಟ್ ಆಗಿಲ್ವಂತೆ, ಮನೇಲಿದೆ 3 ಸಾವಿರ ಬಟ್ಟೆಗಳು: ನಟಿ ಭವ್ಯ ಗೌಡ
ಕನ್ನಡದ ಬಿಗ್ ಬಾಸ್ ಸೀಸನ್-8 ಮುಗಿಯುತ್ತಿದ್ದ ಹಾಗೆ ಬಿಗ್ ಬಾಸ್ ಅಭಿಮಾನಿಗಳಿಗೆ ಉಂಟಾಗುವ ಬೇಸರವನ್ನು ತಪ್ಪಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮಿನಿ ಸೀಸನ್ ಎನ್ನುವ ಹೊಸ ಕಾನ್ಸೆಪ್ಟ್ ಒಂದರ ಮೂಲಕ, ಧಾರಾವಾಹಿಗಳ ನಟ-ನಟಿಯರನ್ನು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿಸಿ ಅವರಿಂದ ಟಾಸ್ಕ್ ಗಳನ್ನು ಮಾಡಿಸಲಾಗುತ್ತಿದೆ. ವಾಹಿನಿ ಈ ಹೊಸ ಪ್ರಯತ್ನದ ಮೂಲಕ ಬಿಗ್ ಬಾಸ್ ವೀಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಮತ್ತಷ್ಟು ಮನರಂಜನೆಯನ್ನು ನೀಡುತ್ತಿದೆ. ಹೊಸ ಆಲೋಚನೆಯಿಂದ ಮೂಡಿ ಬರುತ್ತಿರುವ ಹೀಗೆ ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ ಕಿರುತೆರೆಯ ಜನಪ್ರಿಯ ಧಾರಾವಾಹಿ ಗೀತಾ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ಭವ್ಯ ಗೌಡ ಅವರು ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದ್ದಾರೆ. ಭವ್ಯ ಅವರು ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದ ಕೂಡಲೇ ನಡೆದಂತಹ ಒಂದು ಮಾತುಕತೆ ವೀಕ್ಷಕರಿಗೆ ಒಂದು ಶಾ ಕ್ ಖಂಡಿತ ನೀಡಿದೆ.
ಆರು ದಿನಗಳ ಕಾಲ ನಡೆಯಲಿರುವ ಮಿನಿ ಬಿಗ್ ಬಾಸ್ ಸೀಸನ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬಂದಂತಹ ನಟಿ ಭವ್ಯ ಅವರನ್ನು, ಎಲ್ಲರಿಗಿಂತ ಮೊದಲು ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದ್ದಂತಹ ಕನ್ನಡದ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಅವರು ಮಾತನಾಡಿಸುತ್ತಾ, ಭವ್ಯ ಅವರ ಕುರಿತಾಗಿ ಅವರ ಅಭಿಮಾನಿಗಳು ಹಾಗೂ ಕಿರುತೆರೆ ಪ್ರೇಕ್ಷಕರಿಗೆ ಗೊತ್ತಿಲ್ಲದಂತಹ ಒಂದು ಆಸಕ್ತಿಕರ ವಿಚಾರವನ್ನು ಹಂಚಿಕೊಂಡಿದ್ದಾರೆ. ಆ ಆಸಕ್ತಿಕರ ವಿಚಾರ ಏನು ಎನ್ನುವುದಾದರೆ ಗೀತಾ ಧಾರಾವಾಹಿಯಲ್ಲಿ ಭವ್ಯ ಅವರು ಒಂದು ದಿನ ತೊಟ್ಟ ಡ್ರೆಸ್ ಅನ್ನು ಮತ್ತೊಂದು ದಿನ ಹಾಕಿಲ್ಲ, ಅಥವಾ ಡ್ರೆಸ್ ರಿಪೀಟ್ ಮಾಡಲಾಗಿಲ್ಲ ಎನ್ನಲಾಗಿದೆ. ಈಗಾಗಲೇ ಅವರು ಸೀರಿಯಲ್ ನ 300 ಎಪಿಸೋಡ್ ಗಳ ಚಿತ್ರೀಕರಣವನ್ನು ಮುಗಿಸಿದ್ದಾರೆ. ಅಂದ ಮೇಲೆ ನಾವು ಈ ಅವಧಿಯಲ್ಲಿ ಭವ್ಯ ಅವರು ತೊಟ್ಟಿರುವ ಡ್ರೆಸ್ ಗಳ ಎಷ್ಟಿರಬಹುದು ಎಂದು ಊಹೆ ಮಾಡಬಹುದಾಗಿದೆ.
ಅಕುಲ್ ಬಾಲಾಜಿ ಅವರು ಭವ್ಯ ಅವರ ಬೆಲೆ ಎಷ್ಟು ಬಟ್ಟೆಗಳಿವೆ?? ಎನ್ನುವ ವಿಚಾರದ ಕುರಿತಾಗಿಯೂ ಪ್ರಶ್ನೆಯನ್ನು ಮಾಡಿದ್ದಾರೆ. ಭವ್ಯ ಅವರು ಅದಕ್ಕೆ ಉತ್ತರಿಸುತ್ತಾ, ಈಗಾಗಲೇ ನನ್ನ ಬಳಿ ಸುಮಾರು 3000 ಬಟ್ಟೆಗಳಿವೆ. ಮನೆಯಲ್ಲಿ ಎಲ್ಲಿ ನೋಡಿದರೂ ಬಟ್ಟೆಗಳೇ ಕಾಣಿಸುತ್ತವೆ. ನಮ್ಮಮ್ಮ ನೀನು ಇನ್ನು ಹೊಸಬಟ್ಟೆಯನ್ನು ತೊಂದರೆ ನಿನ್ನನ್ನೇ ಮನೆಯಿಂದ ಹೊರಗೆ ಹಾಕುತ್ತೇನೆ ಅಂದಿದ್ದಾರೆ. ಆದರೆ ಏನು ಮಾಡುವುದು ನನ್ನ ಕೆಲಸ ಹಾಗೆ ಇದೆ. ಬಟ್ಟೆಗಳು ಬೇಕಾಗುತ್ತದೆ ಎಂದು ಅಷ್ಟೊಂದು ಬಟ್ಟೆಗಳನ್ನು ಇಟ್ಟುಕೊಂಡಿರುವ ಕಾರಣ ಏನು ಎಂಬುದನ್ನು ನಟಿ ಭವ್ಯ ತಿಳಿಸಿದ್ದಾರೆ. ಇನ್ನು ಬಿಗ್ ಬಾಸ್ ಮಿನಿ ಸೀಸನ್ ಸಾಕಷ್ಟು ಸದ್ದು ಮಾಡಿದ್ದು, ಇದರ ಫಿನಾಲೆ ಕೂಡಾ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆಂದು ವಾಹಿನಿಯ ಹೆಡ್ ಪರಮೇಶ್ವರ ಗುಂಡ್ಕಲ್ ಅವರು ತಿಳಿಸಿದ್ದಾರೆ.