ಒಂದೊಳ್ಳೆ ಉದ್ದೇಶಕ್ಕಾಗಿ ಪ್ರಧಾನಿ ಕಛೇರಿಗೆ ಪತ್ರ ಬರೆದ ಜೊತೆ ಜೊತೆಯಲಿ ನಟ ಅನಿರುದ್ದ್!!

Entertainment Featured-Articles Movies News

ಕನ್ನಡ ಕಿರುತೆರೆಯಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ ಸ್ಯಾಂಡಲ್ವುಡ್ ನಟ ಅನಿರುದ್ಧ್ ಅವರು ಕೇವಲ ನಟನೆ ಮಾತ್ರವೇ ಅಲ್ಲದೇ ನಗರ ಹಾಗೂ ಗ್ರಾಮಗಳ ಸ್ವಚ್ಚತೆಯ ವಿಚಾರವಾಗಿ ಆಗಾಗ ಕೆಲವೊಂದು ಪೋಸ್ಟ್ ಗಳನ್ನು ಹಂಚಿಕೊಳ್ಳುವ ಮೂಲಕ ಜನರಲ್ಲಿ ಒಂದು ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇಂತಹ ಹಲವು ವಿಚಾರಗಳ ಬಗ್ಗೆ ಈಗಾಗಲೇ ಚರ್ಚಿಸಿದ್ದಾರೆ.

ಇದೀಗ ಅವರು ಒಂದು ಬಹು ಮುಖ್ಯವಾದ ವಿಚಾರವಾಗಿ ಪ್ರಧಾನ ಮಂತ್ರಿ ಕಛೇರಿಗೆ ಪತ್ರವೊಂದನ್ನು ಬರೆದಿದ್ದಾರೆ. ಅನಿರುದ್ಧ್ ಅವರು ತಮ್ಮ ಪತ್ರದ ಮೂಲಕ, ಸ್ವಚ್ಚತಾ, ಹಸಿರು ನಿರ್ವಹಣೆ, ನಗರಗಳ ಅಂದವನ್ನು ಕಾಪಾಡಿಕೊಳ್ಳುವುದು ಹಾಗೂ ರಕ್ಷಣೆಗೆ ಸಂಬಂಧಿಸಿದ ಹಾಗೆ ಪ್ರತ್ಯೇಕ ಸಚಿವಾಲಯವೊಂದನ್ನು ಆಯೋಜನೆ ಮಾಡಬೇಕೆಂದು, ಈ ಸಚಿವಾಲಯವು ಮೇಲೆ ತಿಳಿಸಿರುವ ವಿಚಾರವಾಗಿ ಕುರಿತಾಗಿ ತನ್ನ ಜವಾಬ್ದಾರಿ ತೆಗೆದುಕೊಂಡು, ಸಮಸ್ಯೆಗಳಿಗೆ ಒಂದು ಶಾಶ್ವತ ಪರಿಹಾರವನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.

ತಮ್ಮ ಪತ್ರದಲ್ಲಿ ಅವರು ಶೀಘ್ರ ಕ್ರಮಗಳನ್ನು ಸಚಿವಾಲಯ ತೆಗೆದುಕೊಳ್ಳಬೇಕು ಎಂದಿದ್ದಾರೆ. ಘನ ತ್ಯಾಜ್ಯ ವಿಲೇವಾರಿಯು ಪರಿಸರ ಮತ್ತು ಅರಣ್ಯ ಇಲಾಖೆಯ ಕಾರ್ಯವಾಗಿದ್ದು, ಆದರೆ ಸ್ಥಳೀಯ ಆಡಳಿತ ಸಂಸ್ಥೆಗಳು ಈ ವಿಚಾರವಾಗಿ ತೋರುತ್ತಿರುವ ಗಮನ ಸಮರ್ಪಕವಾಗಿಲ್ಲ. ಪತ್ರದಲ್ಲಿ ಅನಿರುದ್ಧ್ ಅವರು ತಾವೊಬ್ಬ ಬೆಂಗಳೂರು ಮೂಲದ ನಟ, ನಿರ್ದೇಶಕ, ಗಾಯಕ, ಬರಹಗಾರ, ಸಾಮಾಜಿಕ ಹೋರಾಟಗಾರ ಎಂದು ಪರಿಚಯಿಸಿಕೊಂಡಿದ್ದು ಸಮಸ್ಯೆಯ ಬಗ್ಗೆ ವಿವರಣೆಯನ್ನು ನೀಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಅವರು ಪತ್ರದಲ್ಲಿ ಬೆಂಗಳೂರು ನಗರದ ರಸ್ತೆಗಳಲ್ಲಿ ಕಸದ ವಿಲೇವಾರಿಯ ವಿಚಾರವಾಗಿ ಆಗಿರುವ ಸಮಸ್ಯೆ, ರಸ್ತೆಗಳು ಯಾವ ರೀತಿ ಕಸದಿಂದ ತುಂಬಿದೆ ಎನ್ನುವ ವಿಚಾರಗಳನ್ನು ಸಹಾ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೇ 2020 ನವೆಂಬರ್ ನಿಂದ ಸ್ವಚ್ಚತಾ ವಿಚಾರವಾಗಿ ತಾನು ಮಾಡುತ್ತಿರುವ ಕಾರ್ಯಗಳ ಬಗ್ಗೆ ಅವರು ಪ್ರಸ್ತಾಪವನ್ನು ಮಾಡಿದ್ದಾರೆ. ತಮ್ಮ ಸ್ವಚ್ಚತಾ ಅಭಿಯಾನದ ಸಾಧಕ ಬಾಧಕಗಳ ಕುರಿತಾಗಿಯೂ ಅವರು ಸಾಕಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಈ ಮೂಲಕ ಅನಿರುದ್ಧ್ ಅವರು ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ.

Leave a Reply

Your email address will not be published.