ಒಂದೇ ವಾರದಲ್ಲಿ ಇಷ್ಟೆಲ್ಲಾ ಆಗೋಯ್ತಾ? ಬಿಗ್ ಫೈಟ್ ನಲ್ಲಿ ಗೆದ್ದೋರು ಯಾರು? ತಲೆಕೆಳಗಾಯ್ತಾ ಊಹೆಗಳು??

Entertainment Featured-Articles News

ಕಿರುತೆರೆಯ ವಿಚಾರ ಬಂದಾಗಲೆಲ್ಲಾ ಪ್ರೇಕ್ಷಕರ ಮನಸ್ಸಿನಲ್ಲಿ, ಆಲೋಚನೆಯಲ್ಲಿ ಮೂಡುವ ಚಿತ್ರಣ ಎಂದರೆ ಅದು ಸೀರಿಯಲ್ ಗಳು, ಅನಂತರ ರಿಯಾಲಿಟಿ ಶೋ ಗಳು. ಕಿರುತೆರೆಯಲ್ಲಿ ಎಂತಹ ವೈವಿದ್ಯಮಯ ಕಾರ್ಯಕ್ರಮಗಳು ಬಂದರೂ ಸರಿಯೇ ಸೀರಿಯಲ್ ಗಳಿಗೆ ಇರುವ ಕ್ರೇಜ್ ಮಾತ್ರ ಸದಾ ಕಾಲ ಇದ್ದೇ ಇರುತ್ತದೆ. ಅದಕ್ಕೆ ಕಿರುತೆರೆಯ ಲೋಕದಲ್ಲಿ ಸಿಂಹ ಪಾಲು ಎನ್ನುವುದಾದರೆ ಅದು ಸೀರಿಯಲ್ ಗಳಿಗೆ ಹೋಗುತ್ತದೆ. ವಾರವೊಂದು ಕಳೆಯುವ ವೇಳೆಗೆ ಸೀರಿಯಲ್ ಪ್ರಿಯರಿಗೆ ಈ ವಾರ ಯಾವ ಸೀರಿಯಲ್ ಯಾವ ಸ್ಥಾನದಲ್ಲಿದೆ ಎನ್ನುವ ಕುತೂಹಲ ಮೂಡುತ್ತದೆ.

ವಿವಿಧ ವಾಹಿನಿಗಳಲ್ಲಿ ಪ್ರಸಾರವಾಗುವ ಸೀರಿಯಲ್ ಗಳು, ವೀಕ್ಷಕರ ಆದರಾಭಿಮಾನಗಳ ಆಧಾರದಲ್ಲಿ, ಹೆಚ್ಚು ವೀಕ್ಷಣೆಯ ಆಧಾರದಲ್ಲಿ ಪ್ರತಿ ವಾರ ಯಾವ ಸ್ಥಾನವನ್ನು ಪಡೆದಿವೆ ಎನ್ನುವುದನ್ನು ತಿಳಿದು, ಅದನ್ನು ಪ್ರಕಟ ಮಾಡಲಾಗುತ್ತದೆ. ಅದರಂತೆ ಈ ವಾರದ ಟಿವಿ ರೇಟಿಂಗ್ ರಿಪೋರ್ಟ್ ಹೊರ ಬಂದಿದ್ದು, ವೀಕ್ಷಕರು ಬಹಳ ಕುತೂಹಲದಿಂದ ಕಾಯುತ್ತಿದ್ದ, ‌ನಿರೀಕ್ಷಿಸುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಾಮಾನ್ಯವಾಗಿ ಸೀರಿಯಲ್ ಗಳ ಟಾಪ್ ಐದು ಸ್ಥಾನಗಳ ರೇಸ್ ನಲ್ಲಿ ಮೊದಲ ಸ್ಥಾನ ಬಿಟ್ಟು ಉಳಿದ ಸ್ಥಾನಗಳಲ್ಲಿ ಆಗಾಗ ಬದಲಾವಣೆ ಆಗುತ್ತಲೇ ಇರುತ್ತದೆ.‌

ಕಳೆದ ಎರಡು ವಾರಗಳಲ್ಲಿ ಟಾಪ್ ಐದನೇ ಸ್ಥಾನದಲ್ಲಿ ಆದ ಬದಲಾವಣೆಗಳು ಸಖತ್ ಸದ್ದು ಮಾಡಿತ್ತು. ಇದಕ್ಕೆ ಕಾರಣ ಸಾಮಾನ್ಯವಾಗಿ ಸದಾ ಟಾಪ್ ಐದು ಸ್ಥಾನಗಳಲ್ಲಿ ಜೀ ಕನ್ನಡದ ಸೀರಿಯಲ್ ಗಳೇ ಇರುತ್ತಿದ್ದವು. ಆದರೆ ಎರಡು ವಾರಗಳ ಹಿಂದೆ ಅದು ಬದಲಾಗಿತ್ತು. ಕಿರುತೆರೆಗೆ ಹೊಸ ಎಂಟ್ರಿ ನೀಡಿದ್ದ ರಾಮಾಚಾರಿ ಸೀರಿಯಲ್, ಮತ್ತೊಂದು ಜನಪ್ರಿಯ ಸೀರಿಯಲ್ ಸತ್ಯ ಅನ್ನು ಹಿಂದೆ ಹಾಕಿ ಟಾಪ್ ಐದನೇ ಸ್ಥಾನವನ್ನು ಪಡೆದಿತ್ತು. ಪ್ರೇಕ್ಷಕರು ಈ ಸೀರಿಯಲ್ ಟಾಪ್ ಒಂದು ಆಗುವಷ್ಟು ಚೆನ್ನಾಗಿದೆ ಎಂದಿದ್ದರು.

ಆರಂಭದಲ್ಲಿ ನಂಬರ್ ಒನ್ ಆಗಿದ್ದ ಸತ್ಯ ಸೀರಿಯಲ್ ಇತ್ತೀಚಿಗೆ ಒಂದೊಂದೇ ಸ್ಥಾನ ಕೆಳಗೆ ಬಂದು ಟಾಪ್ ಐದರಲ್ಲಿ ಇತ್ತು. ಆದರೆ ಯಾವಾಗ ಅದು ಟಾಪ್ ಐದರಲ್ಲೂ ಇಲ್ಲದೇ ರೇಸ್ ನಿಂದ ಹೊರ ಬಿತ್ತೋ ಆಗ ಸೀರಿಯಲ್ ಅಭಿಮಾನಿಗಳಿಗೆ ಇದು ನಿಜವಾಗಿಯೂ ಶಾಕಿಂಗ್ ಆಗಿತ್ತು. ಅದಾದ ನಂತರದ ವಾರದಲ್ಲಿ ಸಹಾ ಸತ್ಯ ಟಾಪ್ ಫೈವ್ ನಲ್ಲಿ ಸ್ಥಾನ ಪಡೆದಿರಲಿಲ್ಲ. ಏಕೆಂದರೆ ಪಾರು ಸೀರಿಯಲ್ ಕಳೆದ ವಾರ ಐದನೇ ಸ್ಥಾನವನ್ನು ಆಕ್ರಮಿಸಿಕೊಂಡಿತ್ತು. ಆದರೆ ಈ ಬಾರ ಮತ್ತೆ ಸ್ಥಾನಗಳ ಬದಲಾವಣೆ ಆಗಿದೆ.

ಈ ವಾರ ಮೊದಲ ಮೂರು ಸ್ಥಾನಗಳು ಎಂದಿನಂತೆ ಅನುಕ್ರಮವಾಗಿ ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ ಮತ್ತು ಹಿಟ್ಲರ್ ಕಲ್ಯಾಣ ಗಳ ಪಾಲಾಗಿದೆ. ನಾಲ್ಕನೇ ಸ್ಥಾನದಲ್ಲಿ ಜೊತೆ ಜೊತೆಯಲಿ ಇದೆ. ಸತ್ಯ ಸೀರಿಯಲ್ 6.6 ಟಿವಿಆರ್ ಪಡೆದು ರಾಮಾಚಾರಿ ಯನ್ನು ದಾಟಿ ಮತ್ತೆ ಟಾಪ್ ಐದನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದು, ಮತ್ತೆ ರೇಸ್ ಗೆ ಎಂಟ್ರಿ ನೀಡಿದೆ. ಇನ್ನು ಈ ವಾರ ಪಾರು ಆರನೇ ಸ್ಥಾನವನ್ನು ಪಡೆದಿದ್ದರೆ, ರಾಮಾಚಾರಿ ಏಳನೇ ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ. ಸತ್ಯ ಸೀರಿಯಲ್ ನಲ್ಲಿ ಹೊಸ ಟ್ವಿಸ್ಟ್ ಹಾಗೂ ಕಾರ್ತಿಕ್ ದಿವ್ಯ ಮದುವೆ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದೆ.

Leave a Reply

Your email address will not be published. Required fields are marked *