ಒಂದೇ ಒಂದು ರೂಪಾಯಿ ಸಂಭಾವನೆ ಕೂಡಾ ಪಡೆಯದೆ ಹೊಸ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್: ಅದರ ಹಿಂದಿದೆ ಒಂದು ಕಾರಣ

Entertainment Featured-Articles News
40 Views

ಬಾಲಿವುಡ್ ನ ಹಿರಿಯ ಮತ್ತು ದಿಗ್ಗನ ನಟ, ಭಾರತೀಯ ಸಿನಿಮಾ ರಂಗದ ಲೆಜೆಂಡರಿ ನಟ ಎಂದೆಲ್ಲಾ ಗೌರವಕ್ಕೆ ಪಾತ್ರವಾಗಿದ್ದಾರೆ ಬಿಗ್ ಬಿ ಅಮಿತಾಬ್ ಬಚ್ಚನ್. ಅಮಿತಾಬ್ ಬಚ್ಚನ್ ಅವರಿಗೆ ವಯಸ್ಸು ಏರಿದರೂ ಸಹಾ ಇಂದಿಗೂ ಅವರಿಗೆ ಬೇಡಿಕೆ ಕುಂದಿಲ್ಲ ಎನ್ನುವುದೇ ವಿಶೇಷ. ಸಿನಿಮಾ, ಜಾಹೀರಾತುಗಳಲ್ಲಿ ಅಮಿತಾಬ್ ಅವರಿಗೆ ವಿಶೇಷ ಅವಕಾಶಗಳು ಕೈ ಬೀಸಿ ಕರೆಯುತ್ತವೆ‌. ತನ್ನ 78 ನೇ ವಯಸ್ಸಿನಲ್ಲೂ ಸಹಾ ಬಹಳ ಹುಮ್ಮಸ್ಸಿನಿಂದ ಕೆಲಸ ಮಾಡುವ ಈ ನಟನಿಗೆ ಕೈ ತುಂಬಾ ಸಿನಿಮಾಗಳು ಇವೆ. ಒಂದಾದ ನಂತರ ಮತ್ತೊಂದು ಎನ್ನುವಂತೆ ಸಿನಿಮಾಗಳಲ್ಲಿ ತೊಡಗಿಕೊಳ್ಳುವ ಇವರ ಸಂಭಾವನೆ ಕೂಡಾ ದುಬಾರಿ ಎನ್ನುವುದು ವಾಸ್ತವ. ಅಮಿತಾಬ್ ಬಚ್ಚನ್ ಅವರ ಸಂಭಾವನೆ ಸಹಾ ಕೋಟಿಗಳ ಮೊತ್ತದಲ್ಲೇ ಇದೆ. ಆದರೆ ಇದೀಗ ಈ ನಟ ಹೊಸ ಸಿನಿಮಾವೊಂದಕ್ಕೆ ಒಂದು ರೂಪಾಯಿ ಸಂಭಾವನೆ ಪಡೆಯದೇ ನಟಿಸಿದ್ದಾರೆ ಎನ್ನುವುದು ಆಶ್ಚರ್ಯ ಮೂಡಿಸಿದೆ.

ಹೌದು ನಟ ಅಮಿತಾಬ್ ಬಚ್ಚನ್ ಅವರು ತಮ್ಮ ಹೊಸ ಸಿನಿಮಾ ಚಹರೆ ಗಾಗಿ ಒಂದು ರೂ. ಸಂಭಾವನೆ ಪಡೆದಿಲ್ಲವೆಂದು ಆ ಸಿನಿಮಾ ನಿರ್ಮಾಪಕ ಆನಂದ್ ಪಂಡಿತ್ ಅವರು ಮಾದ್ಯಮವೊಂದರ ಮುಂದೆ ವಿಚಾರಗಳನ್ನು ಹಂಚಿಕೊಂಡಿದ್ದಾರೆ.‌ ಅಮಿತಾಬ್ ಬಚ್ಚನ್ ಅವರಿಗೆ ಈ ಸಿನಿಮಾದ ಸ್ಕ್ರಿಪ್ಟ್ ಬಹಳ ಇಷ್ಟವಾಗಿ, ಈ ಸಿ‌ನಿಮಾದಲ್ಲಿ ಪಾತ್ರವನ್ನು ಮಾಡಲೇಬೇಕು ಎನ್ನುವ ಒಂದು ನಿರ್ಧಾರವನ್ನು ಮಾಡಿದ್ದರು, ಈ ಸಿನಿಮಾದ ಕಥೆ ಅವರ ಹೃದಯಕ್ಕೆ ಹತ್ತಿರವಾದ ಕಥೆ ಎನ್ನುವ ಕಾರಣಕ್ಕೆ ಅವರು ಯಾವುದೇ ರೀತಿಯ ಸಂಭಾವನೆಯ ಅಪೇಕ್ಷ ಇಲ್ಲದೇ, ಮೊದಲೇ ಸಂಭಾವನೆ ಬೇಡ ಎನ್ನುವ ವಿಚಾರ ತಿಳಿಸಿ ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ಹೇಳಿದ್ದಾರೆ ನಿರ್ಮಾಪಕರು.

ಅಲ್ಲದೇ ಸಿನಿಮಾದ ಹೊರಾಂಗಣ ಚಿತ್ರೀಕರಣಕ್ಕಾಗಿ ಯೂರೋಪ್ ಗೆ ಹೋದಂತಹ ಸಂದರ್ಭದಲ್ಲಿ ಸಹಾ ಅಮಿತಾಬ್ ಅವರು ಚಾರ್ಟರ್ ಫ್ಲೈಟ್ ನಲ್ಲಿ ಹೋಗಿದ್ದು, ಅಲ್ಲಿಂದ ಸಿನಿಮಾ ಶೂಟಿಂಗ್ ಸ್ಥಳಕ್ಕೆ ಹೋಗುವ, ಉಳಿದುಕೊಳ್ಳುವ, ಯಾವುದೇ ವಿಷಯದಲ್ಲೂ ಸಹಾ ನಿರ್ಮಾಪಕರ ಬಳಿ ಒಂದು ರೂಪಾಯಿ ಖರ್ಚು ಮಾಡಿಸದೇ ಎಲ್ಲಾ ಖರ್ಚನ್ನು ತಾನೇ ಭರಿಸಿದ್ದಾರೆ ಎಂದು ಚಹರೆ ಸಿನಿಮಾ ನಿರ್ಮಾಪಕರು ತಿಳಿಸಿದ್ದಾರೆ. ನಟ ಅಮಿತಾಬ್ ಬಚ್ಚನ್ ಅವರು ಸಂಭಾವನೆ ಪಡೆಯದೇ ಸಿನಿಮಾ ಮಾಡಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬ್ಲಾಕ್ ಸಿನಿಮಾದಲ್ಲಿ ನಟಿಸಲು ಸಹಾ ಅವರು ಸಂಭಾವನೆ ಪಡೆದಿರಲಿಲ್ಲ.

Leave a Reply

Your email address will not be published. Required fields are marked *