ಪುಷ್ಪ ಸಿನಿಮಾ ದೊಡ್ಡ ಹಿಟ್ ಆಗಿ ಸದ್ದು ಮಾಡಿರುವ ವಿಷಯ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಸಿನಿಮಾದ ಯಶಸ್ಸು ಒಂದೆಡೆಯಾದರೆ ಈ ಸಿನಿಮಾದಲ್ಲಿ ನಟಿ ಸಮಂತಾ ಹೆಜ್ಜೆ ಹಾಕಿ, ಸೊಂಟ ಬಳುಕಿಸಿರುವ ಐಟಂ ಹಾಡು ಇನ್ನೊಂದು ಹೊಸ ದಾಖಲೆಯನ್ನೇ ಬರೆದು, ತನ್ನದೇ ಆದ ಯಶಸ್ಸನ್ನು ಪಡೆದುಕೊಂಡು, ಯೂಟ್ಯೂಬ್ ನಲ್ಲೂ ಸಹಾ ಈ ಹಾಡು ಮಿಲಿಯನ್ ಗಟ್ಟಲೇ ವೀಕ್ಷಣೆಗಳನ್ನು ಪಡೆದುಕೊಂಡು ಟ್ರೆಂಡ್ ಸೃಷ್ಟಿಸಿತ್ತು. ಥಿಯೇಟರ್ ಗಳಲ್ಲೂ ಸಹಾ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು, ಆ ವೀಡಿಯೋ ಸಹಾ ವೈರಲ್ ಆಗಿತ್ತು.
ಈಗ ಈ ಹಾಡಿನ ಬಗ್ಗೆ ಇನ್ನೊಂದು ಆಸಕ್ತಿಕರ ವಿಷಯವೊಂದು ಹೊರ ಬಂದಿದೆ. ಸಮಂತಾ ಐಟಂ ಹಾಡಿಗೆ ಹೆಜ್ಜೆ ಹಾಕುತ್ತಾರೆ ಎಂದಾಗಲೇ ಕುತೂಹಲ ಹುಟ್ಟಿಸಿದ್ದ ಈ ಹಾಡು, ಅನಂತರ ಮಾಡಿದ್ದು ದೊಡ್ಡ ದಾಖಲೆ, ಆದರೆ ಈ ಹಾಡಿಗಾಗಿ ನಟಿ ಸಮಂತಾ ಪಡೆದಿರುವ ಸಂಭಾವನೆ ವಿಷಯವು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಈ ಹಾಡಿಗಾಗಿ ಸಮಂತಾ 1.50 ಕೋಟಿ ಸಂಭಾವನೆ ಪಡೆದಿದ್ದರು ಎಂದು ಸುದ್ದಿಯಾದಾಗಲೇ ಎಲ್ಲರೂ ಅಚ್ಚರಿ ಪಟ್ಟಿದ್ದರು.
ಆದರೆ ಈಗ ಹೊರ ಬಂದಿರುವ ವಿಷಯವು ಅಚ್ಚರಿ ಅಲ್ಲ, ಬದಲಿಗೆ ಶಾ ಕಿಂ ಗ್ ಆಗಿದೆ. ಸಮಂತಾ ಈ ಸಿನಿಮಾದಲ್ಲಿನ ತನ್ನ ಹಾಡಿಗಾಗಿ ಪಡೆದ ಸಂಭಾವನೆಯು ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆಗಿಂತ ಹೆಚ್ಚು ಎನ್ನುವ ವಿಷಯವೊಂದು ಹೊರ ಬಂದಿದ್ದು, ಎಲ್ಲರೂ ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳನ್ನು ಇಡುವಂತಾಗಿದೆ. ಹಾಗಾದರೆ ಸಮಂತಾ ಈ ಹಾಡಿಗಾಗಿ ಪಡೆದ ಸಂಭಾವನೆಯಾದರೂ ಎಷ್ಟು?? ತಿಳಿಯೋಣ ಬನ್ನಿ.
ಪುಷ್ಪ ಸಿನಿಮಾ ತಂಡದ ಸದಸ್ಯರೊಬ್ಬರು ಒಂದು ಮ್ಯಾಗಜೀನ್ ಗೆ ನೀಡಿರುವ ಸಂದರ್ಶನದಲ್ಲಿ ಇಂತಹುದೊಂದು ಮಾಹಿತಿಯನ್ನು ಹೊರಗಿಟ್ಟಿದ್ದಾರೆ ಎನ್ನಲಾಗಿದೆ. ಹೌದು, ಆರಂಭದಲ್ಲಿ ಈ ಹಾಡಿನ ಅವಕಾಶ ಬಂದಾಗ ಸಮಂತಾ ನೇರವಾಗಿ ಇದನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ. ಆದರೆ ಅನಂತರ ಸಿನಿಮಾ ನಿರ್ದೇಶಕ ಸುಕುಮಾರ್ ಹಾಗೂ ನಾಯಕ ಅಲ್ಲು ಅರ್ಜುನ್ ಇಬ್ಬರೂ ಸಹಾ ಅವರಿಗೆ ಈ ಹಾಡಿನಲ್ಲಿ ಹೆಜ್ಜೆ ಹಾಕಲು ಹೇಳಿದ ಮೇಲೆ ಸಮಂತಾ ಒಪ್ಪಿದ್ದರು.
ಇನ್ನು ತಂಡದ ಸದಸ್ಯರೊಬ್ಬರು ಹೇಳಿರುವ ಹಾಗೆ ಈ ಐಟಂ ಹಾಡಿಗಾಗಿ ಸಮಂತಾ ಅವರಿಗೆ ಬರೋಬ್ಬರಿ 5 ಕೋಟಿ ರೂ ಸಂಭಾವನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ನಾಯಕಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ನಾಯಕಿಯಾಗಿ ಪಡೆದಿರುವ ಸಂಭಾವನೆ ಸುಮಾರು ಎರಡೂವರೆ ಕೋಟಿ ಎನ್ನಲಾಗಿದೆ. ಇನ್ನು ಸಿನಿಮಾ ಬಿಡುಗಡೆ ನಂತರ ಸಮಂತಾ ಹಾಡು ಹುಟ್ಟಿಸಿದ ಸಂಚಲನ ಈಗ ಎಲ್ಲರಿಗೂ ತಿಳಿದೇ ಇದೆ. ಒಟ್ಟಾರೆ ನಾಯಕಿಯ ಸಂಭಾವನೆಯನ್ನು ಸಹಾ ಸಮಂತಾ ಬೀಟ್ ಮಾಡಿ ಮುಂದೆ ಹೋಗಿದ್ದಾರೆ.