ಒಂದು ವರ್ಷ ಸಂಸಾರ ಮಾಡಿದ್ದಷ್ಟೇ, ಈಗ ಕೋಟಿ ಕೋಟಿ ಪರಿಹಾರ ಪಾವತಿಸಿದ ಹಾಲಿವುಡ್ ಜೋಡಿ

Entertainment Featured-Articles Movies News

ಹಾಲಿವುಡ್ ನ ದಿ ಪೈರೆಟ್ಸ್ ಆಫ್ ದಿ ಕೆರಿಬಿಯನ್ ಸರಣಿ ಸಿನಿಮಾಗಳನ್ನು ನೋಡಿರುವವರಿಗೆ ಆ ಸಿನಿಮಾದಲ್ಲಿನ ಪ್ರಮುಖ ಪಾತ್ರ ಜ್ಯಾಕ್ ಸ್ಪಾರೋ‌ ವನ್ನು, ಆತನ ವೇಷ ಭೂಷಣ ಹಾಗೂ ಮಾತನಾಡುವ, ನಡೆದಾಡುವ ಸ್ಟೈಲ್ ಇದ್ಯಾವುದನ್ನೂ ಕೂಡಾ ಮರೆಯಲು ಸಾಧ್ಯವಿಲ್ಲ. ಆ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಪಡೆದವರು ಅಮೆರಿಕನ್ ನಟ ಜಾನಿ ಡೆಪ್. ಇನ್ನು ಜಾನಿ ಡೆಪ್ ಮತ್ತು ಅವರ ಮಾಜಿ ಪತ್ನಿ ಹಾಲಿವುಡ್ ನಟಿ ಅಂಬರ್ ಹರ್ಡ್ ಅವರ ನಡುವಿನ ಪ್ರಕರಣವೊಂದು ನಿನ್ನೆಯಷ್ಟೇ ಕೋರ್ಟ್ ನಲ್ಲಿ ಇತ್ಯರ್ಥ ಗೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯ ಸುದ್ದಿಯಾಗಿದೆ.

ಸತತ ಆರು ವಾರಗಳ ವಿಚಾರಣೆಯನ್ನು ನಡೆಸಿದ್ದ‌ ಅಮೆರಿಕಾದ ವರ್ಜೀನಿಯಾದ ಫೇರ್ ಪ್ಯಾಕ್ಸ್ ನಗರದ ಕೋರ್ಟ್ ತನ್ನ ತೀರ್ಪನ್ನು ಘೋಷಿಸಿದೆ. ಇದರಲ್ಲಿ ಜಾನಿ ಡೆಪ್ ಅವರಿಗೆ ಜಯವಾಗಿದೆ‌. ಜಾನಿ ಡೆಪ್ ಅವರು ತಮ್ಮ ಮಾಜಿ ಪತ್ನಿ ತಮ್ಮ ಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಕೋರ್ಟ್ ನಲ್ಲಿ ಆಕೆಯ ವಿ ರು ದ್ಧ ಮಾನಹಾನಿ ಮೊಕದ್ದಮೆಯನ್ನು ದಾಖಲು ಮಾಡಿದ್ದರು. ಈ ವಿಚಾರವು ಸಹಾ ದೊಡ್ಡ ಸುದ್ದಿಯಾಗಿತ್ತು. ಇನ್ನು ಇದರ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಜಾನಿ ಡೆಪ್ ಪರವಾಗಿ ತೀರ್ಪನ್ನು ನೀಡಿದೆ.

ಹೌದು, ವಿಚಾರಣೆಯಲ್ಲಿ ಅಂಬರ್ ಹರ್ಡ್ ಜಾನಿ ಡೆಪ್ ಅವರ ಮಾನಹಾನಿ ಮಾಡುವಂತಹ ಕೆಲಸ ಮಾಡಿದ್ದಾರೆನ್ನುವ ಸಾಕ್ಷ್ಯಾಧಾರಗಳ ಆಧಾರದಲ್ಲಿಯೇ ಕೋರ್ಟ್ ಜಾನಿ ಅವರ ಪರ ತೀರ್ಪು ನೀಡಿದೆ. ಕೋರ್ಟ್ ತನ್ನ ತೀರ್ಪಿನಲ್ಲಿ ಅಂಬರ್ ಹರ್ಡ್ ದೊಡ್ಡ ಮೊತ್ತದ ಪರಿಹಾರವನ್ನು ಜಾನಿ ಅವರಿಗೆ‌‌ ನೀಡಬೇಕೆಂದು ಹಾಗೂ ದಂಡವನ್ನು ಸಹಾ ಪಾವತಿ ಮಾಡಬೇಕೆಂದು ಆದೇಶ ನೀಡಿದ್ದು, ಈಗ ಅಂಬರ್ ಜಾನಿ ಡೆಪ್ ಅವರಿಗೆ ಬಹು ಕೋಟಿ ಮೊತ್ತದಲ್ಲಿ ಪರಿಹಾರ ನೀಡಬೇಕಾಗಿದೆ.

ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ಅಂಬರ್ ಹರ್ಡ್ ಜಾನಿ ಅವರಿಗೆ 15 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ಭಾರತೀಯ ಕರೆನ್ಸಿಯ ಪ್ರಕಾರ 116 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ನೀಡಬೇಕಾಗಿದೆ. ಇನ್ನು ಜಾನಿ ಡೆಪ್ ಅವರು ಸಹಾ ಅಂಬರ್ ಗೆ ಪರಿಹಾರವನ್ನು ನೀಡಬೇಕಾಗಿದ್ದು ಅದು 2 ಮಿಲಿಯನ್ ಡಾಲರ್ ಅಂದರೆ ಸುಮಾರು 15 ಕೋಟಿ ರೂಪಾಯಿಗಳಾಗಿದೆ.‌ ಒಟ್ಟಾರೆ ಒಂದು ವರ್ಷ‌‌ ಜೊತೆಗಿದ್ದ ಇವರೀಗ ಕೋಟಿ ಕೋಟಿ ಪರಿಹಾರ ನೀಡುವಂತಾಗಿದೆ.

Leave a Reply

Your email address will not be published.