ಒಂದು ಪೋಟೋ ಬದಲಿಸಿತು ಅದೃಷ್ಟ: ಮಾಡೆಲ್ ಆದ 60 ರ ವಯಸ್ಸಿನ ಈ ಕೂಲಿ ಕಾರ್ಮಿಕ!!

Entertainment Featured-Articles News Viral Video

ಅದೃಷ್ಟ ಖುಲಾಯಿಸಿದರೆ, ಹಣೆ ಬರಹ ಚೆನ್ನಾಗಿದ್ದಾರೆ ಒಬ್ಬ ವ್ಯಕ್ತಿಯ ಸ್ಥಾನ, ಗೌರವ ಎಲ್ಲಾ ಕೂಡಾ ಇರುಳು ಕಳೆದು ಹಗಲು ಆಗೋ ವೇಳೆಗೆ ಬದಲಾಗಬಹುದು. ಯಾರಿಗೆ ಅದೃಷ್ಟ ಎಲ್ಲಿ, ಯಾವಾಗ, ಹೇಗೆ ಒಲಿದು ಬರುತ್ತೆ ಅನ್ನೋದನ್ನು ಯಾರಿಂದಲೂ ಹೇಳೋಕೆ, ಊಹೆ ಮಾಡೋಕೆ ಖಂಡಿತ ಸಾಧ್ಯ ಇಲ್ಲ. ಅದೃಷ್ಟು ಬಂದು ಬೆನ್ನು ತಟ್ಟಿದ್ದರೆ ತಿರುಕ ಸಹಾ ಮಹಾರಾಜ ಆಗಬಹುದು. ಇಂತಹ ಅನೇಕ ನಿದರ್ಶನಗಳು ಸಹಾ ನಮ್ಮ ಮುಂದೆ ಈಗಾಗಲೇ ಸಾಕಷ್ಟು ಸಲ ಬಂದಿದೆ ಸಹಾ. ಸದ್ಯ ಅಂತದ್ದೇ ಒಂದು ಸುದ್ದಿ ಈಗ ಸಖತ್ ಸದ್ದು ಮಾಡಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಮಾಡೆಲ್ ಅಥವಾ ರೂಪದರ್ಶಿ ಆಗಬೇಕೆಂಬುದು ಅನೇಕ ಯುವಕ, ಯುವತಿಯರ ಕನಸಾಗಿರುತ್ತದೆ. ಮಾಡೆಲಿಂಗ್ ಜಗತ್ತಿನಲ್ಲಿ ತಾರೆಗಳಾಗಿ ಮಿಂಚುವ ಆಸೆಯಿಂದ ಅನೇಕರು ಅದಕ್ಕೆ ಅಗತ್ಯ ಇರುವ ತರಬೇತಿ, ದುಬಾರಿ ಫೋಟೋ ಶೂಟ್ ಹೀಗೆ ಏನೇನೋ ಹರ ಸಾಹಸ ಮಾಡುವುದುಂಟು. ಆದರೆ ಇವೆಲ್ಲವುಗಳ ನಂತರವೂ ಒಂದು ಸಣ್ಣ ಅವಕಾಶ ಸಿಗುವುದು ಸಹಾ ದೂರದ ಮಾತಾಗಿರುತ್ತದೆ. ಆದರೆ ಕೆಲವರಿಗೆ ಇದು ಯಾವುದೇ ಕಷ್ಟ ಪಡದೇ ಹೋದರೂ ಅದೃಷ್ಟದ ದೆಸೆಯಿಂದ ಒಲಿದು ಬರುತ್ತದೆ.

ಹೌದು, ಇದಕ್ಕೆ ನಿದರ್ಶನ ಎನ್ನುವಂತೆ ಕೇರಳದಲ್ಲಿ 60 ವರ್ಷ ವಯಸ್ಸಿನ ಒಬ್ಬ ದಿನಗೂಲಿ ಕಾರ್ಮಿಕ ಈಗ ಮಾಡೆಲ್ ಆಗುವ ಮೂಲಕ ಸುದ್ದಿಯಾಗಿದ್ದು, ಆತನ ಅದೃಷ್ಟ ಕಂಡು ನೆಟ್ಟಿಗರು ಸಹಾ ಅಚ್ಚರಿ ಯನ್ನು ವ್ಯಕ್ತಪಡಿಸಿದ್ದಾರೆ. ಕೇರಳದ ಕೋಯಿಕ್ಕೋಡ್ ನಲ್ಲಿ ಕೊಳಕಾದ ಲುಂಗಿ ಸುತ್ತಿಕೊಂಡು, ಹಳೇ ಶರ್ಟ್, ತಲೆಗೊಂದು ಟವೆಲ್ ಕಟ್ಟಿಕೊಂಡು ಸುತ್ತುತ್ತಿದ್ದ ಮಮ್ಮಿಕಾ ಎನ್ನುವ ಹೆಸರಿನ ದಿನಗೂಲಿ ಕಾರ್ಮಿಕ ಈಗ ಒಂದು ಸ್ಥಳೀಯ ಸಂಸ್ಥೆಗೆ ಮಾಡೆಲ್ ಆಗಿ ಪೋಸ್ ನೀಡಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಫೋಟೋಗ್ರಾಫರ್ ಶರೀಕ್ ವಯಲಾಲ್ ಮಮ್ಮಿಕಾ ಅವರ ಫೋಟೋಗಳನ್ನು ತೆಗೆದು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳು ಬಹಳ ಬೇಗ ವೈರಲ್ ಆಗಿ ಜನರ ಅಪಾರವಾದ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಅಲ್ಲದೇ ದಿನಗೂಲಿ ಕಾರ್ಮಿಕ, ಹಿರಿಯ ವಯಸ್ಸಿನ ಮಮ್ಮಿಕಾ ಅವರ ಮೇಕ್ ಓವರ್ ನೋಡಿ ಜನರು ಸಹಾ ಶಾ ಕ್ ಆಗಿದ್ದಾರೆ. ಮಮ್ಮಿಕಾ ಅವರ ಅದೃಷ್ಟ ಬದಲಾಗಿದ್ದು, ಅವರು ರಾತ್ರೋರಾತ್ರಿ ಮಾಡೆಲ್ ಆಗಿದ್ದು, ಅವರ ಫೋಟೋಗಳು ಈಗ ಭರ್ಜರಿ ವೈರಲ್ ಆಗುತ್ತಿದೆ.

Leave a Reply

Your email address will not be published.