ಪರ್ಮಿಷನ್ ಇಲ್ದೇ ಪೋಟೋ ಯಾಕೆ ತೆಗೆದೆ?? ಪಬ್ ನಲ್ಲಿ ಕಿರಿಕ್:ಕಿರಿಕ್ ಕೀರ್ತಿ ಮೇಲೆ ಹಲ್ಲೆ

Written by Soma Shekar

Updated on:

---Join Our Channel---

ಕಿರಿಕ್ ಕೀರ್ತಿ ಕನ್ನಡ ಕಿರುತೆರೆಯ ಲೋಕದಲ್ಲಿ ಒಂದು ಜನಪ್ರಿಯವಾದ ಹೆಸರು. ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಅವರು, ಕಿರುತೆರೆಯ ಶೋ ಗಳಲ್ಲಿ ನಿರೂಪಕನಾಗಿಯೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಬಿಗ್ ಬಾಸ್ ಅವರ ಜನಪ್ರಿಯತೆಯನ್ನು ದುಪ್ಪಟ್ಟು ಮಾಡಿತ್ತು. ಈ ಜನಪ್ರಿಯತೆಯಿಂದಾಗಿ ಅವರು ಸ್ಯಾಂಡಲ್ವುಡ್ ಗೂ ಸಹಾ ಎಂಟ್ರಿ ನೀಡಿದ್ದರು. ಈಗ ಕಿರಿಕ್ ಕೀರ್ತಿ ಅವರ ಮೇಲೆ ಪಬ್ ಒಂದರಲ್ಲಿ ಹಲ್ಲೆ ನಡೆದಿರುವ ವಿಚಾರ ದೊಡ್ಡ ಸುದ್ದಿಯಾಗಿದೆ.

ಗುರುವಾರ ತಡರಾತ್ರಿ 12 : 30 ರ ಸಮಯದಲ್ಲಿ ಸದಾಶಿವನಗರದ ಪಬ್ ಒಂದರಲ್ಲಿ ಕಿರಿಕ್ ಕೀರ್ತಿ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಕಿರಿಕ್ ಕೀರ್ತಿ ಅವರು ತಮ್ಮ ಸ್ನೇಹಿತರ ಜೊತೆಗೂಡಿ ಸದಾಶಿವನಗರದ ಪಬ್ ಗೆ ಆಗಮಿಸಿದ್ದರು ಎನ್ನಲಾಗಿದ್ದು, ಈ ವೇಳೆ ಅವರ ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ ವ್ಯಕ್ತಿಯ ಜೊತೆಗೆ ನಡೆದ ಗಲಾಟೆಯಲ್ಲಿ, ಆ ವ್ಯಕ್ತಿಯು ಬಾಟಲಿನಿಂದ ಕಿರಿಕ್ ಕೀರ್ತಿ ಅವರ ಮೇಲೆ ಹ ಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದ್ದು, ಸದಾಶಿವ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಬ್ ನಲ್ಲಿ ಕೀರ್ತಿ ಅವರ ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ ವ್ಯಕ್ತಿ ಕಿರಿಕ್ ಕೀರ್ತಿ ಅವರ ಫೋಟೋವನ್ನು ಕ್ಲಿಕ್ಕಿಸಿದ್ದರು. ಇದರಿಂದ ಕೋಪಗೊಂಡ ಕೀರ್ತಿ ಅವರು ಆತನನ್ನು ಬೈದು, ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಪಟ್ಟರು ಎನ್ನಲಾಗಿದೆ. ಈ ವೇಳೆ ಫೋಟೋ ತೆಗೆದ ವ್ಯಕ್ತಿಯು ಕ್ಷಮಾಪಣೆ ಕೇಳಿದರೂ ಸಹಾ ಕಿರಿಕ್ ಕೀರ್ತಿ ಅವರು ಆತನನ್ನು ಬೈಯ್ಯುವುದು ನಿಲ್ಲಿಸಿರಲಿಲ್ಲ ಎನ್ನಲಾಗಿದ್ದು, ಇದೇ ಕಾರಣದಿಂದ ಆತ ಬಿಯರ್ ಬಾಟಲಿನಿಂದ ಕಿರಿಕ್ ಕೀರ್ತಿ ಅವರ ಮೇಲೆ ಹ ಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಪೊಲೀಸ್ ಠಾಣೆಯಲ್ಲಿ ಈಗಾಗಲೇ ದೂರು ದಾಖಲಾಗಿದ್ದು, ಹಲ್ಲೆ ನಡೆಸಿದಂತಹ ವ್ಯಕ್ತಿಯ ಹುಡುಕಾಟ ನಡೆಯುತ್ತಿದೆ. ಬಿಗ್ ಬಾಸ್ ಹಾಗೂ ಕಿರುತೆರೆಯ ಶೋಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಕಿರಿಕ್ ಕೀರ್ತಿ ಅವರಿಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಫೋಟೋ ಕ್ಲಿಕ್ಕಿಸಿದವರು ಕೂಡಾ ಅವರ ಅಭಿಮಾನಿಯಾಗಿದ್ದರು ಎನ್ನಲಾಗಿದೆ. ಆದರೆ ಅನುಮತಿ ಇಲ್ಲದೇ ಫೋಟೊ ಕ್ಲಿಕ್ಕಿಸಿದ್ದು ಅವರ ಕೋಪಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.

Leave a Comment