ಒಂದು ದೃಶ್ಯಕ್ಕಾಗಿ ಆ ಕೆಲಸ ಮಾಡಿದ ಸಾಯಿ ಪಲ್ಲವಿ: ಅಸಲಿ ನ್ಯಾಷನಲ್ ಕ್ರಶ್ ನೀವೇ ರಶ್ಮಿಕಾ ಅಲ್ಲ ಎಂದ ಅಭಿಮಾನಿಗಳು
ದಕ್ಷಿಣ ಸಿನಿಮಾ ರಂಗದ ಪ್ರಖ್ಯಾತ ನಟಿ ಸಾಯಿ ಪಲ್ಲವಿ ಈಗ ಮತ್ತೊಮ್ಮೆ ಪ್ರಮುಖ ಸುದ್ದಿಯಲ್ಲಿದ್ದಾರೆ. ಪ್ರಸ್ತುತ ನಟಿ ಸಾಯಿ ಪಲ್ಲವಿ ಅವರ ಅಭಿಮಾನಿಗಳು ನಟಿಯ ಮುಂದಿನ ಸಿನಿಮಾ ವಿರಾಟ ಪರ್ವಂ ನ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ವಿರಾಟ ಪರ್ವಂ ಸಿನಿಮಾದ ಒಂದು ದೃಶ್ಯಕ್ಕಾಗಿ ನಟಿ ಸಾಯಿ ಪಲ್ಲವಿ ಅವರು ಎರಡು ದಿನ ಉಪವಾಸವಿದ್ದು, ಕ್ಯಾಮೆರಾ ಮುಂದೆ ನಟಿಸಿದ್ದರು ಎನ್ನಲಾಗಿದ್ದು, ಈ ವಿಚಾರ ತಿಳಿದ ನಟಿಯ ಅಭಿಮಾನಿಗಳು ಸಾಯಿ ಪಲ್ಲವಿ ಅವರ ವೃತ್ತಿ ಪರತೆಯನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಅಲ್ಲದೇ ಇದೇ ವೇಳೆ ಅಭಿಮಾನಿಗಳು ಹೇಳಿರುವ ಒಂದು ಮಾತು ರಶ್ಮಿಕಾ ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡುವಂತೆ ಆಗಿದೆ. ಇಷ್ಟಕ್ಕೂ ಸಾಯಿ ಪಲ್ಲವಿ ಅಭಿಮಾನಿಗಳು ಹೇಳಿದ್ದೇನು? ತಿಳಿಯೋಣ ಬನ್ನಿ.
ನಟಿ ಸಾಯಿಪಲ್ಲವಿ ಪ್ರತಿಭಾನ್ವಿತ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಿಕ್ಕದ ಪಾತ್ರಗಳನ್ನೆಲ್ಲಾ ಒಪ್ಪುವುದಿಲ್ಲ, ಆದರೆ ಒಪ್ಪಿಕೊಂಡ ಪಾತ್ರವನ್ನು ಮಾತ್ರ ಬಹಳ ಶ್ರದ್ಧೆಯಿಂದ ಮಾಡುತ್ತಾರೆ. ಪಾತ್ರವೇ ತಾನಾಗಿ ಆ ಪಾತ್ರಕ್ಕೆ ಜೀವ ತುಂಬುತ್ತಾರೆ. ನಟನೆ ಮತ್ತು ಡ್ಯಾನ್ಸ್ ವಿಚಾರದಲ್ಲಿ ನಟಿಯ ಕಡೆ ಯಾರೂ ಬೆರಳು ಮಾಡಿ ತೋರಿಸಲು ಸಹಾ ಅವಕಾಶ ನೀಡದಂತೆ ಲೀಲಾಜಾಲವಾಗಿ ನಟಿಸುವ ನಟಿಯ ಅಭಿಮಾನಿಗಳಿಗೆ ಸಾಯಿ ಪಲ್ಲವಿ ಅವರ ಬಗ್ಗೆ ವಿಶೇಷ ಅಭಿಮಾನವಿದೆ. ಅನ್ಯ ನಟಿಯರಿಗಿಂತ ವಿಭಿನ್ನವಾದ ಹಾದಿಯಲ್ಲಿ ನಡೆಯುತ್ತಿರುವ ಸಾಯಿ ಪಲ್ಲವಿ ಅವರು ಸ್ಟಾರ್ ನಟಿ ಕೂಡಾ ಹೌದು.
ನಟಿ ಸಾಯಿ ಪಲ್ಲವಿ ಅವರು ರಾಣಾ ದಗ್ಗು ಬಾಟಿ ಅವರು ವಿರಾಟ ಪರ್ವಂ ನಲ್ಲಿ ನ ಕ್ಸಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕೆ ಜೀವ ತುಂಬುವ ಸಲುವಾಗಿ ಎರಡು ದಿನಗಳ ಕಾಲ ನಟಿ ಉಪವಾಸವಿದ್ದು ದೃಶ್ಯವೊಂದರಲ್ಲಿ ನಟಿಸಿದ್ದರು. ಈ ವಿಷಯ ಸುದ್ದಿಯಾಗಿದ್ದು ಸಿನಿ ಪ್ರೇಮಿಗಳು ಹಾಗೂ ಅಭಿಮಾನಿಗಳ ಅಪಾರವಾದ ಮೆಚ್ಚುಗೆಗೆ ಪಾತ್ರವಾಗಿದೆ. ಅಭಿಮಾನಿಗಳು ನಟಿಯ ಈ ನಡೆಗೆ ಅವರನ್ನು ಹಾಡಿ ಹೊಗಳುತ್ತಿದ್ದಾರೆ.
ಚಿತ್ರದ ಒಂದು ದೃಶ್ಯಕ್ಕೆ ನ್ಯಾಯ ಒದಗಿಸಲು ಸಾಯಿ ಪಲ್ಲವಿ ಹೀಗೆ ಉಪವಾಸವಿದ್ದು ನಟಿಸಿದ್ದು ಸಹಜವಾಗಿಯೇ ಎಲ್ಲರ ಗಮನ ಸೆಳೆದಿದೆ. ಈ ವೇಳೆ ವಿಷಯ ತಿಳಿದ ನಟಿಯ ಅಭಿಮಾನಿಗಳು ಸಾಯಿ ಪಲ್ಲವಿ ಅವರನ್ನು ರಶ್ಮಿಕಾಗೆ ಹೋಲಿಕೆ ಮಾಡುತ್ತಾ, ನಿಜವಾದ ನ್ಯಾಷನಲ್ ಕ್ರಶ್ ಎಂದರೆ ನೀವೇ ಎಂದು ನಟಿ ಸಾಯಿ ಪಲ್ಲವಿ ಯನ್ನು ಹೊಗಳಿದ್ದಾರೆ. ಜೂನ್ 17 ಕ್ಕೆ ವಿರಾಟ ಪರ್ವಂ ತೆರೆಗೆ ಬರಲಿದ್ದು ಅಭಿಮಾನಿಗಳು ಸಿನಿಮಾ ನೋಡಲು ಕಾತರರಾಗಿದ್ದಾರೆ.