ಒಂದು ದೃಶ್ಯಕ್ಕಾಗಿ ಆದಿಪುರುಷ್ ಸಿನಿಮಾ ತಂಡ ಖರ್ಚು ಮಾಡಿದ ಮೊತ್ತ ನಿಜಕ್ಕೂ ಶಾಕಿಂಗ್!!

0 1

ದಕ್ಷಿಣ ಸಿನಿರಂಗದಲ್ಲಿ ಅದರಲ್ಲೂ ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟನಾಗಿರುವ ನಟ ಪ್ರಭಾಸ್ ಪ್ರಸ್ತುತ ಬೇರೆಲ್ಲಾ ನಟರಿಗಿಂತ ಹೆಚ್ಚು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಸಕ್ರಿಯವಾಗಿರುವ ಹಾಗೂ ಭಾರೀ ಮೊತ್ತದ ಸಂಭಾವನೆಯನ್ನು ಪಡೆಯುವ ನಟ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಬಾಹುಬಲಿ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಚಾರ್ಮ್ ಹೆಚ್ಚಿಸಿಕೊಂಡಿರುವ ಪ್ರಭಾಸ್ ವೈವಿದ್ಯಮಯ ಪಾತ್ರಗಳ ಮೂಲಕ ದೊಡ್ಡ ಬಜೆಟ್ ನ ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

ಪ್ರಭಾಸ್ ಅವರ ಕೈಯಲ್ಲಿ ಸದ್ಯಕ್ಕೆ ಆದಿಪುರುಷ್, ಸಲಾರ್, ಸ್ಪಿರಿಟ್, ಹಾಗೂ ಇನ್ನೂ ಹೆಸರಿಡದ ಸಿನಿಮಾವೊಂದು ಇದ್ದು, ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಉಳಿದ ಸಿನಿಮಾಗಳು ಸಹಾ ಚಿತ್ರೀಕರಣದ ಹಂತದಲ್ಲಿದ್ದು, ಪ್ರಭಾಸ್ ಬ್ಯುಸಿಯಾಗಿದ್ದಾರೆ. ಈಗ ಇವೆಲ್ಲವುಗಳ ನಡುವೆಯೇ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾದ ಬಗ್ಗೆ ಹೊಸ ವಿಷಯವೊಂದು ಹೊರ ಬಂದಿದ್ದು, ಎಲ್ಲರಲ್ಲೂ ಕುತೂಹಲವನ್ನು ಕೆರಳಿಸಿದೆ.

ಆದಿಪುರುಷ್ ಸಿನಿಮಾವನ್ನು ನಿರ್ದೇಶಕ ಓಂ ರಾವತ್ ಅವರು ನಿರ್ದೇಶನ ಮಾಡುತ್ತಿದ್ದು, ಇದರಲ್ಲಿ ನಟ ಪ್ರಭಾಸ್ ಅವರು ಶ್ರೀರಾಮನಾಗಿ, ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ. ಸಿನಿಮಾ ಬಹು ಕೋಟಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಈಗ ಇದೇ ಹಿನ್ನೆಲೆಯಲ್ಲಿ ಕಾಡಿನ ದೃಶ್ಯವೊಂದರ ಚಿತ್ರೀಕರಣಕ್ಕಾಗಿ ನಿರ್ಮಾಪಕರು ಬರೋಬ್ಬರಿ 60 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇದು ಸಿನಿಮಾದ ಶ್ರೀಮಂತಿಕೆಗೆ ಒಂದು ಉದಾಹರಣೆ ಆಗಿದೆ ಎನ್ನಲಾಗುತ್ತಿದೆ.

ಒಂದು ದೃಶ್ಯಕ್ಕಾಗಿ ಇಷ್ಟು ಖರ್ಚು ಮಾಡಿದರೆ ಪೂರ್ತಿ ಸಿನಿಮಾ ಯಾವ ಮಟ್ಟದಲ್ಲಿ ಅದ್ದೂರಿಯಾಗಿರಲಿದೆ ಎನ್ನುವುದನ್ನು ಊಹಿಸಬಹುದಾಗಿದೆ. ಇನ್ನು ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಕೂಡಾ ಅದ್ದೂರಿಯಾಗಿ ಹಾಗೂ ಅತ್ಯದ್ಭುತ ವಾಗಿ ನಿರ್ಮಾಣ ಮಾಡುವ ಸಲುವಾಗಿ, ಕ್ಲೈಮ್ಯಾಕ್ಸ್ ಅನ್ನು ವಿನ್ಯಾಸ ಮಾಡಲು ಬರೋಬ್ಬರಿ 50 VFX ಕಂಪನಿಗಳನ್ನು ಬಾಡಿಗೆಗೆ ಪಡೆದಿದೆ ಆದಿಪುರುಷ್ ಸಿನಿಮಾ ತಂಡ ಎನ್ನುವ ಸುದ್ದಿ ಕೂಡಾ ದೊಡ್ಡ ಸದ್ದನ್ನು ಮಾಡುತ್ತಿದೆ. ಒಟ್ಟಾರೆ ಆದಿಪುರುಷ್ ಸಿನಿಮಾ ಹೊಸ ಕುತೂಹಲವನ್ನು ಖಂಡಿತ ಮೂಡಿಸಿದೆ.

Leave A Reply

Your email address will not be published.