ಸೋಶಿಯಲ್ ಮೀಡಿಯಾಗಳಲ್ಲಿ ಪ್ರತಿ ದಿನ ಅನೇಕ ವಿಡಿಯೋಗಳು ಹೊಸದಾಗಿ ಸೇರ್ಪಡೆ ಆಗ್ತಾನೆ ಇರುತ್ತೆ. ಇದರಲ್ಲಿ ಒಂದಷ್ಟು ವೀಡಿಯೋಗಳು ಬಹಳ ಬೇಗ ವೈರಲ್ ಆಗುತ್ತದೆ. ವೈವಿದ್ಯಮಯ ಕ್ಯಾಟಗರಿಗಳ ನೂರಾರು ವೀಡಿಯೋಗಳು ದಿನವೊಂದಕ್ಕೆ ವೈರಲ್ ಆಗೋದು ಇತ್ತೀಚಿಗೆ ತೀರಾ ಸಾಮಾನ್ಯ ಎನ್ನುವ ಹಾಗಿದೆ. ಪ್ರಸ್ತುತ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಮೂರು ಜನ ಕಳ್ಳರ ಒಂದು ಫನ್ನಿ ವೀಡಿಯೋ ಎಲ್ಲರ ಗಮನವನ್ನು ಸೆಳೆಯುವ ಮೂಲಕ ವೈರಲ್ ಆಗುತ್ತಾ ಸಾಗಿದ್ದು, ಜನ ವೀಡಿಯೋ ನೋಡಿ ನಗುತ್ತಿದ್ದಾರೆ, ಕಳ್ಳರ ಪರದಾಟ ಕಂಡು ಅಯ್ಯೋ ಪಾಪಾ ಎಂದಿದ್ದಾರೆ.
ಕೆಲವೇ ಸೆಕೆಂಡುಗಳ ಈ ವೀಡಿಯೋವನ್ನು ನೋಡಿದಾಗ ಮೂರು ಜನ ಕಳ್ಳರು ಕತ್ತಲಿನಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಯೋಜನೆಯೊಂದನ್ನು ಸಿದ್ಧಪಡಿಸಿಕೊಂಡು ಬಂದು ಕಾರಿನಲ್ಲಿ ಕುಳಿತುಕೊಂಡಿದ್ದಾರೆ ಎನ್ನುವುದು ನಮಗೆ ಅರ್ಥವಾಗುತ್ತದೆ. ಕತ್ತಲಲ್ಲಿ ಕಳ್ಳತನ ಮಾಡಲು ಕಾರಿನಿಂದ ಹೊರ ಬರುವ ಕಳ್ಳನಿಗೆ ಅಲ್ಲೊಂದು ಕಟ್ಟಡದ ಗೋಡೆಯ ಮೇಲೆ ಹಾಕಿರುವ ಎಲ್ ಇ ಡಿ ಟಿವಿ ಕಾಣುತ್ತದೆ. ಅದನ್ನೇ ಕದಿಯುವ ನಿರ್ಧಾರ ಮಾಡುತ್ತಾರೆ ಕಳ್ಳರು. ಅದಾದ ನಂತರ ನಡೆದ ಘಟನೆ ನಿಜಕ್ಕೂ ನಕ್ಕು ನಗಿಸುತ್ತದೆ.
ಕಾರಿನಿಂದ ಹೊರಗೆ ಬಂದ ಮೊದಲ ಕಳ್ಳ ಗೋಡೆಯ ಮೇಲಿದ್ದ ಎಲ್ ಇ ಡಿ ಟಿವಿ ಯ ಬಳಿ ಬಂದು, ಅದನ್ನು ಗೋಡೆಯ ಮೇಲಿಂದ ತೆಗೆಯಲು ಬಹಳ ಪ್ರಯತ್ನವನ್ನು ಮಾಡುತ್ತಾನೆ. ಎಷ್ಟೆಲ್ಲಾ ಪ್ರಯತ್ನ ಮಾಡಿದರೂ, ಬಲ ಪ್ರಯೋಗಿಸದರೂ ಕೂಡಾ ಅವನಿಗೆ ಗೋಡೆಯ ಮೇಲಿದ್ದ ಟಿವಿ ಯನ್ನು ತೆಗೆಯಲು ಆಗುವುದೇ ಇಲ್ಲ. ಅದನ್ನು ಗಮನಿಸಿದ ಮತ್ತೊಬ್ಬ ಕಳ್ಳ ಅವನಿಗೆ ಸಹಾಯವನ್ನು ಮಾಡಲು ಬರುತ್ತಾನೆ. ಆದರೆ ಗೋಡೆಗೆ ಡಿಕ್ಕಿ ಹೊಡೆದು ಬೀಳುತ್ತಾನೆ.
ಅನಂತರ ಮೇಲೆದ್ದು, ಮೊದಲ ಕಳ್ಳನ ಬಳಿ ಬರುತ್ತಾನೆ. ಇಬ್ಬರೂ ಸೇರಿ ಟಿವಿ ಯನ್ನು ತೆಗೆಯುವ ಪ್ರಯತ್ನಕ್ಕೆ ಕೈ ಹಾಕುತ್ತಾರೆ. ಇಬ್ಬರೂ ಸೇರಿ ಹೇಗೋ ಭಾರೀ ಪ್ರಯತ್ನವನ್ನು ಮಾಡಿದ ನಂತರ ಟಿವಿ ಯನ್ನು ಗೋಡೆಯ ಮೇಲಿಂದ ತೆಗೆಯುತ್ತಾರೆ. ಮೂರನೆಯ ಕಳ್ಳ ಕಾರಿನ ಹಿಂದಿನ ಬಾಗಿಲು ತೆರೆದು ಟಿವಿ ಯನ್ನು ಕಾರಿನ ಒಳಗಡೆ ಇಡಲು ಸಿದ್ಧ ಮಾಡಿರುತ್ತಾನೆ. ಆದರೆ ಟಿವಿ ಯನ್ನು ಗೋಡೆಯ ಮೇಲಿಂದ ತೆಗೆದು ನಡೆದು ಬರುವಾಗಲೇ ಅದು ನೆಲಕ್ಕೆ ತಗುಲಿ ಮುರಿದು ಹೋಗುತ್ತದೆ. ಮೂವರು ಕಳ್ಳರ ಪ್ರಯತ್ನ ಅಲ್ಲಿಗೆ ಮಣ್ಣು ಮುಕ್ಕುತ್ತದೆ.
ವೈರಲ್ ಆಗಿರುವ ಈ ವೀಡಿಯೋವನ್ನು ಈಗಾಗಲೇ ಹದಿನೆಂಟು ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆಗಳನ್ನು ಮಾಡಿದ್ದಾರೆ. ಬಹಳಷ್ಟು ಜನರು ವೀಡಿಯೋಗೆ ಲೈಕ್ ಗಳನ್ನು ನೀಡಿದ್ದಾರೆ. ವೀಡಿಯೋ ನೋಡಿದ ಮಂದಿ ನಗಾಡುವ ಇಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ. ಅನೇಕ ಮಂದಿ ವೀಡಿಯೋ ನೋಡಿ ಬಹಳ ಕಾಮಿಡಿಯಾಗಿದೆ ವೀಡಿಯೋ, ವೀಡಿಯೋಗೆ ಹಾಕಿರುವ ಹಾಡು ಇನ್ನೂ ಚೆನ್ನಾಗಿದೆ ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡುವ ಮೂಲಕ ಮೆಚ್ಚುಗೆಯನ್ನು ಸೂಚಿಸಿದ್ದಾರೆ.