ಒಂದು, ಎರಡಲ್ಲ ಬರೋಬ್ಬರಿ 800 ಕೋಟಿ ಮೌಲ್ಯದ ಅರಮನೆ ಮರಳಿ ಪಡೆದ ನಟ ಸೈಫ್ ಅಲಿ ಖಾನ್

Written by Soma Shekar

Published on:

---Join Our Channel---

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರದ್ದು ನವಾಬರ ಕುಟುಂಬ ಎನ್ನುವ ವಿಷಯ ಬಹುತೇಕ ಅನೇಕರಿಗೆ ತಿಳಿದಿಲ್ಲ ಎನಿಸುತ್ತದೆ. ಸೈಫ್ ಅಲಿ ಖಾನ್ ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕ ಮಾತ್ರವೇ ಅಲ್ಲದೇ ಅವರು ಕೊನೆಯ ನವಾಬರಲ್ಲಿ ಒಬ್ಬರಾಗಿದ್ದರು. ನವಾಬರ ವಂಶಜರು ಎಂದ ಮೇಲೆ ಇವರ ಸಂಪತ್ತು ಸಹಜವಾಗಿಯೇ ಸಿಕ್ಕಾಪಟ್ಟೆ ಇರುತ್ತದೆ ಎಂದು ಊಹಿಸಿ ಬಿಡಬಹುದು. ಹೌದು ಪಟೌಡಿ ಮನೆತನದ ಆಸ್ತಿಗಳು, ಅರಮನೆ ಗಳು, ಕೋಟೆಗಳು, ಜಮೀನು ಉತ್ತರ ಭಾರತದ ಹಲವು ಕಡೆ ಇದೆ.

ನಟ ಸೈಫ್ ಅಲಿ ಖಾನ್ ತಮ್ಮ ತಂದೆಗೆ ಸಂಬಂಧಿಸಿದ್ದ ಒಂದು ಸುಮಾರು 800 ಕೋಟಿ ಬೆಲೆ ಬಾಳುವ ಕೈ ತಪ್ಪಿ ಹೋಗಬೇಕಾಗಿದ್ದ ಅರಮನೆಯನ್ನು ಮರಳಿ ತಮ್ಮದಾಗಿಸಿಕೊಂಡಿದ್ದಾರೆ. ಈ ಅರಮನೆಯನ್ನು ಮರಳಿ ಪಡೆಯಲು ಅವರು ಕಾನೂನು ಹೋರಾಟ ಮಾಡಿದ್ದು ಮಾತ್ರವೇ ಅಲ್ಲದೇ ದೊಡ್ಡ ಮೊತ್ತದ ಹಣವನ್ನು ಸಹಾ ಖರ್ಚು ಮಾಡಿದ್ದಾರೆ. ಹೌದು ಗುರುಗ್ರಾಮದಲ್ಲಿದ್ದ ಪಟೌಡಿ ಮನೆತನದ ಇಬ್ರಾಹಿಂ ಕೋಟೆಯ ಅರಮನೆಯನ್ನು ನಿಮ್ರಾನಾ‌ ಹೋಟೆಲ್ ಗೆ ಲೀಸ್ ಗೆ ನೀಡಲಾಗಿತ್ತು.

ಈ ಅರಮನೆ ನನಗೆ ವಂಶ ಪಾರಂಪರ್ಯವಾಗಿ ಬರಲಿಲ್ಲ, ಬದಲಾಗಿ ಮರಳಿ ವಾಪಸ್ಸು ಪಡೆಯಲು ಸೈಫ್ ಕಾನೂನಿನ ಮೂಲಕ ಮುಂದುವರೆದು, ಲೀಸ್ ಹಣವನ್ನು ಪಾವತಿಸಿ ಮರಳಿ ಪಡೆದಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸುಮಾರು ಹತ್ತು ಎಕರೆ ಜಮೀನಿನಲ್ಲಿ ಈ ಅರಮನೆ ಇದ್ದು, ಇದರಲ್ಲಿ ಒಟ್ಟು 150 ಕೋಣೆಗಳಿದ್ದು ವಿವಿಧ ಸೌಲಭ್ಯಗಳನ್ನು ಒಳಗೊಂಡಿದೆ.

ಬಿಲಿಯರ್ಡ್ಸ್ ಟೇಬಲ್ ರೂಂಗಳು, ಈಜುಕೊಳಗಳು, ಉದ್ಯಾನ ವನ, ಐಶಾರಾಮೀ ಪೀಠೋಪಕರಣಗಳು, ವಿಶಾಲವಾದ ಹಜಾರ ಹೀಗೆ ವೈಭವದಿಂದ ಕೂಡಿದ ಈ ಅರಮನೆಯ ಮೌಲ್ಯ ಸುಮಾರು 800 ಕೋಟಿ ರೂಪಾಯಿಗಳಾಗಿದೆ. ಈ ಮನೆಯು ಭಾರತದ ಇತಿಹಾಸದ ಒಂದು ಭಾಗವಾಗಿದೆ, ಇದರೊಂದಿಗೆ ಬಹಳಷ್ಟು ನೆನಪುಗಳಿವೆ ಎಂದು ಸೈಫ್ ಅಲಿ ಖಾನ್ ಅವರು ತಮ್ಮ ಅರಮನೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಈ ಮನೆಯಲ್ಲಿ ಬಾಲಿವುಡ್ ನ ಹಲವು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಸೈಫ್ ಅವರ ಕುಟುಂಬದ ಹಳೆಯ ಫೋಟೋಗಳು ಇಲ್ಲಿವೆ. ಅಲ್ಲದೇ ಇದು ತಮ್ಮ ಕುಟುಂಬಕ್ಕೆ ಬಹಳ ಪ್ರಮುಖವಾದ ಒಂದು ಅರಮನೆಯಾಗಿದೆ ಎಂದು ಸೈಫ್ ಹೇಳಿದ್ದಾರೆ. ಈ ಅರಮನೆಯನ್ನು ಮರಳಿ ಪಡೆಯಲು ದೊಡ್ಡ ಮೊತ್ತ ಖರ್ಚು ಮಾಡಿ ಪಡೆದಿದ್ದೇನೆ ಎಂದು ಸೈಫ್ ಹೇಳುವ ಮೂಲಕ ಅರಮನೆ ಮರಳಿ ಪಡೆದಿದ್ದಕ್ಕೆ ತೃಪ್ತಿ ಪಡುತ್ತಾರೆ.

ಸೈಫ್ ಅರಮನೆ ಮರಳಿ ಪಡೆದ ಮೇಲೆ ಅದನ್ನು ಸಿನಿಮಾಗಳ ಶೂಟಿಂಗ್ ಗೆ ಆಗಲೀ ಅಥವಾ ಹೋಟೇಲ್ ಆಗಿ ಪರಿವರ್ತನೆ ಮಾಡಲು ಆಲೋಚನೆಯನ್ನು ಮಾಡಿಲ್ಲ. ಅವರು ತಮ್ಮ ಪತ್ನಿ ಕರೀನಾ ಹಾಗೂ ಮಗನ ಜೊತೆ ಕಳೆದ ವರ್ಷ ಕೆಲವು ದಿನಗಳನ್ನು ಇದೇ ಅರಮನೆಯಲ್ಲಿ ಬಹಳ ಆನಂದದಿಂದ ಕಳೆದಿದ್ದರು. ಆ ಫೋಟೋ ಗಳು ವೈರಲ್ ಆಗಿ ಗಮನ ಸೆಳೆದಿದ್ದವು.

Leave a Comment