ಒಂಟಿ ಜೀವನಕ್ಕೆ ಬೈ ಹೇಳಿ ಸಪ್ತಪದಿ ತುಳಿಯಲು ಸಜ್ಜಾದ ಜೆಕೆ: ಇವರೇ ನೋಡಿ ಅವರ ಭಾವೀ ಪತ್ನಿ

Entertainment Featured-Articles Movies News

ಸ್ಯಾಂಡಲ್ವುಡ್ ಹಾಗೂ ಕನ್ನಡ ಕಿರುತೆರೆ ಎರಡರಲ್ಲೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಜೆಕೆ ಅಲಿಯಾಸ್ ಕಾರ್ತಿಕ್ ಜಯರಾಮ್ ಅವರು ಬಹುದಿನಗಳ ನಂತರ ಅವರ ಅಭಿಮಾನಿಗಳಿಗೆ ಒಂದು ಶುಭ ಸುದ್ದಿಯನ್ನು ನೀಡಿದ್ದಾರೆ. ನಟ ಜೆಕೆ ಅವರು ಶೀಘ್ರದಲ್ಲೇ ತಮ್ಮ ವೈವಾಹಿಕ ಜೀವನಕ್ಕೆ ಅಡಿಯಿಡುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಜನರ ಮನಸ್ಸನ್ನು ಗೆದ್ದಿದ್ದ ಜೆಕೆ ಅವರು ಸಿನಿಮಾ ರಂಗದಲ್ಲೂ ಕೂಡಾ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ

ಜೆಕೆ ಅವರನ್ನು ಸಹಜವಾಗಿಯೇ ಅವರ ಅಭಿಮಾನಿಗಳು ಹಾಗೂ ಮಾಧ್ಯಮಗಳು ಕೇಳುತ್ತಿದ್ದ ಮೊದಲ ಪ್ರಶ್ನೆಯೆಂದರೆ, ಯಾವಾಗ ಮದುವೆ ಆಗುತ್ತೀರಾ? ಎನ್ನುವುದೇ ಆಗಿತ್ತು. ಈಗ ಕಾರ್ತಿಕ್ ಜಯರಾಮ್ ಅವರು ಈ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ. ಶೀಘ್ರದಲ್ಲಿಯೇ ನಟ ಸಪ್ತಪದಿ ತುಳಿದು ಹೊಸ ಜೀವನಕ್ಕೆ ಅಡಿಯಿಡುತ್ತಿದ್ದಾರೆ. ಹಾಗಾದರೆ ನಾಟಕಕ್ಕೆ ಅವರು ಮದುವೆ ಆಗುತ್ತಿರುವ ಹುಡುಗಿ ಯಾರು? ಎನ್ನುವ ಕುತೂಹಲ ನಿಮ್ಮದಾದರೆ ಅದಕ್ಕೆ ಉತ್ತರ ಇಲ್ಲಿದೆ.

ಜೆಕೆ ಅವರು ಫ್ಯಾಶನ್ ಡಿಸೈನರ್ ಒಬ್ಬರನ್ನು ಮದುವೆ ಆಗುತ್ತಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅವರು ತಮ್ಮ ಭಾವಿ ಪತ್ನಿಯನ್ನು ತಮ್ಮ ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಜೆಕೆ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಅಪರ್ಣ ಎಂದು ಹೇಳಲಾಗಿದೆ. ಫ್ಯಾಷನ್ ಲೋಕದಲ್ಲಿ ಈಗಾಗಲೇ ಹೆಸರನ್ನು ಮಾಡಿರುವ ಅಪರ್ಣ ಅವರು ಬಹಳಷ್ಟು ಜನ ಮಾಡೆಲ್ ಗಳಿಕೆ ಹೊಸ ಫ್ಯಾಷನ್ ಡಿಸೈನ್ ಕೊಡುಗೆಗಳನ್ನು ಸಿದ್ಧಪಡಿಸಿದ್ದಾರೆ.

ಬಹಳಷ್ಟು ಜನ ಸೆಲೆಬ್ರಿಟಿಗಳಿಗೂ ಇವರು ಅಚ್ಚುಮೆಚ್ಚಿನ ಫ್ಯಾಶನ್ ಡಿಸೈನರ್ ಆಗಿದ್ದಾರೆ. ಅಪರ್ಣ ಸಮಂತ್ ಅವರೂ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಾವು ಮತ್ತು ಜೆಕೆ ಜೊತೆಯಲ್ಲಿ ಇರುವ ಫೋಟೋವನ್ನು ಹಂಚಿಕೊಂಡು ಲೈಫ್ ಲೈನ್ ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆ ಜೆಕೆ ಅವರ ಮದುವೆಯ ವಿಷಯ ಅವರ ಅಭಿಮಾನಿಗಳಿಗೆ ಖುಷಿಯನ್ನು ತಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಅವರ ಅಭಿಮಾನಿಗಳು ಶುಭಕೋರಿದ್ದಾರೆ.

Leave a Reply

Your email address will not be published.