ಒಂಟಿತನ ಬೋರ್, 5 ದಿನಗಳು ನನಗೆ ಮನರಂಜನೆ ನೀಡಿ: ನಟಿ ಖುಷ್ಬೂ ಹೀಗೆ ಟ್ವೀಟ್ ಮಾಡಿದ್ದೇಕೆ??
ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಸಿನಿಮಾ ಸೆಲೆಬ್ರಿಟಿಗಳು ಕೊರೊನಾ ಸೋಂಕಿನ ಬಲೆಗೆ ಸಾಲು ಸಾಲಾಗಿ ಬೀಳುತ್ತಿದ್ದಾರೆ. ಈಗಾಗಲೇ ಬಾಲಿವುಡ್ ನ ಹಲವು ಸೆಲೆಬ್ರಿಟಿಗಳಿಗೆ ಕೊರೊನಾ ಸೋಂಕು ತಗುಲಿ ಗುಣಮುಖರಾಗುತ್ತಿದ್ದಾರೆ. ಅದರ ಬೆನ್ನಲ್ಲೇ ದಕ್ಷಿಣದ ಸ್ಟಾರ್ ಗಳು ಕೂಡಾ ಒಬ್ಬರ ನಂತರ ಮತ್ತೊಬ್ಬರು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಸೆಲೆಬ್ರಿಟಿಗಳು ತಾವು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರೂ ಸಹಾ ಕೊರೊನಾ ಸೋಂಕು ತಗುಲಿದೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಹಾಕುವ ಪೋಸ್ಟ್ ಗಳನ್ನು ನೋಡಿ ಸಾಮಾನ್ಯ ಜನರಿಗೆ ಆತಂಕ ಉಂಟಾಗುತ್ತಿದೆ.
ಬಿಟೌನ್ ನಲ್ಲಿ ಏಕ್ತಾ ಕಪೂರ್, ಅರ್ಜುನ್ ಕಪೂರ್, ಸ್ವರಾ ಭಾಸ್ಕರ್, ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ, ಟಾಲಿವುಡ್ ನಲ್ಲಿ ಮಹೇಶ್ ಬಾಬು, ಮಂಚು ಮನೋಜ್,ತ್ರಿಶ, ಸತ್ಯರಾಜ್, ಸಂಗೀತ ನಿರ್ದೇಶಕ ತಮನ್, ಹಿರಿಯ ನಟ ರಾಜೇಂದ್ರ ಪ್ರಸಾದ್ ಹೀಗೆ ಸಾಲು ಸಾಲು ನಟ ನಟಿಯರು ಕೊರೊನಾ ತೆಕ್ಕೆಗೆ ಸಿಕ್ಕಿದ್ದಾರೆ. ಇನ್ನು ಕೆಲವೇ ದಿನಗಳ ಹಿಂದೆಯಷ್ಟೇ ನಟ ಕಮಲ ಹಾಸನ್ ಕೊರೊನಾ ದಿಂದ ಚೇತರಿಸಿಕೊಂಡಿದ್ದಾರೆ. ಈಗ ಹೊಸದಾಗಿ ಈ ಪಟ್ಟಿಗೆ ನಟಿ ಖುಷ್ಬೂ ಸೇರಿದ್ದಾರೆ.
ದಕ್ಷಿಣ ಸಿನಿ ರಂಗದ ಸ್ಟಾರ್ ನಟಿ ಖುಷ್ಬೂ ಟ್ವೀಟ್ ಮಾಡಿ, ಕೊನೆಗೂ ಬಂದೇ ಬಿಡ್ತು, ಕಳೆದ ಎರಡು ಅಲೆಗಳಿಂದ ಹೇಗೋ ತಪ್ಪಿಸಿಕೊಂಡಿದ್ದೆ ಆದರೆ ಕೊನೆಗೂ ಅದು ನನ್ನ ತಲುಪಿದೆ. ನಿನ್ನೆ ಸಂಜೆವರೆಗೂ ನನಗೆ ಯಾವುದೇ ರೋಗ ಲಕ್ಷಣ ಇರಲಿಲ್ಲ. ಅನಂತರ ಸ್ವಲ್ಪ ನೆಗಡಿ ಕಾಣಿಸಿಕೊಂಡಿತು. ಟೆಸ್ಟ್ ಮಾಡಿಸಿ ನೋಡಿದಾಗ ಪಾಸಿಟಿವ್ ಎಂದು ತಿಳಿದು ಬಂತು. ಪ್ರಸ್ತುತ ನಾನು ಐಸೋಲೇಷನ್ ನಲ್ಲಿ ಇದ್ದೇನೆ. ಒಂಟಿಯಾಗಿ ಇರುವುದು ಬೋರ್.
ಆದ್ದರಿಂದ ಮುಂದಿನ ಐದು ದಿನಗಳ ವರೆಗೆ ನನಗೆ ಮನರಂಜನೆ ನೀಡಿ ಎಂದು ಫನ್ನಿಯಾಗಿ ಖುಷ್ಬು ಟ್ವೀಟ್ ಮಾಡಿದ್ದಾರೆ. ಇನ್ನು ನಟಿ ಖುಷ್ಬು ಗೆ ಕೊರೊನಾ ಪಾಸಿಟಿವ್ ಎಂದು ತಿಳಿದ ಕೂಡಲೇ ಅವರ ಅಭಿಮಾನಿಗಳು ಆ ತಂ ಕ ಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಖುಷ್ಬೂ ಅಭಿಮಾನಿಗಳು ಟ್ವೀಟ್ ಮಾಡಿ ಬೇಗ ಚೇತರಿಸಿಕೊಳ್ಳಿ ಎಂಬುದಾಗಿ ಶುಭವನ್ನು ಹಾರೈಸಿದ್ದಾರೆ.