ಐಶ್ವರ್ಯ ರೈ ಅನ್ನು ಆಂಟಿ ಎಂದ, ಮಿಡ್ಲ್ ಫಿಂಗರ್ ತೋರಿಸಿದ್ದ ನಟಿ ಸೋನಂ ಕಪೂರ್ !!
ನೀರಜಾ ಸಿನಿಮಾ ಖ್ಯಾತಿಯ ನಟಿ ಸೋನಂ ಕಪೂರ್ ತಮ್ಮ ಜೀವನದ ಅತ್ಯುತ್ತಮ ಸಮಯವನ್ನು ಕಳೆಯುತ್ತಿದ್ದಾರೆ. ಶೀಘ್ರದಲ್ಲೇ ನೀರಜಾ ತಾಯ್ತತನದ ಸವಿಯನ್ನು ಅನುಭವಿಸಲು ಸಜ್ಜಾಗಿದ್ದಾರೆ. ಸೋನಂ ಕಪೂರ್ ಅವರು ಸಿನಿಮಾಗಳಿಂದ ಅಂತರವನ್ನು ಕಾಯ್ದುಕೊಂಡಿರುವರಾದರು ಈ ಹಿಂದೆ ಸೋನಂ ನಟಿಸಿದ ಸಿನಿಮಾಗಳಿಂದ ಮಾತ್ರವೇ ಅಲ್ಲದೇ ಕೆಲವೊಂದು ಬೋಲ್ಡ್ ಹೇಳಿಕೆಗಳನ್ನು ನೀಡುವ ಮೂಲಕ ತನ್ನ ಕೆಟ್ಟ ವರ್ತನೆಯ ಮೂಲಕವೂ ಸುದ್ದಿಯಾಗಿದ್ದುಂಟು. ಸೋನಂ ಕಪೂರ್ ಎಂದೂ ತಮ್ಮ ಮಾತಿಗೆ ಕಡಿವಾಣ ಹಾಕಿದವರಲ್ಲ.
ತನಗೆ ಮಾತನಾಡಲು ಅವಕಾಶ ಸಿಕ್ಕಾಗಲೆಲ್ಲಾ ಸಹಾ ಸೋನಂ ಕಪೂರ್ ಆ ಅವಕಾಶವನ್ನು ಭರ್ಜರಿಯಾಗಿ ಉಪಯೋಗ ಮಾಡಿಕೊಂಡ ಉದಾಹರಣೆಗಳು ಉಂಟು. ಅಲ್ಲದೇ ಈ ವೇಳೆ ಸೋನಂ ಕಪೂರ್ ಅವರು ಬಾಲಿವುಡ್ ನ ಜನಪ್ರಿಯ ಸ್ಟಾರ್ ಗಳ ಬಗ್ಗೆಯೇ ನಾಲಗೆ ಹರಿ ಬಿಟ್ಟು ವಿ ವಾ ದಗಳನ್ನು ಹುಟ್ಟು ಹಾಕಿದ್ದುಂಟು. ಹೀಗೆ ನಾಲಗೆ ಹರಿ ಬಿಟ್ಟ ಸಂದರ್ಭವೊಂದರಲ್ಲಿ ಸೋನಂ ಕಪೂರ್ ಅವರು ಬಾಲಿವುಡ್ ನ ಸ್ಟಾರ್ ನಟಿ, ಮಾಜಿ ಮಿಸ್ ವರ್ಲ್ಡ್ ಐಶ್ವರ್ಯ ರೈ ಬಗ್ಗೆ ಸಹಾ ಕೀಳಾಗಿ ಮಾತನಾಡಿದ್ದುಂಟು.
ನಟಿ ಸೋನಂ ಕಪೂರ್ ಫ್ಯಾಷನ್ ವಿಷಯದಲ್ಲಿ ಸಿಕ್ಕಾಪಟ್ಟೆ ಸದ್ದನ್ನು ಮಾಡಿದಂತಹ ನಟಿ. ಸೋನಂ ತಮ್ಮ ಫ್ಯಾಷನ್ ನಿಂದಾಗಿ ಹಲವು ಬ್ಯೂಟಿ ಬ್ರಾಂಡ್ ಗಳಿಗೆ ರಾಯಭಾರಿ ಸಹಾ ಆಗಿದ್ದರು. ಅಂತಹ ಒಂದು ಬ್ಯೂಟಿ ಬ್ರಾಂಡ್ ವಿಚಾರದಲ್ಲಿ ಒಂದೊಮ್ಮೆ ಸಂಭವಿಸಿದ ಬದಲಾವಣೆಯನ್ನು ಅರಗಿಸಿಕೊಳ್ಳಲಾಗದ ನಟಿ ಸೋನಂ ಕಪೂರ್ ತಮ್ಮ ಅಸಮಾಧಾನವನ್ನು ಐಶ್ವರ್ಯ ರೈ ಅವರ ಮೇಲೆ ಹೊರಹಾಕಿ ಕೆಲವೊಂದು ಕಟು ಶಬ್ಧಗಳನ್ನು ಆಡುವ ಮೂಲಕ ಸುದ್ದಿಯಾಗಿದ್ದರು.
ಹೌದು, ನಟಿ ಸೋನಂ ಕಪೂರ್ ರಾಯಭಾರಿಯಾಗಿದ್ದ ಒಂದು ಬ್ಯೂಟಿ ಪ್ರಾಡೆಕ್ಟ್ ನ ಜಾಹೀರಾತಿನಲ್ಲಿ ಕಂಪನಿಯು ಕೆಲವು ದಿನಗಳ ನಂತರ ಸೋನಂ ಕಪೂರ್ ಅವರ ಬದಲಾಗಿ ಆ ಜಾಗಕ್ಕೆ ನಟಿ ಐಶ್ವರ್ಯ ರೈ ಅವರನ್ನು ತಂದಿತ್ತು. ತನ್ನ ಜಾಗಕ್ಕೆ ಐಶ್ವರ್ಯ ರೈ ಬಂದ ಕೋಪದಲ್ಲಿ ಸೋನಂ ಒಂದು ಸುದ್ದಿಗೋಷ್ಠಿಯಲ್ಲಿ, ಐಶ್ವರ್ಯ ರೈ ಬೇರೊಂದು ತಲೆಮಾರಿಗೆ ಸೇರಿದ ಆಂಟಿ ಎಂದು ಹೇಳಿದ್ದರು. ಆದರೆ ಅನಂತರ ತಾನು ಹೇಳಿದ್ದು ಬೇರೊಂದು ಅರ್ಥದಲ್ಲಿ ಎಂದು ತೇಪೆ ಹಾಕುವ ಕೆಲಸವನ್ನು ಸಹಾ ಮಾಡಿದ್ದುಂಟು.
ಸೋನಂ ಕಪೂರ್ ಕೇವಕ ಐಶ್ವರ್ಯ ರೈ ಬಗ್ಗೆ ಮಾತ್ರವೇ ಅಲ್ಲದೇ ತಮ್ಮ ಒಂದು ಸಿನಿಮಾದ ದೃಶ್ಯಕ್ಕೆ ಸೆನ್ಸಾರ್ ಕತ್ತರಿ ಹಾಕಿದಾಗ, ಸೆನ್ಸಾರ್ ಗೆ ತಮ್ಮ ಮಧ್ಯದ ಬೆರಳು ತೋರಿಸಿದ್ದರು, ಅವರು ಇಷ್ಟ ಪಡಲಿ, ಪಡದೇ ಇರಲಿ ನನಗೆ ಸೆನ್ಸಾರ್ ಶಿಪ್ ಇಷ್ಟ ಇಲ್ಲ ಎಂದು ದರ್ಪದ ಮಾತು ಹೇಳಿ, ಮಧ್ಯದ ಬೆರಳು ತೋರಿಸುವುದು ಇಂದಿನ ತಲೆಮಾರಿದ ಸ್ಟೈಲ್ ಎನ್ನುವ ಮಾತನ್ನು ಹೇಳಿದ್ದರು. ಹೀಗೆ ಸೋನಂ ಮನಸ್ಸಿಗೆ ಬಂದದ್ದೆಲ್ಲಾ ಹೇಳಿ ವಿ ವಾ ದ ಹುಟ್ಟು ಹಾಕಿದ್ದುಂಟು.