ಐಶಾರಾಮೀ ಕಾರು ಖರೀದಿಸಿದ ಬಿಗ್ ಬಾಸ್ 7 ರ ವಿನ್ನರ್ ಶೈನ್ ಶೆಟ್ಟಿ: ಫೋಟೋ ಗಳು ವೈರಲ್

Written by Soma Shekar

Published on:

---Join Our Channel---

ಕನ್ನಡ ಬಿಗ್ ಬಾಸ್ ಸೀಸನ್ 7 ರಲ್ಲಿ ಅಪಾರ ಜನಪ್ರಿಯತೆಯನ್ನು ಮತ್ತು ಜನರ ಪ್ರೀತಿಯನ್ನು ಗಳಿಸಿ ಬಿಗ್ ಬಾಸ್ ವಿನ್ನರ್ ಆಗಿ ಸೀಸನ್ ಏಳರ ಟ್ರೋಫಿಯನ್ನು ಪಡೆದುಕೊಂಡವರು ಶೈನ್ ಶೆಟ್ಟಿ. ಬಹುಶಃ ಆ ಸೀಸನ್ ನಲ್ಲಿ ಶೈನ್ ಅವರಷ್ಟು ಶೈನ್ ಆದ ಮತ್ತೊಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಲ್ಲಿ ಇರಲಿಲ್ಲ ಎನ್ನಬಹುದು. ಬಿಗ್ ಬಾಸ್ ನಂತರ ಶೈನ್ ಶೆಟ್ಟಿ ಅವರು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡರು. ಸಿನಿಮಾಗಳಲ್ಲಿ ಅವರಿಗೆ ಅವಕಾಶ ಹುಡುಕಿಕೊಂಡು ಬಂದಿತ್ತು. ಮ್ಯೂಸಿಕ್ ಆಲ್ಬಂಗಳಲ್ಲಿ ಕಾಣಿಸಿಕೊಂಡರು. ಹೀಗೆ ಶೈನ್ ಶೆಟ್ಟಿ ಅವರು ತಮ್ಮದೇ ಆದಂತಹ ಒಂದು ದೊಡ್ಡ ಅಭಿಮಾನಿಗಳ ಬಳಗವನ್ನು ಕೂಡಾ ಪಡೆದುಕೊಂಡರು. ಲಾಕ್ ಡೌನ್ ವೇಳೆಯಲ್ಲಿ ಜನರಿಗೆ ಸಹಾಯ ಮಾಡುವ ಮೂಲಕ ಇನ್ನಷ್ಟು ಸುದ್ದಿಯಾದರು. ಅವರ ಕೆಲಸಗಳಿಗೆ ಜನರಿಂದ ಅಪಾರವಾದ ಮೆಚ್ಚುಗೆ ಹರಿದುಬಂದಿತ್ತು.
ಶೈನ್ ಶೆಟ್ಟಿಯವರು ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಜನಪ್ರಿಯವಾಗಿದ್ದಂತಹ ನಟ.

ಶೈನ್ ಅವರು ಸಿನಿಮಾಗಳಲ್ಲಿ ಒಂದು ಹೆಸರನ್ನು ಮಾಡಬೇಕೆನ್ನುವ ಪ್ರಯತ್ನದಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಅವರು ಅನಂತರ ರಸ್ತೆ ಬದಿಯಲ್ಲಿ ಫುಡ್ ಟ್ರಕ್ ನಡೆಸುತ್ತಿದ್ದದ್ದು ಎಲ್ಲರಿಗೂ ತಿಳಿದ ವಿಷಯ. ಬಿಗ್ ಬಾಸ್ ನಲ್ಲಿ ಅವರು ಈ ಎಲ್ಲಾ ವಿಚಾರಗಳನ್ನು ಹಂಚಿಕೊಂಡ ಮೇಲೆ ಅವರ ಸ್ವಾಭಿಮಾನಿ ಬದುಕನ್ನು ಕಂಡು ಜನ ಅವರ ಮೇಲೆ ಪ್ರೀತಿಯ ಮಳೆಯನ್ನೇ ಸುರಿಸಿದರು. ಬಿಗ್ ಬಾಸ್ ನಲ್ಲಿ ಅವರ ವ್ಯಕ್ತಿತ್ವ ಬಹಳಷ್ಟು ಜನರನ್ನು ಆಕರ್ಷಿಸಿತು. ಇದೆಲ್ಲದರ ಫಲವಾಗಿ ಸೀಸನ್ ಏಳರ ವಿನ್ನರ್ ಆದವರು ಶೈನ್ ಶೆಟ್ಟಿ. ಬಿಗ್ ಬಾಸ್ ಸೀಸನ್ ಏಳು ಕಳೆದು ಹೊಸ ಸೀಸನ್ ಕೂಡ ಮುಗಿದು, ಮಂಜು ಪಾವಗಡ ಸೀಸನ್ ಎಂಟರ ವಿನ್ನರ್ ಎನ್ನುವ ಘೋಷಣೆ ಆಯ್ತು. ಆದರೂ ಶೈನ್ ಶೆಟ್ಟಿ ಅವರ ಚಾರ್ಮ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ.

ಪ್ರಸ್ತುತ ಅವರು ಕನ್ನಡದ ಒಂದು ಡ್ಯಾನ್ಸಿಂಗ್ ರಿಯಾಲಿಟಿ ಶೋನ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಶೈನ್ ಶೆಟ್ಟಿ ಅವರು ದುಬಾರಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಹೌದು ಶೈನ್ ಅವರು ಬಿಎಂಡಬ್ಲ್ಯೂ ಕಾರು ಖರೀದಿ ಮಾಡಿದ್ದು, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಸಂತೋಷದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈಗ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಶೈನ್ ಶೆಟ್ಟಿ ಅವರು ತಮ್ಮ ಹೊಸ ಕಾರಿನೊಂದಿಗೆ, ತಾಯಿ ಮತ್ತು ತಮ್ಮನೊಂದಿಗೆ ಇರುವ ಫೋಟೋಗಳು ವೈರಲ್ ಆಗಿವೆ. ಹೊಸ ಕಾರಿನ ಜೊತೆಗೆ ಶೈನ್ ಅವರ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನೂ ಕೆಲವರು ಇಷ್ಟು ಬೇಗ ಇಂತಹ ಐಶಾರಾಮೀ ಕಾರನ್ನು ಕೊಳ್ಳುವುದು ಹೇಗೆ ?? ಎನ್ನುವ ಪ್ರಶ್ನೆಯನ್ನು ಮಾಡಿದ್ದಾರೆ.

Leave a Comment