ಐಟಂ ಸಾಂಗ್ ಗೆ ಬೇಷರತ್ತಾಗಿ ‘NO’ ಅಂದಿದ್ದ ಸಮಂತಾ ಮತ್ತೆ ಒಪ್ಪಿದಾದ್ರು ಏಕೆ? ಆ ಒಂದು ಉದಾಹರಣೆ ನೀಡಿ ಅವರನ್ನು ಒಪ್ಪಿಸಿದ್ದು ಹೇಗೆ??

Written by Soma Shekar

Published on:

---Join Our Channel---

ನಟಿ ಸಮಂತಾ ಮೊದಲ ಬಾರಿಗೆ ಹೆಜ್ಜೆ ಹಾಕಿರುವ ಪುಷ್ಪಾ ಸಿನಿಮಾದ ಐಟಂ ಸಾಂಗ್ ‘ಹೂಂ ಅಂಟಾವಾ ಮಾವ’ ಹಾಡಿಗೆ ಸಿನಿಮಾ ಬಿಡುಗಡೆಯ ನಂತರ ದೊಡ್ಡಮಟ್ಟದ ಪ್ರತಿಕ್ರಿಯೆಗಳು ಬರುತ್ತಿವೆ. ಈ ಹಾಡಿಗೆ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿದ್ದರೂ ಕೂಡಾ ಅದರಲ್ಲಿ ಹೆಚ್ಚಾಗಿ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಪುಷ್ಪಾ ಸಿನಿಮಾದ ಹಾಡು ಹೊಸದೊಂದು ಕ್ರೇಜ್ ಹುಟ್ಟು ಹಾಕಿದೆ. ಸಮಂತಾ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂದಾಗಲೇ ಸೋಶಿಯಲ್ ಮೀಡಿಯಾದಲ್ಲಿ ಒಂದು ಸಂಚಲನ ಸೃಷ್ಟಿಯಾಗಿತ್ತು, ಅದರ ಬಗ್ಗೆ ಕುತೂಹಲ ಕೆರಳಿತ್ತು. ಅದಕ್ಕೆ ಈಗ ಪ್ರತಿಕ್ರಿಯೆಗಳು ಸಿಗುತ್ತಿವೆ.

ಸ್ಯಾಮ್ ಹಿಂದೆಂದೂ ಕಾಣಿಸಿಕೊಳ್ಳದ ಹೊಸ ಅವತಾರದಲ್ಲಿ ಈ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಐಟಂ ನಂಬರ್ ಮಾಡಿದ್ದಕ್ಕಾಗಿ ಕೆಲವರು ಸಮಂತಾರನ್ನು ಹಾಡಿ ಹೊಗಳಿದರೆ, ಮತ್ತೆ ಕೆಲವರು ಅವರನ್ನು ದೂ ಷಿ ಸುತ್ತಿದ್ದಾರೆ. ಇತ್ತೀಚೆಗೆ ಈ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮಂತಾ, ಆ ಹಾಡಿನ ಸಂಗೀತಕ್ಕೆ ತಕ್ಕ ಹಾಗೆ ಹೆಜ್ಜೆಯನ್ನು ಹಾಕುವುದು ಸುಲಭವಾದ ಕೆಲಸವಾಗಿರಲಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಅಲ್ಲದೇ ಅದೊಂದು ಸವಾಲಾಗಿತ್ತು ಎನ್ನುವ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.

ಇದೇ ವೇಳೆ ಮತ್ತೊಂದು ಕಡೆ ಪುಷ್ಪ ಸಿನಿಮಾದ ನಿರ್ದೇಶಕ ಸುಕುಮಾರ್ ಅವರು ಕೂಡ ಈ ಹಾಡಿನ ಕುರಿತಾಗಿ ಒಂದು ವಿಶೇಷ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರು ಮಾತನಾಡುತ್ತಾ, ಸಮಂತಾಗೆ ಈ ವಿಶೇಷ ಹಾಡಿನ ಬಗ್ಗೆ ತಿಳಿಸಿದಾಗ ಆದರೂ ಖಡಾಖಂಡಿತವಾಗಿ ತಾನು ಈ ಹಾಡನಲ್ಲಿ ಹೆಜ್ಜೆ ಹಾಕುವುದಿಲ್ಲ ಎನ್ನುವ ಮಾತನ್ನು ಹೇಳಿದ್ದರು. ಆದರೆ ಸುಕುಮಾರ್ ರಂಗಸ್ಥಲಂ ಸಿನಿಮಾದಲ್ಲಿ ಪೂಜಾ ಹೆಗಡೆ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದನ್ನು ಉದಾಹರಣೆ ನೀಡಿ ಹೇಗೋ ಸಾಮಂತರನ್ನು ಒಪ್ಪಿಸುವಲ್ಲಿ ಯಶಸ್ಸಾದೆ ಎನ್ನುವ ಮಾತನ್ನು ಹೇಳಿದ್ದಾರೆ.

ಹಾಡಿನ ಬಗ್ಗೆ ಎಷ್ಟೇ ವಿ ವಾ ದಗಳು ಹಾಗೂ ಟೀಕೆಗಳು ಕೇಳಿ ಬರುತ್ತಿದ್ದರೂ ಸಹಾ ಸಿನಿಮಾ ಬಿಡುಗಡೆಯ ನಂತರ ಹಾಡಿನ ಬಗ್ಗೆ ಸಮಂತ ಡ್ಯಾನ್ಸ್ ಬಗ್ಗೆ ಮೆಚ್ಚುಗೆಗಳು ಹರಿದು ಬರುತ್ತಿರುವುದನ್ನು ಕಂಡು ಸಮಂತಾ ಥ್ರಿಲ್ಲಾಗಿದ್ದಾರೆ. ತನ್ನ ಮೊದಲ ಐಟಂ ಸಾಂಗ್ ಗೆ ಜನರಿಂದ ಇಷ್ಟು ದೊಡ್ಡ ಮಟ್ಟದ ಪ್ರತಿಕ್ರಿಯೆ ಕಂಡು ಖುಷಿ ಪಟ್ಟಿದ್ದಾರೆ. ಥಿಯೇಟರ್ ಗಳಲ್ಲಿ ಹಾಡಿನ ದೃಶ್ಯ ಬಂದಾಗ ಜನ ಹುಚ್ಚೆದ್ದು ಕುಣಿಯುತ್ತಿರುವ ವೀಡಿಯೋ ಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ.

Leave a Comment