ಏಳು ತಿಂಗಳ ಗರ್ಭಿಣಿ ಸಂಜನಾ ಗಲ್ರಾನಿಗೆ ಇದೆಂತ ಮಾನಸಿಕ ವೇದನೆ: ತನಗೆ ವೇದನೆ ನೀಡಿದವನ ಬಗ್ಗೆ ನಟಿ ಹೇಳಿದ್ದೇನು?

Entertainment Featured-Articles News

ನಟಿ ಸಂಜನಾ ಗಲ್ರಾನಿ ಆಗಾಗ ಯಾವುದಾದರೂ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ನಟಿ ಸಂಜನಾ ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಸಕ್ರಿಯವಾಗಿದ್ದು, ಆಗಾಗ ಕೆಲವು ವಿಶೇಷ ವಿಚಾರಗಳನ್ನು ಹಾಗೂ ವಿಷಯಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಏಳು ತಿಂಗಳ ಗರ್ಭಿಣಿ ಆಗಿರುವ ಸಂಜನಾ ಸಂತೋಷ, ನೆಮ್ಮದಿಯಿಂದ ದಿನಗಳನ್ನು ಕಳೆಯಬೇಕಾದ ಸಮಯದಲ್ಲೇ ಅವರಿಗೆ ಮಾನಸಿಕ ವೇದನೆಯೊಂದು ಕಾಡಿದ್ದು, ಈ ಬಗ್ಗೆ ಸಂಜನಾ ಮಾದ್ಯಮಗಳ ಮುಂದೆ ಬೇಸರ ಹೊರ ಹಾಕಿದ್ದಾರೆ.

ಫ್ಯಾಷನ್ ಐಕಾನ್ ಖ್ಯಾತಿಯ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆ್ಯಡಂ ಬಿದ್ದಪ್ಪ ವಿ ರು ದ್ಧ ನಟಿ ಸಂಜನಾ ಗಂಭೀರವಾದ ಆ ರೋ ಪ ವನ್ನು ಮಾಡಿದ್ದಾರೆ. ಈ ವಿಚಾರವಾಗಿ ಮಾದ್ಯಮಗಳ ಮುಂದೆ ಮಾತನಾಡುತ್ತಾ ಸಂಜನಾ, ಆತ ನನಗೆ ನೇರವಾಗಿ ಪರಿಚಯ ಸಹಾ ಇಲ್ಲ. ನಾನು ಆತನ ತಂದೆ ಪ್ರಸಾದ್ ಬಿದ್ದಪ್ಪ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ಅವರು ಬಹಳ ಒಳ್ಳೆಯವರು, ಆದರೆ ಈ ಹುಡುಗನಿಗೆ ಏನಾಗಿದೆ ಅನ್ನೋದು ನನಗೆ ಗೊತ್ತಿಲ್ಲ.

ರಾತ್ರಿಯೆಲ್ಲಾ ನನಗೆ ಅ ಶ್ಲೀ ಲ ಮೆಸೆಜ್ ಗಳನ್ನು ಮಾಡುವುದಲ್ಲದೇ, ತನ್ನೊಂದಿಗೆ ಚಾಟ್ ಮಾಡುವಂತೆ ಒತ್ತಾಯ ಮಾಡುತ್ತಾನೆ. ಅಲ್ಲದೇ ನಾನು ಅದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದರೆ, ನನ್ನನ್ನೇ ಮುಗಿಸಿ ಬಿಡುವೆ ಎನ್ನುವಂತೆ ಹೆ ದ ರಿಸುತ್ತಿದ್ದಾನೆ ಎಂದು ಸಂಜನಾ ಆ ರೋ ಪ ಮಾಡಿದ್ದು, ಇಂತಹ ಮಾನಸಿಕ ಕಿರಿಕಿರಿಯ ಕಾರಣದಿಂದಲೇ ತಾನು ಈಗಾಗಲೇ ಅನೇಕ ಬಾರಿ ಫೋನ್ ನಂಬರ್ ಅನ್ನು ಬದಲಿಸಿದ್ದಾಗಿಯೂ ಆಕೆ ಹೇಳಿದ್ದಾರೆ.

ಈಗ ಮತ್ತೆ ನಂಬರ್ ಬದಲಾಯಿಸಿದರೆ ಅದರಿಂದ ನನ್ನ ವೃತ್ತಿಗೆ ತೊಂದರೆಯಾಗುತ್ತದೆ, ಆದ್ದರಿಂದಲೇ ಇನ್ನು ಮುಂದೆ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಪ್ರಕರಣವನ್ನು ಅಂತ್ಯದವರೆಗೂ ತೆಗೆದುಕೊಂಡು ಹೋಗುತ್ತೇನೆ. ಏಳು ತಿಂಗಳ ಗರ್ಭಿಣಿಯಾಗಿರುವ ನನಗೆ ಮಾನಸಿಕ ತೊಂದರೆಯನ್ನು ನೀಡುವಂತಹ ಕೆಲಸಗಳು ನಡೆಯುತ್ತಿವೆ. ಪೋಲಿಸರ ಮೊರೆ ಹೋಗಲೇಬೇಕಾಗಿದೆ ಎಂದು ಸಂಜನಾ ಹೇಳಿದ್ದಾರೆ.

Leave a Reply

Your email address will not be published.