ಏಲಿಯನ್ ಗಳು ನನ್ನ ಅಪಹರಿಸಿ, ಬೇಡ ಎಂದರೂ ಹೀಗೆ ಮಾಡಿದರು!! ತನ್ನ ಅನುಭವದ ಕುರಿತು ಹೇಳಿ ಸಂಚಲನ ಸೃಷ್ಟಿಸಿದ ಮಹಿಳೆ

Entertainment Featured-Articles News
79 Views

ನಮ್ಮ ಬ್ರಹ್ಮಾಂಡದಲ್ಲಿ ಏಲಿಯನ್ ಗಳು ಅಥವಾ ಅನ್ಯ ಗ್ರಹ ವಾಸಿ ಗಳು ಇದೆಯೋ ಇಲ್ಲವೋ ಎನ್ನುವುದು ಇನ್ನೂ ಸಹಾ ದೃಢೀಕರಣವಾಗಿಲ್ಲ. ಆದರೂ ಸಹಾ ಏಲಿಯನ್ ಗಳ ಕುರಿತಾಗಿ ಆಗಾಗ ಹೊಸ ಹೊಸ ವಿಚಾರಗಳು ಸದ್ದು ಮಾಡುತ್ತವೆ. ಕೆಲವರು ತಾವು ಏಲಿಯನ್ ಗಳನ್ನು ನೋಡಿರುವುದಾಗಿಯೂ, ಮಾತನಾಡಿರುವುದಾಗಿಯೂ ಹೇಳುತ್ತಾರೆ. ಆದರೆ ಈಗ ಶೀರಾ ಲುಮೀರ ರೆಜೊಯಿಸ್ ಎನ್ನುವ ಮಹಿಳೆಯೊಬ್ಬರು ಹೇಳಿರುವ ವಿಚಾರ ಎಲ್ಲೆಡೆ ದೊಡ್ಡ ಸುದ್ದಿಯಾಗಿದೆ. ಅಲ್ಲದೇ ಈ ಮಹಿಳೆ ಹೇಳಿದ ವಿಚಾರ ಕುತೂಹಲವನ್ನು ಮೂಡಿಸಿದೆ.

ಹೌದು ಶೀರಾ ಲುಮೀರ ಹೇಳಿರುವ ವಿಚಾರ ಎಲ್ಲರ ಗಮನವನ್ನು ಸೆಳೆದಿದೆ. ಶೀರಾ ಏಲಿಯನ್ ಗಳು ತನ್ನ ದೇಹದಿಂದ ಮೂರು ಎಗ್ ಗಳನ್ನು ತೆಗೆದುಕೊಂಡು ಹೈ ಬ್ರಿಡ್ ಬೇಬಿ ಯನ್ನು ಸಿದ್ದಪಡಿಸುತ್ತಿದ್ದಾರೆ ಎಂದು ಹೇಳಿರುವುದು ಮಾತ್ರವೇ ಅಲ್ಲದೇ ಈ ವಿಚಾರವಾಗಿ ಕೆಲವು ಸಾಕ್ಷಿಗಳನ್ನು ಸಹಾ ನೀಡಿದ್ದಾರೆ. ಶೀರಾ ಏಲಿಯನ್ ಗಳು ತನ್ನನ್ನು 2018 ರಲ್ಲಿ ಅಪಹರಣ ಮಾಡಿದ್ದರು. ಏಲಿಯನ್ ಗಳು ತನ್ನ ಮನೆಗೆ ಬಂದಿದ್ದವು ಎಂದಿರುವ ಶೀರಾ ತಾನು ಬೇಡ ಎಂದರೂ ಸಹಾ ಅವು ತನ್ನಿಂದ ಮೂರು ಎಗ್ ಗಳನ್ನು ಬಲವಂತವಾಗಿ ಪಡೆದವು ಎಂದು ಹೇಳಿದ್ದಾರೆ.

ಶೀರಾ ಟಿಕ್ ಟಾಕ್ ನಲ್ಲಿ ಶೇರ್ ಮಾಡಿಕೊಂಡ ಈ ವೀಡಿಯೋ ನೋಡಿದ ಅನೇಕರು ಆಕೆಗೆ ಏಲಿಯನ್ ಗಳು ಅಪಹರಣ ಮಾಡಿದಾಗ ಆದ ಅನುಭವಗಳಲ್ಲಿ ಇನ್ನೂ ಏನೇನು ನೆನಪಿದೆ ಎಂದು ಪ್ರಶ್ನೆಗಳನ್ನು ಮಾಡಿದ್ದಾರೆ. ಶೀರಾ ಈ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಆ ಘಟನೆ ತಾನು ತನ್ನ ಜೀವನದಲ್ಲಿ ಎಂದೂ ಮರೆಯಲಾಗದ ಕ್ಷಣವಾಗಿತ್ತು ಎಂದಿದ್ದು, ಅಂದು ತಾನು ಕೋಣೆಯಲ್ಲಿ ಮಲಗಿದ್ದಾಗ ಏಲಿಯನ್ ಗಳು ಬಂದವು. ಆ ಎಲ್ಲಾ ಘಟನೆ ಅನಿರೀಕ್ಷಿತವಾಗಿ ನಡೆದು ಹೋದವು.

ಈ ಘಟನೆಯ ನಂತರ ನನ್ನ ದೇಹದಲ್ಲಿ ಹಲವು ಬದಲಾವಣೆಗಳಾಗಿವೆ. ಆ ಘಟನೆಯ ನಂತರ ನಾನು ಮತ್ತೆ ಚೇತರಿಸಿಕೊಳ್ಳಲು ಪ್ರಕೃತಿಯಲ್ಲಿ ಹೆಚ್ಚು ಸಮಯ ಕಳೆಯತೊಡಗಿದೆ. ನನ್ನ ಹೆಸರನ್ನು ಸಹಾ ಬದಲಿಸಿಕೊಂಡೆ. ಅಂದು ಏಲಿಯನ್ ಗಳು ಬಂದಿದ್ದು ಒಂದು ವಿಸ್ಮಯಕಾರಿ ಘಟನೆ ಎಂದು ಆಕೆ ತನ್ನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಶೀರಾ ಶೇರ್ ಮಾಡಿದ ವೀಡಿಯೋಗಳು ಹಾಗೂ ವಿಚಾರಗಳು ವೈರಲ್ ಆಗಿದೆ.

ಶೀರಾ ಶೇರ್ ಮಾಡಿದ ವಿಚಾರಗಳನ್ನು ಕೇಳಿದ ಮೇಲೆ ನೆಟ್ಟಗರು ಎರಡು ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಕೆಲವರು ಶೀರಾ ಹೇಳಿರುವುದು ಸುಳ್ಳು, ಕೇವಲ ಪ್ರಚಾರಕ್ಕಾಗಿ ಇಂತಹ ಸುಳ್ಳನ್ನು‌ ಹೇಳಿದ್ದಾರೆ ಎಂದರೆ ಇನ್ನೂ ಕೆಲವರು ಬ್ರಹ್ಮಾಂಡದಲ್ಲಿ ನಮಗೆ ತಿಳಿಯದ ಅನೇಕ ವಿಷಯಗಳಿದ್ದು ಅವುಗಳನ್ನು ಒಪ್ಪಿಕೊಳ್ಳಲು ಕಷ್ಟ ಎನಿಸಿದ ಮಾತ್ರಕ್ಕೆ ಅದನ್ನು ಸುಳ್ಳು ಎನ್ನ ಬಾರದು ಎನ್ನುವ ಮಾತನ್ನು ಸಹಾ ಹೇಳಿದ್ದಾರೆ.

Leave a Reply

Your email address will not be published. Required fields are marked *