ಏಲಿಯನ್ ಗಳು ಇವೆಯೆ? ನಗ್ನ ಚಿತ್ರ ಬಳಸಿ ಏಲಿಯನ್ ಗಳ ಪತ್ತೆಗೆ NASA ಹೆಜ್ಜೆ!!!

Entertainment Featured-Articles News Wonder

ಈ ಅನಂತ ವಿಶ್ವದಲ್ಲಿ ವಿಜ್ಞಾನಕ್ಕೆ ಮೀರಿದ ಅದೆಷ್ಟೋ ರಹಸ್ಯಗಳು, ವಿಸ್ಮಯ ಗಳು ಇವೆ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕಾದ ವಿಷಯಗಳಾಗಿದೆ. ಅಲ್ಲದೇ ಅಂತಹ ವಿಷಯಗಳು ನಮ್ಮ ಊಹೆಗೆ ಮೀರಿದ್ದು, ನಮ್ಮ ಆಲೋಚನೆಗಳಿಗೆ ಬಾರದ್ದು ಆಗಿರುತ್ತದೆ. ಅನಂತ ವಿಶ್ವದಲ್ಲಿ ಸೂಪರ್ ಪವರ್ ಗಳು ಸಹಾ ಅಡಗಿದ್ದು, ಅವುಗಳಲ್ಲಿ ಏಲಿಯನ್ ಅಥವಾ ಅನ್ಯ ಗ್ರಹ ವಾಸಿಗಳ ಅಸ್ತಿತ್ವವು ಸೇರಿದೆ. ಏಲಿಯೆನ್ಸ್ ಗಳ ವಿಚಾರ ಬಂದಾಗಲೆಲ್ಲಾ ಅದೊಂದು ಕುತೂಹಲವನ್ನು ಹುಟ್ಟಿಸುವ ರೋಚಕ ವಿಷಯವಾಗಿಯೇ ನಮ್ಮ ಕಣ್ಣ ಮುಂದೆ ಬರುತ್ತದೆ ಹಾಗೂ ಆಸಕ್ತಿಯನ್ನು ಕೆರಳಿಸುತ್ತದೆ.

ಇಂತಹ ಒಂದು ಕುತೂಹಲ ಹಾಗೂ ಆಸಕ್ತಿಯ ಕಾರಣದಿಂದಾಗಿಯೇ ದಶಕಗಳಿಂದಲೂ ಏಲಿಯನ್ ಗಳ ಅಸ್ತಿತ್ವವನ್ನು ಸಾಬೀತು ಪಡಿಸುವ ಯಾವುದೇ ನಿಖರವಾದ ಮಾಹಿತಿಗಳು, ಸೂಚನೆಗಳು ಅಥವಾ ಸಾಕ್ಷಿಗಳು ಸಿಗದೇ ಹೋದರೂ ಅನ್ವೇಷಣೆಗಳು ಮಾತ್ರ ನಿರಂತರವಾಗಿ ನಡೆಯುತ್ತಲೇ ಇದೆ. ಈಗ ಹೊಸದಾಗಿ ಏಲಿಯನ್ಸ್ ಗೆ ಸಂಬಂಧಿಸಿದ ಹೊಸ ಆಸಕ್ತಿಕರ ವಿಷಯವೊಂದು ಸುದ್ದಿಯಾಗಿದೆ. ಕ್ಷೀರಪಥ ( ಮಿಲ್ಕಿ ವೇ ಗೆಲಾಕ್ಸಿ ) ವನ್ನು ದಾಟಿ ಹೊರಕ್ಕೆ ಕೆಲವು ಫೋಟೋಗಳನ್ನು ಕಳುಹಿಸಲು ವಿಜ್ಞಾನಿಗಳು ಯೋಜನೆ ಸಿದ್ಧಪಡಿಸುತ್ತಿದ್ದಾರೆ.

ಹಲೋ ಎಂದು ಕೈ ಆಡಿಸುತ್ತಿರುವ ಪಿಕ್ಸಲೇಟೆಡ್ ಇಲ್ಯುಸ್ಟ್ರೇಷನ್ ನಿಂದ ಕೂಡಿದ ಮನುಷ್ಯರ ನಗ್ನ ಚಿತ್ರಗಳನ್ನು ಅಂತರಿಕ್ಷದೊಳಕ್ಕೆ ಕಳುಹಿಸಲು ನಾಸಾದ ವಿಜ್ಞಾನಿಗಳು ಆಲೋಚನೆಯನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಏಲಿಯನ್ ಗಳು ಇರುವುದೇ ಆದರೆ, ಅವು ಈ ಚಿತ್ರಗಳನ್ನು ನೋಡಿ ಅವುಗಳ ಹತ್ತಿರಕ್ಕೆ ಬರಬಹುದು, ಆಗ ಅವುಗಳ ಅಸ್ತಿತ್ವದ ಬಗ್ಗೆ ತಿಳಿಯಬಹುದು ಎನ್ನುವುದು ಸಂಶೋಧಕರ ವಿಚಾರವಾಗಿದೆ.

ಬೀಕಾನ್ ಇನ್ ದಿ ಗೆಲಾಕ್ಸಿ ಎನ್ನುವ ಪ್ರಾಜೆಕ್ಟ್ ನಲ್ಲಿ ಇಂತಹುದೊಂದು ಪ್ರಯತ್ನವನ್ನು ಮಾಡಲು ಸಜ್ಜಾಗುತ್ತಿದ್ದಾರೆ ವಿಜ್ಞಾನಿಗಳು ಎನ್ನಲಾಗಿದೆ. ಪಿಕ್ಸಲೇಟೆಡ್ ಇಲ್ಯೂಸ್ಟ್ರೇಷನ್ ಮಾತ್ರವೇ ಅಲ್ಲದೇ ಗುರುತ್ವಾಕರ್ಷಣ ಮತ್ತು ಡಿಎನ್ಎ ಇರುವ ಚಿತ್ರಗಳನ್ನು ಕೂಡಾ ಇದರಲ್ಲಿ ಸೇರಿಸಲಿದ್ದಾರೆ ಎನ್ನಲಾಗಿದೆ. ಬೈನರಿ ಕೋಡೆಡ್ ಸಂದೇಶವನ್ನು ಏಲಿಯನ್ ಗಳು ಅರ್ಥಮಾಡಿಕೊಳ್ಳುವ ಅವಕಾಶ ಇದೆ ಎಂದು ಭಾವಿಸಿದ್ದಾರೆ ವಿಜ್ಞಾನಿಗಳು.

Leave a Reply

Your email address will not be published.