ಮಾತೃಭೂಮಿಗೆ ಹೆಜ್ಜೆ ಇಟ್ಟೊಡನೆ ಎದುರಾದ ಸಂಕಷ್ಟ: ಹಾರ್ದಿಕ್ ಪಾಂಡ್ಯ ಬಳಿ ಇದ್ದ ದುಬಾರಿ ವಾಚ್ ಗಳ ಜಫ್ತಿ

Written by Soma Shekar

Updated on:

---Join Our Channel---

ಕ್ರಿಕೆಟ್ ಆಟಗಾರರು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆಯುವುದರೊಂದಿಗೆ ಕ್ರಿಕೆಟ್ ಮಾತ್ರವೇ ಅಲ್ಲದೇ ಸುಪ್ರಸಿದ್ಧ ಬ್ರಾಂಡ್ ಗಳ ರಾಯಭಾರಿಗಳಾಗಿ ಜಾಹೀರಾತುಗಳಲ್ಲಿ ಕೂಡಾ ಕಾಣಿಸಿಕೊಳ್ಳುವುದು ಸಹಜವಾಗಿದೆ. ಕ್ರಿಕೆಟ್ ಆಟಗಾರರು ಹೀಗೆ ಜಾಹೀರಾತುಗಳ ಮೂಲಕ ಸಹಾ ಕೋಟಿಗಳ ಮೊತ್ತದಲ್ಲಿ ಹಣವನ್ನು ಗಳಿಸುವುದು ಸಹಾ ಗೊತ್ತಿರುವ ವಿಷಯವೇ ಆಗಿದೆ. ಆದರೆ ಕೆಲವೊಮ್ಮೆ ಅವರ ಬಳಿ ಸಿಗುವ ದುಬಾರಿ ಬೆಲೆಯ ವಸ್ತುಗಳೇ ಅವರ ಪಾಲಿಗೆ ಸಂಕಷ್ಟಗಳನ್ನು ತಂದು ಹಾಕುವುದು ಕೂಡಾ ಸಾಮಾನ್ಯ ಎನ್ನುವಂತಾಗಿದೆ.

ಇದೀಗ ಅದೇ ಹಿನ್ನೆಲೆಯಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ಎರಡು ದುಬಾರಿ ವಾಚ್ ಗಳನ್ನು ಸೀಜ್ ಮಾಡಲಾಗಿದೆ. ಹೌದು,‌ ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ಬಳಿಯಿದ್ದ ಎರಡು ದುಬಾರಿ ವಾಚ್ ಗಳನ್ನು ಕಸ್ಟಮ್ಸ್ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಬಳಿ ಇದ್ದ ಈ ಎರಡೂ ವಾಚ್ ಗಳ ಬೆಲೆ ಬರೋಬ್ಬರಿ ಐದು ಕೋಟಿ ರೂಪಾಯಿಗಳ ಮೌಲ್ಯದ್ದು ಎಂದು ತಿಳಿದು ಬಂದಿದ್ದು, ಎಲ್ಲರ ಕುತೂಹಲವನ್ನು ಕೆರಳಿಸಿದೆ.

ವಿಶ್ವಕಪ್ ನಲ್ಲಿ ಸೋಲನ್ನು ಅನುಭವಿಸಿ ಭಾರತ ಕ್ರಿಕೆಟ್ ತಂಡದ ಕೆಲವು ಆಟಗಾರರು ಮತ್ತು ಹಾರ್ದಿಕ್ ಪಾಂಡ್ಯ ಭಾರತಕ್ಕೆ ಹಿಂದಿರುಗಿದ್ದಾರೆ. ಭಾನುವಾರ ಭಾರತಕ್ಕೆ ಆಗಮಿಸಿದ ವೇಳೆಯಲ್ಲಿ, ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಟಗಾರನ ತಪಾಸಣೆಯನ್ನು ನಡೆಸಿದ್ದ ಕಸ್ಟಮ್ಸ್ ಅಧಿಕಾರಿಗಳು ಅವರ ಬಳಿ ಇದ್ದ ಎರಡು ದುಬಾರಿ ಬೆಲೆಯ ವಾಚ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.‌ ಇನ್ನು ವಾಚ್ ಗಳನ್ನು ಸೀಜ್ ಮಾಡಿದ್ದೇಕೆ ಎನ್ನುವುದು ತಿಳಿಯೋಣ.

ಮಾಹಿತಿಗಳ ಪ್ರಕಾರ ಹಾರ್ದಿಕ್ ಪಾಂಡ್ಯ ವಾಚ್ ಗಳನ್ನು ತಮ್ಮ ಲಗೇಜ್ ನಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಆದರೆ ಅವರು ಲಗೇಜ್ ನಲ್ಲಿ ದುಬಾರಿ ಬೆಲೆಯ ವಾಚ್ ಗಳು ಇರುವ ಬಗ್ಗೆ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಅಲ್ಲದೇ ಅವರ ಬಳಿ ಈ ವಾಚ್ ಗಳಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಇಲ್ಲದ ಕಾರಣ ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ದುಬೈನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಮುಗಿಸಿಕೊಂಡು ಭಾರತಕ್ಕೆ ಮರಳಿ ಬಂದ ವೇಳೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಹಾರ್ದಿಕ್ ಪಾಂಡ್ಯ ಅವರ ಸಹೋದರ ಕೃನಾಲ್ ಪಾಂಡ್ಯ ರನ್ನು ಸಹಾ ಹೀಗೆ ವಶಕ್ಕೆ ಪಡೆಯಲಾಗಿತ್ತು ಹಾಗೂ ಆಗ ಅವರು ಕೂಡಾ ಯಾವುದೇ ದಾಖಲೆಗಳಿಲ್ಲದೇ ನಾಲ್ಕು ವಾಚ್ ಗಳನ್ನು ದುಬೈ ನಿಂದ ತಂದಿದ್ದರು ಎನ್ನಲಾಗಿದೆ.

Leave a Comment