ಏರ್ ಪೋರ್ಟ್ ನಲ್ಲಿ ಹಾಗೆ ಕಾಣಿಸಿಕೊಂಡಿದ್ದೇ ತಡ: ರಶ್ಮಿಕಾ ನಿಮ್ಮ ಪ್ಯಾಂಟ್ ಎಲ್ಲಿ? ಎಂದು ಕಾಲೆಳೆದ ನೆಟ್ಟಿಗರು

Entertainment Featured-Articles News Viral Video
31 Views

ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಬಹು ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ. ಸದ್ಯಕ್ಕಂತೂ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ನಟಿ ರಶ್ಮಿಕಾ ಕುರಿತಾದ ಪ್ರತಿಯೊಂದು ವಿಷಯವು ಕೂಡಾ ದೊಡ್ಡ ಸುದ್ದಿಯಾಗುವಷ್ಟು ಜನಪ್ರಿಯತೆ ತನ್ನದಾಗಿಸಿಕೊಂಡಿದ್ದಾರೆ.‌ ಇನ್ನು ಟ್ರೋಲಿಂಗ್ ಬಗ್ಗೆ ಅಂತೂ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಏಕೆಂದರೆ ದಕ್ಷಿಣದ ಸಿನಿಮಾ ನಟಿಯರಲ್ಲಿ ಅತಿ ಹೆಚ್ಚು ಟ್ರೋಲ್ ಗೆ ಒಳಗಾಗುವ ನಟಿ ರಶ್ಮಿಕಾ ಎನ್ನುವುದರಲ್ಲಿ ಅನುಮಾನವೇ ಇಲ್ಲ ಎನ್ನುವಂತಾಗಿದೆ.

ನೆಟ್ಟಿಗರು ಸದಾ ಒಂದಲ್ಲಾ ಒಂದು ಕಾರಣಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ಟ್ರೋಲ್ ಮಾಡುತ್ತಲೇ ಇರುತ್ತಾರೆ. ಈಗ ಅಂತಹುದೇ ಮತ್ತೊಂದು ಅವಕಾಶ ಟ್ರೋಲ್ ಮಾಡುವವರಿಗೆ ಸಿಕ್ಕಂತಾಗಿದೆ. ನಟಿ ರಶ್ಮಿಕಾ ಮಂದಣ್ಣ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಹಜವಾಗಿಯೇ ಕ್ಯಾಮೆರಾ ಕಣ್ಣುಗಳು ಅವರನ್ನು ಸುತ್ತುವರೆದಿವೆ. ನಟಿಯು ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಕೂಡಲೇ ನಟಿಯ ಧರಿಸಿರುವ ಡ್ರೆಸ್ ಕುರಿತಾಗಿ ಸಾಕಷ್ಟು ಚರ್ಚೆಯಾಗುತ್ತಿದೆ.

ರಶ್ಮಿಕ ಧರಿಸಿದ್ದ ಡ್ರೆಸ್ ಟ್ರೋಲಿಗರಿಗೆ ಭರ್ಜರಿ ಆಹಾರವಾಗಿದೆ. ಇನ್ನು ವಿಡಿಯೋ ನೋಡಿ ನೆಟ್ಟಿಗರು ವೈವಿಧ್ಯಮಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಕೆಲವರು ರಶ್ಮಿಕ ಧರಿಸಿರುವ ಬಟ್ಟೆಯನ್ನು ಕುರಿತಾಗಿ ಟೀಕೆಗಳನ್ನು ಮಾಡಿದ್ದಾರೆ. ರಶ್ಮಿಕಾ ಧರಿಸಿರುವ ಡ್ರೆಸ್ ನಲ್ಲಿ ಪ್ಯಾಂಟ್ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಇನ್ನೂ ಚಿಕ್ಕ ಡ್ರೆಸ್ ಸಿಗಲಿಲ್ವಾ? ಎಂದಿದ್ದಾರೆ. ಆದರೆ ನಟಿಯ ಅಭಿಮಾನಿಗಳು ಹಾಗೂ ಇನ್ನೊಂದಷ್ಟು ಜನ ನೆಟ್ಟಿಗರು ನಟಿಯ ಬೆಂಬಲಕ್ಕೆ ನಿಂತಿದ್ದು, ಧರಿಸುವ ಉಡುಪು ಅವರವರ ಇಷ್ಟ ಎಂದಿದ್ದಾರೆ.‌

ಅಲ್ಲದೇ ಕೆಲವರು, ಇದನ್ನೆಲ್ಲಾ ಪ್ರಶ್ನಿಸುವ ಹಕ್ಕು ನಿಮಗಿಲ್ಲ ಎನ್ನುವ ಮಾತನ್ನು ಟೀಕಾಕಾರರಿಗೆ ಹೇಳಿದ್ದಾರೆ. ವಿಡಿಯೋ ದಲ್ಲಿ ನೋಡಿದಾ ರಶ್ಮಿಕಾ ಬಿಳಿ ಬಣ್ಣದ ಟೀ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ದಾರೆ.
ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಇನ್ನು ನಟಿಯ ವಿಚಾರಕ್ಕೆ ಬಂದರೆ ರಶ್ಮಿಕಾ ತಮ್ಮ ಬಗ್ಗೆ ಆಗುವ ಟ್ರೋಲ್ ಗಳ ಕುರಿತಾಗಿ ಯಾವುದೇ ರೀತಿ ತಲೆಕೆಡಿಸಿಕೊಳ್ಳುವುದಿಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.

ಪುಷ್ಪ ಸಿನಿಮಾ ಪ್ರಮೋಷನ್ ವೇಳೆ ಕೇರಳಕ್ಕೆ ನಟಿ ಭೇಟಿ ನೀಡಿದ್ದಾಗಲೂ ಸಹಾ ತೊಟ್ಟಿದ್ದ ಡ್ರೆಸ್ ನಿಂದಾಗಿಯೇ ದೊಡ್ಡ ಸುದ್ದಿಯಾಗಿದ್ದರು. ಇನ್ನು ಸಿನಿಮಾ ವಿಷಯಕ್ಕೆ ಬಂದರೆ ನಟಿ ರಶ್ಮಿಕಾ ದಕ್ಷಿಣದ ಮೂರು ಭಾಷೆಗಳಲ್ಲಿ ನಟಿಸಿದ್ದಾಗಿದೆ. ಅಲ್ಲದೇ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದು, ಆ ಸಿನಿಮಾಗಳು ಬಿಡುಗಡೆ ಆಗಬೇಕಿದ್ದು, ಈಗಾಗಲೇ ಹೊಸ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *