ಏರ್ ಪೋರ್ಟ್ನಲ್ಲಿ ಸಲ್ಮಾನ್ ಖಾನ್ ಗೆ ಕ್ಯೂ ನಲ್ಲಿ ನಿಲ್ಲಲು ಹೇಳಿದ ಯುವ ಅಧಿಕಾರಿ: ರಿಯಲ್ ಹೀರೋ ಎಂದ ನೆಟ್ಟಿಗರು

Entertainment Featured-Articles Health Viral Video
42 Views

ಬಾಲಿವುಡ್ ನಟರು ಅಥವಾ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ವಿಮಾನ ನಿಲ್ದಾಣ ಅಥವಾ ಇನ್ನಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಾಗ ಅವರನ್ನು ಸಾಮಾನ್ಯ ಜನರಂತೆ ಅಲ್ಲದೇ ವಿಶೇಷ ವಾದ ಸೌಲಭ್ಯಗಳನ್ನು ನೀಡಲಾಗುವುದು ಮಾತ್ರವೇ ಅಲ್ಲದೇ, ಅವರಿಗೆ ತೊಂದರೆಯಾಗದಂತೆ ಬೇಗ ಹೊರಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ಏಕೆಂದರೆ ಸೆಲೆಬ್ರಿಟಿಗಳು ಹೆಚ್ಚು ಹೊತ್ತು ಅಲ್ಲೇ ಉಳಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ, ಜನರು ಗುಂಪು ಸೇರುತ್ತಾರೆ ಎನ್ನುವ ಕಾರಣಗಳನ್ನು ನೀಡುತ್ತಾರೆ. ಆದರೆ ಈ ವೇಳೆ ಕೆಲವರು ಅಸಮಾಧಾನವನ್ನು ಹೊರ ಹಾಕುವುದು ಕೂಡಾ ಸಹಜ ಎಂದೇ ಹೇಳಬಹುದು. ಆದರೆ ಇದೀಗ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನ ಸ್ಟಾರ್ ನಟನನ್ನು ತಡೆದ ರಕ್ಷಣಾ ಸಿಬ್ಬಂದಿಯೊಬ್ಬರು ರಾತ್ರೋ ರಾತ್ರಿ ರಿಯಲ್ ಹೀರೋ ಆಗಿ ಹೊರ ಹೊಮ್ಮಿದ್ದಾರೆ.

ಹೌದು, ಟೈಗರ್ ಸಿನಿಮಾ ಚಿತ್ರೀಕರಣಕ್ಕಾಗಿ ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ವಿದೇಶಕ್ಕೆ ತೆರಳುವುದಕ್ಕಾಗಿ ಮುಂಬೈ ನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆಯಲ್ಲಿ ಭದ್ರತಾ ಸಿಬ್ಬಂದಿ ಅವರನ್ನು ಸಾಮಾನ್ಯ ಜನರ ಜೊತೆ ನಿಲ್ಲಿಸಿ ತಪಾಸಣೆಯನ್ನು ನಡೆಸಲು ಹಿಂಜರಿಯುತ್ತಾರೆ. ಆದರೆ ನಟ ಸಲ್ಮಾನ್ ಖಾನ್ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅಲ್ಲಿ ಒಡಿಶಾ ಮೂಲದ ಯುವ ಸಿಐಎಸ್ಎಫ್ ಅಧಿಕಾರಿ ಸೋಮನಾಥ್ ಮೊಹಂತಿ ಅವರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಆ ವೇಳೆ ಅವರು ಮಾಡಿದ ಕೆಲಸ ಇದೀಗ ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಹೌದು ನಟ ಸಲ್ಮಾನ್ ಖಾನ್ ಅವರು ಬಂದಾಗ ಸೋಮನಾಥ್ ಮೊಹಾಂತಿ ಅವರು ಅನ್ಯರಂತೆ ಅವರನ್ನು ಒಬ್ಬ ಸೆಲೆಬ್ರಿಟಿ ಎನ್ನುವ ಹಿಂಜರಿಕೆ ಇಲ್ಲದೇ ಯಾವುದೇ ಮುಲಾಜು ನೋಡದೇ ತಪಾಸಣೆಯನ್ನು ನಡೆಸಿದ್ದಾರೆ. ಅವರು ಸಲ್ಮಾನ್ ಖಾನ್ ಅವರನ್ನು ಸಹಾ ಸಾಮಾನ್ಯರಂತೆ ಸಾಲಿನಲ್ಲಿ ನಿಲ್ಲುವಂತೆ ಮತ್ತು ದಾಖಲೆಗಳನ್ನು ತೋರಿಸುವಂತೆ ಕೇಳಿದ್ದಾರೆ. ಇದನ್ನು ನೋಡಿ ಸಲ್ಮಾನ್ ಖಾನ್ ಅವರು ಆಶ್ಚರ್ಯ ಪಟ್ಟಿದ್ದು ಮಾತ್ರವೇ ಅಲ್ಲದೇ, ತಮ್ಮ ಜೊತೆಯಲ್ಲಿ ಇದ್ದವರಿಗೂ ಸೋಮನಾಥ್ ಅವರು ಹೇಳಿದಂತೆ ಮಾಡುವಂತೆ ಸೂಚನೆ ನೀಡುವ ಮೂಲಕ ಸೋಮನಾಥ್ ಅವರ ಕೆಲಸಕ್ಕೆ ಮೆಚ್ಚುಗೆ ನೀಡಿದ್ದಾರೆ.

ಸೋಮನಾಥ್ ಮೊಹಂತಿ ಅವರ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನರು ಸೋಮನಾಥ್ ಅವರ ಕರ್ತವ್ಯ ನಿರ್ವಹಣೆಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಅಲ್ಲದೇ ಮೊಹಂತಿ ಅವರನ್ನು ರಿಯಲ್ ಹೀರೋ ಎಂದು ಸಹಾ ಹೊಗಳುತ್ತಿದ್ದಾರೆ. ಕೆಲವರು ಎಲ್ಲಾ ಅಧಿಕಾರಿಗಳು ಸಹಾ ಸೆಲೆಬ್ರಿಟಿಗಳನ್ನು ಹೀಗೆ ನೋಡಬೇಕು ಎನ್ನುವ ಮಾತನ್ನು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *