ವಿಶೇಷ ಹಾಗೂ ಎಕ್ಸ್ ಕ್ಲೂಸಿವ್ ಎನಿಸುವಂತಹ ಫೋಟೋಗಳಿಗಾಗಿ ಸೆಲೆಬ್ರಿಟಿಗಳ ಹಿಂದೆ ಸುತ್ತವಂತಹ ಫೋಟೋಗ್ರಾಫರ್ ಗಳನ್ನು ಪಾಪರಾಜಿಗಳು ಎಂದು ಕರೆಯುವುದು ಇಂದಿನ ಟ್ರೆಂಡ್. ಪಾಪರಾಜಿಗಳು ಸೆಲೆಬ್ರಿಟಿಗಳ ವಿಶೇಷ ಫೋಟೋಗಳನ್ನು ಕ್ಲಿಕ್ ಮಾಡಲು ಸಾಮಾನ್ಯವಾಗಿ ವಿಮಾನ ನಿಲ್ದಾಣಗಳು, ಸಿನಿಮಾ ಸೆಲೆಬ್ರಿಟಿಗಳು ಹೆಚ್ಚಾಗಿ ಭೇಟಿ ನೀಡುವ ವಿಶೇಷ ಸ್ಥಳಗಳು, ಪಾರ್ಟಿ ಗಳು ನಡೆಯುವ ಸ್ಥಳಗಳ ಹೊರಗೆ ಹೀಗೆ ಹಲವು ಕಡೆ ಸೆಲೆಬ್ರೆಟಿಗಳ ಹಿಂದೆ ಹೋಗಿ ಅವರ ಫೋಟೋಗಳನ್ನು ತೆಗೆಯುತ್ತಾರೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳು ಪಾಪರಾಜಿಗಳ ಕಡೆಗೆ ಹಾಯ್, ಹಲೋ ಹೇಳಿ ಅವರ ಫೋಟೋಗಳಿಗಾಗಿ ಒಂದಷ್ಟು ಪೋಸ್ ಗಳನ್ನು ನೀಡಿ, ಬೈ ಹೇಳಿ ಮುಂದೆ ಹೋಗುತ್ತಾರೆ. ಇನ್ನೂ ಕೆಲವೊಮ್ಮೆ ಕೆಲಸದ ಗಡಿಬಿಡಿ ಎಂದು ಇಂತಹ ಫೋಟೋಗ್ರಾಫರ್ ಗಳ ಕಡೆಗೆ ತಮ್ಮ ಗಮನವನ್ನು ಸಹಾ ನೀಡದೆ ಮುಂದೆ ಹೋಗುವ ಸೆಲೆಬ್ರಿಟಿಗಳು ಕೂಅಡ ಉಂಟು. ಆದರೆ ಇವರೆಲ್ಲರ ನಡುವೆ ನಟಿ ತಮನ್ನಾ ಭಾಟಿಯಾ ಈಗ ಮಾಡಿರುವ ಒಂದು ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು, ಮುಂಬೈನ ಏರ್ಪೋರ್ಟ್ನಲ್ಲಿ ನಟಿ ತಮನ್ನಾ ಭಾಟಿಯಾ ಪಾಪರಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಅವರು ತಮನ್ನಾ ಫೋಟೋಗಳನ್ನು ತೆಗೆಯಲು ಬಂದಿದ್ದಾರೆ. ಆಗ ಪಾಪರಾಜಿಗಳ ಜೊತೆಗೆ ತಮನ್ನಾ ಭಾಟಿಯಾ ಒಂದಷ್ಟು ಮಾತುಕತೆ ನಡೆಸಿದ್ದಾರೆ. ಫೋಟೋಗ್ರಾಫರ್ ಗಳ ಜೊತೆ ಮಾತನಾಡುತ್ತಾ ಲಾಕ್ ಡೌನ್ ಕಾರಣದಿಂದ ಸಾಕಷ್ಟು ಬದಲಾವಣೆಗಳು ಆಗಿವೆ ಎಂದು ಹೇಳಿ, ಅನಂತರ ಪಾಪರಾಜಿಗಳ ಆರೋಗ್ಯವನ್ನು ವಿಚಾರಿಸಿದ್ದಾರೆ ತಮನ್ನಾ. ಅದಾದ ಮೇಲೆ ಅವರೊಟ್ಟಿಗೆ ಕಾಫಿ ಕುಡಿಯೋಣ ಎಂದು ಹೇಳಿದ್ದಾರೆ. ತಮನ್ನಾ ಪಾಪರಾಜಿಗಳಿಗೆ ತಿಂಡಿ ವ್ಯವಸ್ಥೆಯನ್ನು ಮಾಡಿಸಿದ್ದಾರೆ. ಏರ್ಪೋರ್ಟ್ ನಲ್ಲಿ ಪಾಪ ರಾಜಿಗಳನ್ನು ನೋಡಿಯೇ ಗಡಿಬಿಡಿಯಿಂದ ಓಡುವ ಸೆಲೆಬ್ರಿಟಿಗಳ ನಡುವೆ ತಮನ್ನಾ ಅವರ ಅವರ ಈ ನಡವಳಿಕೆ ದೊಡ್ಡ ಸುದ್ದಿಯಾಗಿದೆ.
ಪ್ರಸ್ತುತ ತಮನ್ನಾ ಭಾಟಿಯಾ ದಕ್ಷಿಣದ ಸಿನಿಮಾಗಳಲ್ಲಿ ಹಾಗೂ ಬಾಲಿವುಡ್ ನ ಕೆಲವು ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿದ್ದಾರೆ. ಅದೂ ಅಲ್ಲದೇ ಬೆಂಗಳೂರಿನ ಇನ್ನೋವೇಟಿವ್ ಫಿಲಂಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿರುವ ದಕ್ಷಿಣ ಭಾರತದ ಅತಿ ದೊಡ್ಡ ಕುಕಿಂಗ್ ರಿಯಾಲಿಟಿ ಶೋ ಮಾಸ್ಟರ್ ಶೆಫ್ ನ ತೆಲುಗು ಆವೃತ್ತಿಯನ್ನು ತಮನ್ನಾ ಭಾಟಿಯಾ ನಿರೂಪಣೆ ಮಾಡುತ್ತಿದ್ದಾರೆ. ತಮನ್ನಾ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳ ಪ್ರಾಜೆಕ್ಟ್ ಗಳಿವೆ. ಎಫ್ 3 , ಮ್ಯಾಸ್ಟ್ರೋ, ಘಣಿ, ಸೀಟಿ ಮಾರ್, ಗುರ್ತುಂದ ಸೀತಕಾಲಂ, ದಟ್ ಇಸ್ ಮಹಾಲಕ್ಷ್ಮಿ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ತಮನ್ನಾ ಭಾಟಿಯಾ ಸಖತ್ ಬ್ಯುಸಿಯಾಗಿದ್ದಾರೆ.