ಏನ್ ಎಂಜಾಯ್ ಮಾಡ್ತಿದ್ದಾರೆ ಗುರೂ!! ಲೈಫ್ ಅಂದ್ರೆ ಹೀಗಿರಬೇಕು ಅಲ್ವಾ?? ಅಂತಿದ್ದಾರೆ ನೆಟ್ಟಿಗರು

Entertainment Featured-Articles News Viral Video
78 Views

ಜೀವನದಲ್ಲಿ ಸಣ್ಣ ಸಣ್ಣ ಸಂತೋಷದ ಕ್ಷಣಗಳನ್ನು ಕೂಡ ಅನುಭವಿಸಿ ಆನಂದಿಸಬೇಕು ಎಂದು ಹೇಳಲಾಗುತ್ತದೆ. ವೃತ್ತಿ, ಜವಾಬ್ದಾರಿಗಳು, ಜೀವನದ ಸಂ ಘ ರ್ಷಗಳ ನಡುವೆಯೂ ಸಣ್ಣ ಸಣ್ಣ ಸಂತೋಷದ ಕ್ಷಣಗಳನ್ನು ಕೈತಪ್ಪಿಹೋಗದಂತೆ ಎಚ್ಚರ ವಹಿಸುವುದೇ ನಿಜವಾದ ಜೀವನ. ಇನ್ನು ಈ ಜೀವನದಲ್ಲಿ ನಮ್ಮ ಸಂತೋಷವನ್ನು ದುಪ್ಪಟ್ಟುಗೊಳಿಸುವವರು ನಮ್ಮ ಸ್ನೇಹಿತರು ಎಂದು ಯಾವುದೇ ಅನುಮಾನವೂ ಇಲ್ಲದೇ ಹೇಳಬಹುದು. ಇನ್ನು ನಾಲ್ಕು ಜನ ಸ್ನೇಹಿತರು ಒಂದು ಕಡೆ ಸೇರಿದರೆ ಅಲ್ಲಿನ ವಾತಾವರಣ ಎಷ್ಟು ಸಂತೋಷದಿಂದ ತುಂಬಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಸ್ನೇಹಿತರ ಗುಂಪಿನಲ್ಲಿ ಮೂಡುವ ತುಂಟತನದ ಆಲೋಚನೆಗಳು ಅಲ್ಲೊಂದು ಚೈತನ್ಯವನ್ನು ತುಂಬುತ್ತದೆ. ಪ್ರಸ್ತುತ ಅಂತರ್ಜಾಲದಲ್ಲಿ ಒಂದು ವಿಡಿಯೋ ಬಹಳ ವೈರಲ್ ಆಗುತ್ತಿದ್ದು, ಈ ವೀಡಿಯೋ ಅಂತಹುದೇ ಒಂದು ವಿಷಯವನ್ನು ಅದು ಎಲ್ಲರಿಗೂ ಹೇಳುತ್ತಿದೆ. ಎಸ್ಕಲೇಟರ್ ಒಂದರ ಮೇಲೆ ಸ್ನೇಹಿತರ ಗುಂಪು ಮಾಡಿದ ಕೆಲಸವನ್ನು ನೋಡಿ ಜನರು ಆಶ್ಚರ್ಯ ಪಡುವುದರ ಜೊತೆಗೆ ತಮ್ಮ ಸ್ನೇಹಿತರ ಜೊತೆಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇನ್ನು ಈ ವೀಡಿಯೋದ ವಿವರಗಳಿಗೆ ಹೋಗುವುದಾದರೆ, ಒಂದಷ್ಟು ಜನ ಸ್ನೇಹಿತರು ಜೊತೆಯಾಗಿ ಒಂದು ಶಾಪಿಂಗ್ ಮಾಲ್ ಗೆ ಹೋಗಿದ್ದಾರೆ.

ಎಸ್ಕಲೇಟರ್ ಮೇಲೆ ಏರಿದ್ದಾರೆ. ಅದು ಮೇಲೆ ಹೋಗುವಾಗ ಎಲ್ಲರೂ ಅದರ ಮೇಲೆ ಕುಳಿತುಕೊಂಡು ದೋಣಿಯನ್ನು ನಡೆಸುವಂತೆ ತಮ್ಮ ಎರಡೂ ಕೈಗಳನ್ನು ಹಿಂದಕ್ಕೆ ನೂಕುತ್ತಾ, ಹರಿಗೋಲನಿಂದ ಹುಟ್ಟು ಹಾಕುವಂತೆ ಆ್ಯಕ್ಟಿಂಗ್ ಮಾಡಿದ್ದಾರೆ. ಶಾಪಿಂಗ್ ಮಾಲ್ ನಲ್ಲಿ ಎಸ್ಕಲೇಟರ್ ಮೇಲೆ ಸ್ನೇಹಿತರ ಗುಂಪು ಮಾಡಿದ ಈ ಕೆಲಸವನ್ನು ಕಂಡು ಅಲ್ಲಿದ್ದವರೆಲ್ಲಾ ಬಹಳ ಆಶ್ಚರ್ಯ ಪಟ್ಟಿದ್ದಾರೆ. ಕೆಲವರು ಈ ಸುಂದರವಾದ ದೃಶ್ಯವನ್ನು ವಿಡಿಯೋಗಳಲ್ಲಿ ಸೆರೆ ಹಿಡಿದುಕೊಂಡು, ಅದನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ಸುಂದರವಾದ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ ಅವರು ಮೆನ್ ವಿಲ್ ಬಿ ಮೆನ್ ಎಂದು ಬರೆದುಕೊಂಡಿದ್ದಾರೆ. ವೈರಲ್ ಆದ ಈ ವಿಡಿಯೋವನ್ನು ನೋಡಿ ನೆಟ್ಟಿಗರು ಮೆಚ್ಚುಗೆಗಳನ್ನು ಹರಿಸುತ್ತಿದ್ದಾರೆ. ಕೆಲವರು ಕಾಮೆಂಟ್ ಗಳನ್ನು ಮಾಡುವ ಮೂಲಕ, ಜೀವನದ ಸುಂದರ ಕ್ಷಣಗಳನ್ನು ಆನಂದಿಸುವುದು ಎಂದರೆ ಇದೆ ಎನ್ನುವ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *