ಏನೇ ಆದ್ರು ಮುಖ ತೋರ್ಸಲ್ಲ: ಮುಖ ಮುಚ್ಕೊಂಡೇ ಹಬ್ಬದ ತಯಾರಿ ಮಾಡ್ತಿರುವ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ!!

Entertainment Health Movies News
53 Views

ಈ ವರ್ಷ ಗಣೇಶ ಚತುರ್ಥಿ ಯ ಸಂಭ್ರಮ ಸಹಜವಾಗಿಯೇ ಎಲ್ಲೆಡೆ ಬಹಳ ಜೋರಾಗಿದೆ‌. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಎಲ್ಲಾ ಸಂಭ್ರಮ, ಸಡಗರ ಕ್ಕೂ ಬ್ರೇಕ್ ಬಿದ್ದಿತ್ತು. ಆದರೆ ಈ ಬಾರಿ ಕೊರೊನಾ ಆತಂಕ ದೂರವಾಗಿರುವ ವೇಳೆಯಲ್ಲಿ ಹಬ್ಬದ ಸಂಭ್ರಮವು ದುಪ್ಪಟ್ಟಾಗಿದೆ. ಪ್ರತಿವರ್ಷದಂತೆ ಈ ಬಾರಿ ಸಹಾ ಸೆಲೆಬ್ರಿಟಿಗಳು ತಮ್ಮ ಮನೆಗಳಲ್ಲಿ ಗಣೇಶನನ್ನು ಕೂರಿಸಿ, ಸಂಭ್ರಮಿಸಲು ಸಜ್ಜಾಗಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಮನೆಗಳಲ್ಲಿ ಸರ್ವ ವಿಘ್ನಗಳ‌ನ್ನು ಹರಿಸುವ ಶ್ರೀಗಣೇಶನನ್ನು ಬಹಳ ಭಕ್ತಿಯಿಂದ ಆರಾಧನೆಯನ್ನು ಮಾಡುತ್ತಾರೆ. ಮನೆಗಳಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡುತ್ತಾರೆ.

ಇನ್ನು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ಸಹಾ ಗಣೇಶ ಚತುರ್ಥಿಯ ಸಂಭ್ರಮವು ದುಪ್ಪಟ್ಟಾಗಿದೆ. ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿ ತಮ್ಮ ಮನೆಗೆ ಗಣಪತಿಯನ್ನು ಬಹಳ ಖುಷಿಯಿಂದ ಬರ ಮಾಡಿಕೊಂಡಿದ್ದಾರೆ. ಮನೆಗೆ ಗಣಪನ ಆಗಮನ ಆದ ಸಂಭ್ರಮದ ಕ್ಷಣದ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಆದರೆ ಅದೇಕೋ ರಾಜ್ ಕುಂದ್ರಾ ಮಾತ್ರ ಮನೆಯಿಂದ ಹೊರಗೆ ಕಾಲಿಟ್ಟರೆ, ಎಲ್ಲೆಲ್ಲಿ ಮಾದ್ಯಮಗಳ ದೃಷ್ಟಿ ಅವರ ಮೇಲೆ ಬೀಳುತ್ತದೆಯೋ ಅಲ್ಲೆಲ್ಲಾ ಅವರು ತಮ್ಮ ಮುಖಕ್ಕೆ ಪೂರ್ತಿ ಮುಖ ಮುಚ್ಚುವಂತಹ ಮಾಸ್ಕ್ ಧರಿಸಿಯೇ ಓಡಾಡುತ್ತಿದ್ದಾರೆ.

ಏರ್ ಪೋರ್ಟ್, ಸಾರ್ವಜನಿಕ ಸ್ಥಳಗಳು ಎಲ್ಲೇ ಆಗಲೀ ಅವರು ಮಾಸ್ಕ್ ನಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಮನೆಗೆ ಗಣೇಶನು ಆಗಮಿಸಿದ ಸಂಭ್ರಮದ ವೇಳೆಯಲ್ಲೂ ಗಣೇಶನಿಗೆ ಸ್ವಾಗತ ನೀಡುವಾಗಲೂ ಅವರು ತಮ್ಮ ಮುಖಕ್ಕೆ ಮಾಸ್ಕ್ ಧರಿಸಿಯೇ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ರಾಜ್ ಕುಂದ್ರಾ ಅವರು ನಟಿಯರನ್ನು ಏಮಾರಿಸಿ, ಅವರಿಂದ ಅ ಶ್ಲೀ ಲ ಸಿನಿಮಾಗಳನ್ನು ಮಾಡಿಸಿದ್ದಾರೆ ಎನ್ನುವ ಆ ರೋ ಪ ಕೇಳಿ ಬಂದು, ರಾಜ್ ಕುಂದ್ರಾ ಒಂದಷ್ಟು ಸಮಯ ಜೈಲು ಕಂಬಿ ಎಣಿಸಿದ್ದರು‌. ಆ ಘಟನೆಯ ನಂತರ ಅವರು ಸಾರ್ವಜನಿಕವಾಗಿ ತಮ್ಮ ಮುಖ ತೋರಿಸಲು ಹಿಂಜರಿಯುತ್ತಿದ್ದು, ಅಂದಿನಿಂದಲೂ ಮಾಸ್ಕ್ ಧರಿಸಿಯೇ ಹೊರಗೆ ಕಾಣುತ್ತಿದ್ದಾರೆ.

Leave a Reply

Your email address will not be published. Required fields are marked *