“ಏನೇನೋ ನಿಮಿರುತ್ತೆ ಎಂದು ಯುವಕರು”- ಚಿರಂಜೀವಿ ಆಚಾರ್ಯ ಸಿನಿಮಾ ಹಾಡಿನ ದೊಡ್ಡ ವಿವಾದ

0 1

ಇತ್ತೀಚಿನ ದಿನಗಳಲ್ಲಿ ಸಿನಿಮಾವೊಂದು ಬರುತ್ತಿದೆ ಎಂದರೆ ಅದರ ಜೊತೆಯಲ್ಲಿ ಕೆಲವು ವಿ ವಾ ದಗಳು ಸಹಾ ರೂಪುಗೊಳ್ಳಲು ವೇದಿಕೆಯೊಂದು ಸಜ್ಜಾಗುತ್ತಿದೆಯೇನೋ ಎನ್ನುವ ಅನುಮಾನ ಕೂಡಾ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣ ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಸಿನಿಮಾಗಳಲ್ಲಿ ಪಾತ್ರಗಳು ಹೇಳುವ ಡೈಲಾಗ್ ಗಳು, ತೋರಿಸುವ ದೃಶ್ಯಗಳು, ಹಾಡುಗಳು, ನೃತ್ಯ ಹಾಗೂ ಹಾಡಿನ ಸಾಹಿತ್ಯ ಹೀಗೆ ಎಲ್ಲವುಗಳ ಬಗ್ಗೆ ಸಹಾ ವಿ ವಾ ದ ಗಳು ಹುಟ್ಟಿಕೊಳ್ಳುತ್ತವೆ. ಯಾವುದೋ ವರ್ಗವೊಂದನ್ನು ಸಿನಿಮಾದಲ್ಲಿ ಕೆಟ್ಟದಾಗಿ ತೋರಿಸಲಾಗಿದೆ ಎನ್ನುವುದೋ ಕಾರಣವಾಗಿರುತ್ತದೆ.

ಅದು ಮಾತ್ರವೇ ಅಲ್ಲದೇ ಹಾಡುಗಳಲ್ಲಿ ಬಳಸಿದ ಸಾಹಿತ್ಯವು ಸಹಾ ಅವಮಾನ ಮಾಡುವಂತಿದೆ ಎಂದು ಜನ ಸಿನಿಮಾ ವಿ ರೋ ಧಿಸಲು ತೊಡಗುತ್ತಾರೆ. ಈಗ ಅಂತಹುದೇ ಒಂದು ವಿವಾದ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ಆಚಾರ್ಯ ದ ಒಂದು ಹಾಡಿನ ಸುತ್ತ ಕೂಡಾ ಎದ್ದಿದೆ. ಮೊನ್ನೆ ಮೊನ್ನೆ ಪುಷ್ಪ ಸಿನಿಮಾದ ಐಟಂ ಹಾಡಿನ ಬಗ್ಗೆ ಪುರುಷ ಸಂಘಟನೆಯೊಂದು ಅಸಮಾಧಾನ ಹೊರಹಾಕಿದ್ದನ್ನು ಮರೆಯುವ ಮೊದಲೇ ಈಗ ಚಿರಂಜೀವಿ ಸಿನಿಮಾದ ಐಟಂ ಹಾಡಿನ ಬಗ್ಗೆ ವಿ ವಾ ದ ಹುಟ್ಟಿದೆ.

ಆಚಾರ್ಯ ಸಿನಿಮಾ ನಿರ್ದೇಶಕ ಕೊರಟಾಲ ಶಿವ ಇತ್ತೀಚಿಗೆ ಸಿನಿಮಾದ ಐಟಂ ಹಾಡು ಸಾನಾ ಕಷ್ಟಂ ನ ( ತುಂಬಾ ಕಷ್ಟ ) ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿದ್ದರು. ಈ ಹಾಡಿನಲ್ಲಿ ಚಿರಂಜೀವಿ ದಕ್ಷಿಣದ ಜನಪ್ರಿಯ ನಟಿ ರೆಜಿನಾ ಕಸಾಂಡ್ರ ಜೊತೆಗೆ ಹೆಜ್ಜೆಯನ್ನು ಹಾಕಿದ್ದಾರೆ. ಈಗ ಈ ಹಾಡಿನಲ್ಲಿ ಬರುವ ಒಂದು ಸಾಲಿನ ಬಗ್ಗೆ ಆರ್ ಎಂ ಪಿ ವೈದ್ಯರ ಸಂಘ ಆಕ್ಷೇಪಣೆಯನ್ನು ಹೊರ ಹಾಕಿದೆ. ನಿರ್ದೇಶಕ ಹಾಗೂ ಹಾಡನ್ನು ಬರೆದ ಸಾಹಿತಿ ಮೇಲೆ ದೂರನ್ನು ದಾಖಲು ಮಾಡಲಾಗಿದೆ.

ಲಿರಿಕಲ್ ಸಾಂಗ್ ವೀಡಿಯೋ ಸದ್ದು ಮಾಡಿ, ಸಿನಿ ಪ್ರಿಯರ ಮನಸ್ಸನ್ನು ಗೆಲ್ಲುತ್ತಿದೆ. ಆದರೆ ಹಾಡಿನ ಒಂದು ಸಾಲಿನಲ್ಲಿ ” ಏನೇನೋ ನಿಮಿರುತ್ತದೆ ಎಂದು ಯುವಕರು ಆರ್ ಎಂ ಪಿ ಆಗುತ್ತಿದ್ದಾರೆ” ಎಂದು ಬರೆಯಲಾಗಿದ್ದು, ಇದರಿಂದ ಆರ್ ಎಂ ಪಿ ವೈದ್ಯರು ಅಸಮಾಧಾನ ಗೊಂಡು ತಮ್ಮ ವೃತ್ತಿಯ ಬಗ್ಗೆ ಇಂತಹ ಮಾತನ್ನು ಹೇಳುವುದು ಸರಿಯಲ್ಲ ಎಂದು, ಈ ಆಕ್ಷೇಪಣಕಾರಿ ಸಾಲನ್ನು ತೆಗೆಯಬೇಕು ಎಂದು ಆರ್ ಎಂ ಪಿ ವೈದ್ಯರು ದೂರನ್ನು ದಾಖಲು ಮಾಡಿದ್ದಾರೆ.

Leave A Reply

Your email address will not be published.