ಎ.ಆರ್.ರೆಹಮಾನ್ ಯಾರೋ ನಂಗೊತ್ತಿಲ್ಲ, ಭಾರತ ರತ್ನ ನಮ್ಮ‌ಪ್ಪನ ಕಾಲಿನ ಉಗುರಿಗೆ ಸಮ: ನಟನ ಉದ್ದಟತನ

0 3

ಭಾರತೀಯ ಚಿತ್ರರಂಗದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಹಾಗೂ ಅವರ ಸಂಗೀತದಲ್ಲಿ ಮೂಡಿ ಬಂದ ಅನೇಕ ಮಧುರವಾದ ಹಾಡುಗಳ ಪರಿಚಯ ಇಲ್ಲದ ಜನರು ತೀರಾ‌ ಕಡಿಮೆ. ತೆಲುಗು, ತಮಿಳು, ಹಿಂದಿ, ಮಲೆಯಾಳಂ ಹಾಗೂ ಹಾಲಿವುಡ್ ಸಿನಿಮಾ ವ ಒಂದಕ್ಕೆ ಸಂಗೀತ ನಿರ್ದೇಶನ ಮಾಡಿದ ಈ ದಿಗ್ಗಜ ಸಂಗೀತ ನಿರ್ದೇಶಕನನ್ನು ಅಭಿಮಾನಿಸುವ ಅಸಂಖ್ಯಾತ ಜನರು ನಮ್ಮ ದೇಶದಲ್ಲಿ ಇದ್ದಾರೆ. ಆದರೆ ಇಂತಹ ಜನಪ್ರಿಯ ಸಂಗೀತ ನಿರ್ದೇಶಕ ಯಾರು ಎಂದು ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ತೆಲುಗು ಚಿತ್ರ ರಂಗದ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅವರು ಒಂದು ವಿ ವಾ ದವನ್ನು ಹುಟ್ಟು ಹಾಕಿದ್ದಾರೆ.

ಜನಪ್ರಿಯ ಮಾದ್ಯಮವೊಂದಕ್ಕೆ ಸಂದರ್ಶನ ನೀಡಿರುವ ಬಾಲಕೃಷ್ಣ ಅವರು ಆಗ ಸಂದರ್ಶನದ ವೇಳೆ ಅವರನ್ನು ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರ ಕುರಿತಾಗಿ ಕೇಳಿದಾಗ, ಎ ಆರ್ ರೆಹಮಾನ್ ಯಾರೆಂಬುದೇ ನನಗೆ ಗೊತ್ತಿಲ್ಲ. ಅವರಿಗೆ ಆಸ್ಕರ್ ಪ್ರಶಸ್ತಿ ಬಂದಿದೆ ಎಂದು ನಾನು ಕೇಳಿದ್ದೇನೆ. ಆದರೆ ಅವರು ಯಾರೆಂಬುದು ನನಗಿನ್ನೂ ಗೊತ್ತಾಗಿಲ್ಲ. ಎಲ್ಲೋ ಹತ್ತು ವರ್ಷಕ್ಕೊಂದು ಹಿಟ್ ಗೀತೆಯನ್ನು ರೆಹಮಾನ್ ಕೊಡುತ್ತಾರೆ ಎಂದು ಎ ಆರ್ ರೆಹಮಾನ ಅವರ ಬಗ್ಗೆ ಲಘುವಾಗಿ ಮಾತನಾಡುವ ಮೂಲಕ ಬಾಲಕೃಷ್ಣ ಅವರು ಅನೇಕರ ಸಿ ಟ್ಟು ಮತ್ತು ಅಸಮಾಧಾನಕ್ಕೆ ಕಾರಣವಾಗಿದ್ದಾರೆ.‌

ಅವರು ಇದೊಂದೇ ವಿಷಯ ಅಲ್ಲದೇ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿ ಕುರಿತಾಗಿ ಸಹಾ ಲಘುವಾಗಿ ಮಾತನಾಡಿದ್ದಾರೆ. ಭಾರತ ರತ್ನ ತಮ್ಮ ತಂದೆ ಎನ್ ಟಿ ಆರ್ ಅವರ ಕಾಲಿನ ಬೆರಳಿನ ಉಗುರಿಗೆ ಸಮಾನ ಎಂದಿರುವ ಅವರು ಯಾವ ಪ್ರಶಸ್ತಿ ಗಳು ಸಹಾ ತೆಲುಗು ಚಿತ್ರರಂಗಕ್ಕೆ ತಮ್ಮ‌ ಕುಟುಂಬ ನೀಡಿರುವ ಕೊಡುಗೆಯನ್ನು ಮೀರಿಸಲಾರದು ಎಂದಿದ್ದಾರೆ. ನಮಗೆ ಪ್ರಶಸ್ತಿಗಳು ಬಂದಿಲ್ಲ ಎಂದರೆ ಆ ಪ್ರಶಸ್ತಿಗಳೇ ಬೇಸರ ಮಾಡಿಕೊಳ್ಳಬೇಕೇ ಹೊರತು ನಾವಲ್ಲ ಎಂದು ನಟ ಬಾಲಕೃಷ್ಣ ಹೇಳಿದ್ದು ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ಗುರಿಯಾಗಿವೆ.

ಬಾಲಕೃಷ್ಣ ಅವರ ಸಂದರ್ಶನದ ತುಣುಕುಗಳು ಯೂಟ್ಯೂಬ್ ನಲ್ಲಿ ಪ್ರಕಾರವಾಗಿದ್ದು ಕಂಡು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಬಾಲಕೃಷ್ಣ ಅವರ 1993 ರಲ್ಲಿ ಬಿಡುಗಡೆಯಾದ ಸಿನಿಮಾ ನಿಪ್ಪುರವ್ವ ದಲ್ಲಿ ಎ ಆರ್ ರೆಹಮಾನ್ ಮೂರು ಜನ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದವರು. ಅವರನ್ನೇ ತನಗೆ ಗೊತ್ತಿಲ್ಲ ಎಂದು ಹೇಳಿರವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ನಟ ಬಾಲಕೃಷ್ಣ ಸದಾ ಒಂದಿಲ್ಲೊಂದು ವಿ ವಾದಗಳನ್ನು ಎಳೆದುಕೊಂಡು ಸುದ್ದಿಯಾಗುತ್ತಲೇ ಇರುತ್ತಾರೆ.

Leave A Reply

Your email address will not be published.