ಎಷ್ಟೇ ಕೋಟಿ ಆಫರ್ ಬಂದ್ರೂ ನಮ್ಮ ನಿರ್ಧಾರ ಬದಲಾಗಲ್ಲ: ರಾಧೇ ಶ್ಯಾಮ್ ನಿರ್ಮಾಪಕರ ಗಟ್ಟಿ ನಿರ್ಧಾರ
ಕೊರೊನಾ ಆ ತಂ ಕ ದ ಹಿನ್ನೆಲೆಯಲ್ಲಿ ಬಹು ನಿರೀಕ್ಷಿತ ಸಿನಿಮಾ ಆರ್ ಆರ್ ಆರ್ ಬಿಡುಗಡೆ ಮುಂದೂಡಲಾಗಿದೆ. ಇದು ಸಹಜವಾಗಿಯೇ ಅಭಿಮಾನಿಗಳಿಗೆ ಬೇಸರ ಮೂಡಿಸಿದೆಯಾದರೂ ಅದು ಅನಿವಾರ್ಯ ಎನಿಸಿದೆ ಚಿತ್ರ ತಂಡಕ್ಕೆ. ಆರ್ ಆರ್ ಆರ್ ನ ಬಿಡುಗಡೆ ಮುಂದೂಡಿಕೆಯ ಬೆನ್ನಲ್ಲೇ ಈಗ ಸಿನಿ ಪ್ರೇಮಿಗಳ ಕುತೂಹಲ ಸಹಜವಾಗಿಯೇ ಪ್ರಭಾಸ್ ಅಭಿನಯದ ರಾಧೇ ಶ್ಯಾಮ್ ಸಿನಿಮಾ ಕಡೆಗೆ ಹೊರಳಿದೆ. ಹೌದು ರಾಧೇ ಶ್ಯಾಮ್ ಸಿನಿಮಾ ಇದೇ ಜನವರಿ 14 ಕ್ಕೆ ತೆರೆಗೆ ಬರಲಿದೆ ಎನ್ನುವುದು ಈಗಾಗಲೇ ಘೋಣೆಯಾಗಿರುವ ದಿನಾಂಕವಾಗಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಜನವರಿ 14 ರಂದು ರಾಧೇ ಶ್ಯಾಮ್ ತೆರೆಗೆ ಬರಲಿದೆ.
ಆದರೆ ಈಗ ಇದರ ನಡುವೆಯೇ ಹೊಸ ವಿಷಯವೊಂದು ಟಾಲಿವುಡ್ ಅಂಗಳದಲ್ಲಿ ಸುಳಿದಾಡಿದೆ. ಅದೇನೆಂದರೆ ಓಟಿಟಿ ಕಂಪನಿಯೊಂದು ರಾಧೇ ಶ್ಯಾಮ್ ಸಿನಿಮಾಕ್ಕೆ ಬರೋಬ್ಬರಿ 350 ಕೋಟಿ ರೂ.ಗಳ ಆಫರ್ ಒಂದನ್ನು ನೀಡಿದೆ ಎನ್ನಲಾಗಿದೆ. ಹಾಗಾದ್ರೆ ಈ ಡೀಲ್ ಗೆ ಓಕೆ ಹೇಳಿ ರಾಧೇ ಶ್ಯಾಮ್ ನಿರ್ಮಾಪಕರು ಸಿನಿಮಾವನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡ್ತಾರಾ?? ಎನ್ನುವ ಅನುಮಾನ ಕೂಡಾ ಮೂಡಿದೆ. ಆದರೆ ಆಪ್ತ ವಲಯ ನೀಡಿರುವ ಮಾಹಿತಿಯ ಪ್ರಕಾರ ನಿರ್ಮಾಪಕರು ಇದಕ್ಕೆ ಸಿದ್ಧರಿಲ್ಲ ಎನ್ನಲಾಗಿದೆ.
ಎಷ್ಟೇ ದೊಡ್ಡ ಮೊತ್ತದ ಆಫರ್ ಬಂದರೂ ಕೂಡಾ ಸಿನಿಮಾವನ್ನು ಥಿಯೇಟರ್ ಗಳಲ್ಲೇ ಬಿಡುಗಡೆ ಮಾಡಬೇಕೆನ್ನುವುದು ನಿರ್ಮಾಪಕರ ಗುರಿಯಾಗಿದೆ ಎನ್ನಲಾಗಿದೆ. ಚಿತ್ರ ಮಂದಿರಗಳಲ್ಲೇ ಸಿನಿಮಾ ತೆರೆ ಕಾಣಬೇಕು ಎನ್ನುವುದು ಅವರ ನಿರ್ಧಾರವಾಗಿದೆ ಎನ್ನಲಾಗಿದೆ. ಸಿನಿಮಾ ಟ್ರೇಲರ್ ನೋಡಿದವರಿಗೆ ಈಗಾಗಲೇ ಸಿನಿಮಾದಲ್ಲಿನ ದೃಶ್ಯ ವೈಭವದ ಅರಿವಾಗಿದೆ. ಆದ್ದರಿಂದಲೇ ಜನರು ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ನೋಡಬೇಕು ಎನ್ನುವುದು ಸಿನಿಮಾ ನಿರ್ಮಾಪಕರ ಅಭಿಪ್ರಾಯವಾಗಿದೆ ಎಂದು ತಿಳಿದು ಬಂದಿದೆ.