ಎಷ್ಟೇ ಎಚ್ಚರ ವಹಿಸಿದ್ರು ಆಗಬಾರದ್ದು ಆಗೇ ಹೋಯ್ತು: ಈಗ ಚಿತ್ರ ತಂಡಕ್ಕೆ ಶುರುವಾಯ್ತು ತಲೆನೋವು!!

Entertainment Featured-Articles News

ಬಾಲಿವುಡ್ ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಒಂದರನಂತರ ಮತ್ತೊಂದು ಎನ್ನುವಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ದೀಪಿಕಾ ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಜೊತೆಗೆ ನಟಿಸುತ್ತಿರುವ ತಮ್ಮ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಅದು ಸುದ್ದಿಯಾಗಿತ್ತು. ಇನ್ನು ಇತ್ತೀಚಿಗಷ್ಟೇ ದೀಪಿಕಾ ಪ್ರಮುಖ ಪಾತ್ರದಲ್ಲಿ ಇರುವ ಗೆಹರಾಯಿಯಾ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಗೊಂಡು, ಸಿನಿಮಾದಲ್ಲಿನ ಹಸಿ ಬಿಸಿ ದೃಶ್ಯಗಳ ವಿಚಾರವಾಗಿಯೇ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿ, ಸಿನಿಮಾ ಕುರಿತಾಗಿ ಮೆಚ್ಚುಗೆಗಳು ಹಾಗೂ ಸಾಕಷ್ಟು ಟೀಕೆಗಳು ಹರಿದು ಬಂದಿದ್ದವು.

ಪ್ರಸ್ತುತ ದೀಪಿಕಾ ಪಡುಕೋಣೆ ಬಾಲಿವುಡ್ ನ‌ ಕಿಂಗ್ ಖಾನ್ ಖ್ಯಾತಿಯ ಶಾರೂಖ್ ಖಾನ್ ನಾಯಕನಾಗಿ ನಟಿಸುತ್ತಿರುವ, ಬಹು ನಿರೀಕ್ಷಿತ ಸಿನಿಮಾ ಪಠಾಣ್ ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಾತ್ರಕ್ಕೆ ವಿಶೇಷವಾದ ಮಹತ್ವ ಇದೆ ಎನ್ನಲಾಗಿದೆ. ಸಿನಿಮಾದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಉಡುಪುಗಳನ್ನು ತೊಡಲು ದೀಪಿಕಾ ಎಂದೂ ಹಿಂದೇಟು ಹಾಕುವುದಿಲ್ಲ ಎನ್ನುವುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಗೆಹರಾಯಿಯಾ ಸಿನಿಮಾದಲ್ಲಿನ ದೀಪಿಕಾ ಡ್ರೆಸ್ ಗಳು ಸಹಾ ಚರ್ಚೆಯನ್ನು ಹುಟ್ಟು ಹಾಕಿದ್ದವು.

ಈಗ ಪಠಾಣ್ ಸಿನಿಮಾದಲ್ಲಿ ಸಹಾ ದೃಶ್ಯ ಒಂದಕ್ಕಾಗಿ ದೀಪಿಕಾ ಪಡುಕೋಣೆ ಅವರು ಬಿ ಕಿ ನಿ ತೊಟ್ಟಿದ್ದಾರೆ. ಆದರೆ ಈ ಫೋಟೋಗಳನ್ನು ಚಿತ್ರ ತಂಡ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲವಾದರೂ ಇದೀಗ ದೀಪಿಕಾ ಬಿಕಿನಿ ತೊಟ್ಟ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಫೋಟೋಗಳು ಲೀಕ್ ಆಗಿರುವುದು ಇದೀಗ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಣಮಿಸಿದ್ದು, ಚಿತ್ರ ತಂಡಕ್ಕೆ ಈ ವಿಷಯ ಸಂ ಕ ಟವನ್ನು ತಂದೊಡ್ಡಿದೆ.

ಸಿನಿಮಾದಲ್ಲಿನ ಫೋಟೋಗಳು, ನಟ ನಟಿಯರ ಗೆಟಪ್ ಗಳು ಎಲ್ಲೂ ಲೀಕ್ ಆಗದಂತೆ ಇತ್ತೀಚಿನ ದಿನಗಳಲ್ಲಿ ಚಿತ್ರತಂಡಗಳು ಹೆಚ್ಚಿನ ಗಮನವನ್ನು ನೀಡುತ್ತಿವೆ. ಆದರೆ ಅದರ ಹೊರತಾಗಿಯೂ ಯಾರೋ ಕಿಡಿಗೇಡಿಗಳು ಪಠಾಣ್ ಸಿನಿಮಾದಲ್ಲಿನ ಬಿ ಕಿ ನಿ ಧರಿಸಿರುವ ಫೋಟೋಗಳನ್ನು ಲೀಕ್ ಮಾಡಿದ್ದಾರೆ. ಈ ಫೋಟೋ ಗಳನ್ನು ಈಗಾಗಲೇ ಕೋಟ್ಯಾಂತರ ಜನರು ವೀಕ್ಷಣೆಯನ್ನು ಮಾಡಿದ್ದು, ಶೇರ್ ಮಾಡಿಕೊಂಡಿದ್ದಾರೆ. ಚಿತ್ರ ತಂಡ ಇದಕ್ಕೆ ಕಾರಣರಾದವರನ್ನು ಪತ್ತೆ ಹಚ್ಚುವ ಕಡೆ ಗಮನ ನೀಡಿದೆ.

Leave a Reply

Your email address will not be published.