ಎಷ್ಟೇ ಇಷ್ಟ ಪಟ್ರೂ, ಕಷ್ಟ ಪಟ್ರೂ ನೀವು ಈ ಸಿನಿಮಾ ನೋಡೋದು ಅಸಾಧ್ಯ!! ಯಾಕೆ ಅಂತೀರಾ? ಈ ಸುದ್ದಿ ಓದಿ

Entertainment Featured-Articles Movies News Viral Video

ವಿಶ್ವದಾದ್ಯಂತ ಬೇರೆ ಬೇರೆ ಸಿನಿಮಾರಂಗದಲ್ಲಿ ವಿನೂತನ ಎನಿಸುವಂತಹ ವಿಭಿನ್ನ ಕಥಾಹಂದರ ಗಳನ್ನು ಹೊಂದಿರುವ, ಹೊಸ ಹೊಸ ಸಿನಿಮಾಗಳು ನಿರ್ಮಾಣ ಆಗುತ್ತಿದ್ದು ತೆರೆಗೆ ಬರುತ್ತಿವೆ. ಆದರೆ ಕೆಲವು ಸಿನಿಮಾಗಳು ಮಾತ್ರ ಜನರ ಮನಸ್ಸಿನ ಮೇಲೆ ತಮ್ಮ ಛಾಪನ್ನು ಮೂಡಿಸುತ್ತವೆ. ಜನರು ಇಂತಹ ಸಿನಿಮಾಗಳನ್ನು ನೋಡಿ ಬಹಳ ಇಷ್ಟಪಡುವುದು ಮಾತ್ರವೇ ಅಲ್ಲದೇ ಅಂತಹ ಸಿನಿಮಾಗಳನ್ನು ಆಗಾಗ ನೋಡುವ ಮೂಲಕ ಖುಷಿಯನ್ನು ಪಡುವುದುಂಟು. ಆದರೆ ಈಗ ಹೊಸದೊಂದು ಸಿನಿಮಾದ ಬಗ್ಗೆ ಒಂದು ರೋಚಕ ಮಾಹಿತಿ ಹೊರಬಂದಿದ್ದು ಅದು ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸುತ್ತಿದೆ.

ಈ ಹೊಸ ಸಿನಿಮಾದ ವಿಶೇಷತೆ ಏನೆಂದರೆ ಸದ್ಯ ಈ ಸುದ್ದಿಯನ್ನು ಓದುತ್ತಿರುವವರು ಯಾರೂ ಸಹಾ ಈ ಸಿನಿಮಾ ಬಿಡುಗಡೆಯಾದಾಗ ಅದನ್ನು ನೋಡುವುದು ಸಾಧ್ಯವಿಲ್ಲ. ಹೌದು, ನೀವು ಸರಿಯಾದ ವಿಚಾರವನ್ನೇ ಓದುತ್ತಿರುವಿರಿ. ಈ ಹೊಸ ಸಿನಿಮಾವನ್ನು ನಾವು ನೀವು ನೋಡುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಈ ಸಿನಿಮಾ ಬಿಡುಗಡೆಯಾಗುವುದು ಇನ್ನು 93 ವರ್ಷಗಳ ನಂತರ ಎಂದು ಹೇಳಲಾಗಿದೆ. ಅಂದರೆ ನೀವು ಈ ಸಿನಿಮಾ ನೋಡಬೇಕಾದರೆ ಇನ್ನೂ 93 ವರ್ಷಗಳು ಕಾಯಲೇಬೇಕಾಗಿದೆ.

ಆ ವೇಳೆಗೆ ಬದುಕಿರುವುದು ಕೂಡಾ ಅಸಾಧ್ಯ ಎನ್ನುವುದು ವಾಸ್ತವ. ಹಾಗಾದರೆ ಯಾವುದು ಈ ಸಿನಿಮಾ ಎನ್ನುವಿರಾ?? ಇಲ್ಲಿದೆ ಮಾಹಿತಿ. ಈ ಹೊಸ ಸಿನಿಮಾಕ್ಕೆ 100 ಇಯರ್ಸ್ – ದಿ ಮೂವಿ ಯು ವಿಲ್ ನೆವರ್ ಸೀ ( 100 years – The movie you will never see ) ಎಂದು ಟೈಟಲ್ ಅನ್ನು ಇಡಲಾಗಿದೆ. ಈ ಸಿನಿಮಾದ ಚಿತ್ರೀಕರಣವನ್ನು 2015 ರಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಸಿನಿಮಾ ಬಿಡುಗಡೆ ಮಾತ್ರ 2115 ಕ್ಕೆ ಮಾಡುವ ನಿರ್ಧಾರವನ್ನು ಮಾಡಿರುವುದು ಒಂದು ಕ್ಷಣ ಅಚ್ಚರಿಯನ್ನು ಉಂಟು ಮಾಡುತ್ತದೆ.

ಒಂದರ್ಥದಲ್ಲಿ ಸಿನಿಮಾದ ಟೈಟಲ್ ಕೂಡಾ ಅದಕ್ಕೆ 100 % ಒಪ್ಪುವಂತೆ ಇದೆ. ಒಂದು ವೇಳೆ ಚಿತ್ರ ತಂಡ ತಮ್ಮ ನಿರ್ಧಾರವನ್ನು ಬದಲಿಸದೇ ಹೋದಲ್ಲಿ ಖಂಡಿತ ನಮಗೆ ಈ ಸಿನಿಮಾ ನೋಡುವುದು ಸಾಧ್ಯವಿಲ್ಲ. ಈ ಸಿನಿಮಾದ ಕಥಾ ಹಂದರವನ್ನು ಸಹಾ ರಹಸ್ಯವಾಗಿ ಇಡಲಾಗಿದೆ‌. ಇದರ ಕಥೆಯನ್ನು ಸ್ಕ್ರಿಟ್ ಜಾನ್ ಮಾಲ್ಕೋವಿಚ್ ಸಿದ್ಧಪಡಿಸಿದ್ದರೆ, ಈ ಸಿನಿಮಾವನ್ನು ರಾಬರ್ಟ್ ರಾಡ್ರಿಗ್ಜ್ ನಿರ್ದೇಶನ ಮಾಡಿದ್ದಾರೆ. ಇನ್ನು ಇಂತಹುದೊಂದು ಸಿನಿಮಾ ಮಾಡುವ ಐಡಿಯಾ ಬಂದಿದ್ದೇ ಒಂದು ಅಪರೂಪದ ವಿಷಯವಾಗಿದೆ.

Louis XIII ಹೆಸರಿನ ಒಂದು ಬ್ರಾಂದಿ ಇದ್ದು, ಇದನ್ನು ಸಿದ್ಧಪಡಿಸಲು ನೂರು ವರ್ಷಗಳ ಕಾಲಾವಕಾಶ ಬೇಕು ಎನ್ನಲಾಗಿದ್ದು, ಅದರಂತೆ ತಮ್ಮ ಸಿನಿಮಾ ಕೂಡಾ ಸಿದ್ಧವಾಗಿ ನೂರು ವರ್ಷಗಳ ನಂತರ ಬಂದರೆ ಹೇಗಿರುತ್ತದೆ ಎನ್ನುವುದು ಮೇಕರ್ಸ್ ಐಡಿಯಾ ಆಗಿದೆ. ಈ ಸಿನಿಮಾಕ್ಕೆ ಸಂಬಂಧಿಸಿದ ಹಾಗೆ ಮೂರು ಟ್ರೈಲರ್ ಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ ಯಾವುದೇ ಟ್ರೈಲರ್ ಕೂಡಾ ಸಿನಿಮಾದ ಕಥೆಯನ್ನು ಬಿಟ್ಟು ಕೊಟ್ಟಿಲ್ಲ. ಅಲ್ಲವೇ ಇವು ವಾಸ್ತವ ಫುಟೇಜ್ ಗಳು ಅಲ್ಲ ಎಂದು ಸಹಾ ಹೇಳಲಾಗಿದೆ.

Leave a Reply

Your email address will not be published. Required fields are marked *