ಎಲ್ಲಿಂದ ಬರ್ತಿದೆ ಇಷ್ಟೊಂದು ಹಣ?? ಗೋವಾದಲ್ಲಿ ಹೊಸ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ‌

Written by Soma Shekar

Published on:

---Join Our Channel---

ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಈಗ ಸ್ಟಾರ್ ನಟಿ. ಯಶಸ್ಸಿನ ಉತ್ತುಂಗದಲ್ಲಿ ಮೆರೆಯುತ್ತಿರುವ ನಟಿಯೂ ಹೌದು. ಚಿತ್ರರಂಗಕ್ಕೆ ಅಡಿಯಿಟ್ಟಿದ್ದು ಕನ್ನಡದಿಂದಲೇ ಆದರೂ ಇಂದು ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ , ಬಾಲಿವುಡ್ ನಲ್ಲಿ ಏಕಕಾಲದಲ್ಲಿ ಎರೆಡೆರೆಡು ಸಿನಿಮಾಗಳಲ್ಲಿ ಬ್ಯುಸಿ, ಜಾಹೀರಾತುಗಳಲ್ಲಿ ಬೇಡಿಕೆ, ಇನ್ನು ತಮಿಳು ಚಿತ್ರರಂಗಕ್ಕೆ ಈಗಾಗಲೇ ಅಡಿಯಿಟ್ಟಾಗಿದ್ದು, ಅಲ್ಲಿ ಕೂಡಾ ಕ್ರೇಜ್ ಹುಟ್ಟು ಹಾಕಿರುವ ನಟಿ ರಶ್ಮಿಕಾ ಮಂದಣ್ಣ‌. ಇವೆಲ್ಲವುಗಳ ನಡುವೆ ರಶ್ಮಿಕಾ ಮನೆಗಳ ಖರೀದಿ ವಿಷಯ ಕೂಡಾ ಈಗ ಸದ್ದು ಮಾಡುತ್ತಿದೆ.

ಕೈ ತುಂಬಾ ಸಂಪಾದನೆ ಮಾಡುತ್ತಿರುವ ರಶ್ಮಿಕಾ ಮಂದಣ್ಣ ಆಸ್ತಿ ಖರೀದಿಯಲ್ಲಿ ಸಹಾ ಮುಂದಾಗಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಹೈದರಾಬಾದ್ ನಲ್ಲಿ ಒಂದು ಬಹುಕೋಟಿ ಮೌಲ್ಯದ ಮನೆಯನ್ನು ಖರೀದಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಅದಾದ ಕೆಲವೇ ದಿನಗಳಲ್ಲಿ ಐಶಾರಾಮೀ ಕಾರೊಂದನ್ನು ಖರೀದಿ ಮಾಡಿ ಸುದ್ದಿಯಾದರು ರಶ್ಮಿಕಾ ಮಂದಣ್ಣ‌.

ಬಾಲಿವುಡ್ ನಲ್ಲಿ ಎರಡೆರಡು ಸಿನಿಮಾಗಳಲ್ಲಿ ಅವಕಾಶ ಅರಸಿ ಬಂದ ಮೇಲೆ ಟ್ರಾವೆಲಿಂಗ್ ಕಷ್ಟ ಎಂದು ಮುಂಬೈ ನಲ್ಲಿ ಸಹಾ ಒಂದು ಮನೆಯನ್ನು ಖರೀದಿ ಮಾಡಿದರು ರಶ್ಮಿಕಾ, ಆಗಲೇ ರಶ್ಮಿಕಾ ಅವರ ಗಳಿಕೆ ಎಷ್ಟಿರಬಹುದು ಎನ್ನುವ ಗುಸು ಗುಸು ಆರಂಭವಾಯಿತು. ಆದರೆ ಅಭಿಮಾನಿಗಳು ಮಾತ್ರ ರಶ್ಮಿಕಾ ಮನೆಗಳನ್ನು ಖರೀದಿ ಮಾಡಿದ ವಿಚಾರ ಕೇಳಿ ಖುಷಿ ಪಟ್ಟು, ಅಭಿನಂದನೆಗಳನ್ನು ಸೂಚಿಸಿದ್ದರು.

ಸೋಶಿಯಲ್ ಮೀಡಿಯಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಆಗಾಗ ತಮ್ಮ ವಿಚಾರಗಳ ಅಪ್ಡೇಟ್ ಗಳನ್ನು ಅಭಿಮಾನಿಗಳಿಗೆ ನೀಡುವುದು ಸಹಜ. ಈಗ ಅದೇ ರೀತಿ ತಾನು ಗೋವಾದಲ್ಲಿ ಹೊಸದಾಗಿ ಮನೆಯೊಂದನ್ನು ಖರೀದಿ ಮಾಡಿರುವ ವಿಷಯವನ್ನು ರಶ್ಮಿಕಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹೊಸ ಮನೆಯ ಹೊರಾಂಗಣದ ಫೋಟೋ ಹಂಚಿಕೊಂಡಿದ್ದಾರೆ‌.

ಪ್ರಕೃತಿ ಸೌಂದರ್ಯದ ನಡುವೆ ಇರುವ ಮನೆಯಲ್ಲಿ ಈಜುಕೊಳ, ಬುದ್ಧನ ಪ್ರತಿಮೆ ಹಾಗೂ ದೊಡ್ಡ ಮರ ಎಲ್ಲವೂ ಸಹಾ ನೋಡಿದಾಗ ಬಹಳ ಆಕರ್ಷಕವಾಗಿದೆ. ರಶ್ಮಿಕಾ ಪೋಸ್ಟ್ ಹಂಚಿಕೊಂಡು ‘ಗೋವಾದಲ್ಲಿ ಹೊಸ ಮನೆ ಖರೀದಿಸಿದಾಗ ಹೊಟ್ಟೆ ಕಿಚ್ಚಾಯ್ತಾ?’ ಎಂದು ಬರೆದುಕೊಂಡಿದ್ದಾರೆ. ಕೆಲವರಿಗೆ ಖಂಡಿತ ಹೊಟ್ಟೆ ಕಿಚ್ಚು ಆಗಿರುತ್ತದೆ. ಇನ್ನೂ ಕೆಲವರಿಗೆ ರಶ್ಮಿಕಾ ಗೆ ಇಷ್ಟೊಂದು ಹಣ ಬರುತ್ತಿರುವುದು ಎಲ್ಲಿಂದ? ಎನ್ನುವ ಅನುಮಾನ ಮೂಡಿರುತ್ತದೆ.

ಈ ಅನುಮಾನಕ್ಕೆ ಉತ್ತರ ಮಾತ್ರ ವೆರಿ ಸಿಂಪಲ್.. ರಶ್ಮಿಕಾ ಬಾಲಿವುಡ್ ನ ಪ್ರಾಜೆಕ್ಟ್ ಗಳಲ್ಲಿ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಅದೇ ವೇಳೆ ಸಿ‌ನಿಮಾಗಳು ಮಾತ್ರವೇ ಅಲ್ಲದೇ ಜಾಹೀರಾತುಗಳಲ್ಲಿ ಸಹಾ ತೊಡಗಿಕೊಂಡ ಕಾರಣದಿಂದ ರಶ್ಮಿಕಾ ಗೆ ಆದಾಯ ಅಥವಾ ಸಂಪಾದನೆ ಜೋರಾಗಿಯೇ ಇದೆ ಎನ್ನಬಹುದಾಗಿದೆ. ಒಟ್ಟಾರೆ ರಶ್ಮಿಕಾ ಆಸ್ತಿ ಖರೀದಿಗಳು ಮಾತ್ರ ಜೋರಾಗಿ ನಡೆದಿದೆ.

Leave a Comment