ಎಲ್ಲಾ ಸುಳ್ಳು! ಬೋಳು ತಲೆಯ ಫೋಟೋ ಹಾಕಿ ಜನರ ಭಾವನೆಗಳ ಜೊತೆ ಆಟವಾಡಿದ ನಟಿಯ ಮೇಲೆ ನೆಟ್ಟಿಗರು ಗರಂ

Entertainment Featured-Articles News

ಎರಡು ದಿನಗಳ ಹಿಂದೆಯಷ್ಟೇ ನಟಿ ಸಂಜನಾ ಗಲ್ರಾನಿ ದೇವರ ಹರಕೆಯ ಸಲುವಾಗಿ ಅದನ್ನು ತೀರಿಸಲು, ಸಮಾಜ ಮುಖಿ ಕೆಲಸದ ಕಾರಣದಿಂದ ತಾನು ತನ್ನ ತಲೆಕೂದಲನ್ನು ತ್ಯಾಗ ಮಾಡಿರುವುದಾಗಿ, ನೋವಿನ ನಂತರ ಸುಂದರವಾದ ಜೀವನ ಕೊಟ್ಟ ಭಗವಂತನಿಗೆ ಕೃತಜ್ಞತೆಗಳನ್ನು ಎಷ್ಟು ಹೇಳಿದರೂ ಸಾಲದು ಎಂದೆಲ್ಲಾ ಭಾವನಾತ್ಮಕವಾದ ಸಾಲುಗಳನ್ನು ಬರೆದುಕೊಂಡು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಾವು ಕೇಶ ಮುಂಡನ ಮಾಡಿಸಿಕೊಂಡಿರುವ ಫೋಟೋವನ್ನು ಹಾಕಿದ್ದರು. ಈ ಫೋಟೋ ನೋಡಿದ ನೆಟ್ಟಿಗರು ಗರ್ಭಿಣಿಯಾಗಿರುವ ಸಂಜನಾ ಈ ವೇಳೆಯಲ್ಲಿ ಇಂತಹದೊಂದು ಕೆಲಸವನ್ನು ಮಾಡಿರುವುದಕ್ಕೆ ಮೆಚ್ಚಿಗೆಗಳ ಮಳೆಯನ್ನೇ ಹರಿಸಿದ್ದರು.

ಆದರೆ ಯಾರೆಲ್ಲಾ ನಟಿ ಸಂಜನಾ ಗಲ್ರಾನಿ ಅವರ ಪೋಸ್ಟ್ ನೋಡಿ ಅವರಿಗೆ ಮೆಚ್ಚುಗೆಯನ್ನು ನೀಡಿದ್ದರೀ ಈಗ ಅವರೇ ನಟಿಯ ವಿರುದ್ಧ ಸಿಟ್ಟಾಗಿದ್ದಾರೆ, ಅಸಮಾಧಾನಗೊಂಡಿದ್ದಾರೆ ಹಾಗೂ ಭಾವನೆಗಳ ಜೊತೆ ಆಟವಾಡಿದ ನಟಿಯನ್ನು ಟೀಕೆ ಮಾಡಲು ಪ್ರಾರಂಭಿಸಿದ್ದಾರೆ. ಹೌದು ನಟಿ ಸಂಜನಾ ಗಲ್ರಾನಿ ಯವರು ಏಪ್ರಿಲ್ ಫೂಲ್ ಮಾಡಲು ಇಂತಹದೊಂದು ಕೆಲಸವನ್ನು ಮಾಡಿದ್ದಾರೆ ಎಂದು ಅವರೇ ಸ್ಪಷ್ಟನೆಯನ್ನೂ ನೀಡಿದ್ದಾರೆ. ಕೇಶ ಮುಂಡನ ಮಾಡಿಸಿಕೊಂಡಿದ್ದು ಸುಳ್ಳು, ಅದು ಕೇವಲ ಏಪ್ರಿಲ್ ಫೂಲ್ ಮಾಡಲು ಎಂದು ಸ್ಪಷ್ಟನೆ ನೀಡಲು ಸಂಜನಾ ಅವರು ವಿಡಿಯೋವನ್ನು ಮಾಡಿದ್ದಾರೆ.

ಏನೇ ಆದರೂ ನಟಿ ಇಂಥದ್ದೊಂದು ಕೆಲಸ ಮಾಡಿದ್ದು ಅನೇಕರ ಮನಸ್ಸಿಗೆ ಘಾಸಿಯನ್ನು ಉಂಟು ಮಾಡಿದೆ. ಇನ್ನು ಕೆಲವರು ನಟಿ ಸಂಜನಾ ಗಲ್ರಾನಿ ಹಾಕಿದ್ದ ಬೋಳುತಲೆಯ ಪೋಸ್ಟ್ ಫೇಕ್ ಎನ್ನುವುದು ನಮಗೆ ಮೊದಲೇ ಗೊತ್ತಿತ್ತು ಎಂದಿದ್ದಾರೆ. ಒಂದು ಭಾವನಾತ್ಮಕ ವಿಚಾರದಲ್ಲಿ ಹೀಗೆಲ್ಲಾ ಪೋಸ್ಟ್ ಮಾಡಿದ ನಟಿಯನ್ನು ಟ್ರೋಲ್ ಪೇಜ್ ಗಳು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದೆ. ಇನ್ನೊಂದು ಕಡೆ ನಟಿ ಬೋಳು ತಲೆಯ ಪೋಸ್ಟ್ ಶೇರ್ ಮಾಡಿಕೊಂಡು ಬರೆದುಕೊಂಡಿದ್ದ ಸಾಲುಗಳು ಜನರನ್ನು ಮೂರ್ಖರನ್ನಾಗಿ ಮಾಡಿದ್ದು, ಅನೇಕರು ಅಸಮಾಧಾನಗೊಂಡಿದ್ದಾರೆ.

Leave a Reply

Your email address will not be published.