ಎಲ್ಲಾ ಮುನ್ನೆಚ್ಚರಿಕೆ ತಗೊಂಡ್ರು ನನಗೆ ಕೋವಿಡ್ ಪಾಸಿಟಿವ್: ನಟ ಮಹೇಶ್ ಬಾಬು ನೀಡಿದ್ದಾರೆ ಎಚ್ಚರಿಕೆ

Written by Soma Shekar

Published on:

---Join Our Channel---

ಎಲ್ಲಾ ಮುಗಿಯಿತು ಹಾಗೂ ಇನ್ನೇನು ಕೊರೊನಾ ಆತಂಕ ದೂರವಾಗಿ ಜನರ ಜೀವನ ಒಂದು ಹಂತಕ್ಕೆ ಬಂದಿತು, ಸಮಸ್ಯೆಗಳಿಂದ ಕಂಗೆಟ್ಟಿದ್ದ ಸಾಮಾನ್ಯ ಜನರು ಹೊಸ ಆರಂಭ ಮಾಡಲು ಸಜ್ಜಾಗುವ ವೇಳೆಗೆ ಕೊರೊನಾ ಮತ್ತೆ ಬಂದಿದೆ, ಓಮಿಕ್ರಾನ್ ವೈರಸ್ ನ ಅಬ್ಬರ ಹೆಚ್ಚಿದೆ ಎನ್ನುವ ಸುದ್ದಿಗಳು ಈಗಾಗಲೇ ಆ ತಂ ಕವನ್ನು ಎಲ್ಲೆಡೆ ಸೃಷ್ಟಿಸಿದೆ. ಮಾದ್ಯಮಗಳಲ್ಲಿ ಕೊರೊನಾ ಅಬ್ಬರದ ಕುರಿತಾಗಿ ಬರುತ್ತಿರುವ ಸುದ್ದಿಗಳನ್ನು ನೋಡಿ ಜನರು ಸಹಾ ಇದೆಲ್ಲಾ ನಿಜವೇನಾ?? ಅಯ್ಯೋ ಮತ್ತೆ ಜೀವನವು ಹಳಿ ತಪ್ಪಲಿದೆಯಾ?? ಎಂದು ಆಲೋಚಿಸಿ, ಆ ತಂ ಕವನ್ನು ಪಡವಂತಾಗಿದೆ.

ಇನ್ನು ಕೊರೊನಾ ಹಿನ್ನೆಲೆಯಲ್ಲಿ ಇತ್ತೀಚಿಗೆ ಸಾಲು ಸಾಲಾಗಿ ಸಿನಿಮಾ ಸೆಲೆಬ್ರಿಟಿಗಳು ಕೊರೊನಾ ತೆಕ್ಕೆಗೆ ಬೀಳುತ್ತಿದ್ದಾರೆ. ಬಾಲಿವುಡ್ ನಿಂದ ಟಾಲಿವುಡ್ ವರೆಗೂ ಹಲವು ನಟ ನಟಿಯರು ತಮಗೆ ಕೊರೊನಾ ಪಾಸಿಟಿವ್ ಆಗಿರುವುದರ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಂಚಿಕೊಂಡು ಮಾಹಿತಿಯನ್ನು ತಿಳಿಸಿದ್ದಾರೆ ಹಾಗೂ ಜನರಿಗೆ ಎಚ್ಚರಿಕೆಯಿಂದ ಇರಿ ಎನ್ನುವ ಸಲಹೆಯನ್ನು ಸಹಾ ನೀಡಿದ್ದಾರೆ. ಇದೀಗ ಟಾಲಿವುಡ್ ನಟ ಮಹೇಶ್ ಬಾಬು ಅವರು ಸಹಾ ಇಂತದ್ದೇ ವಿಷಯವನ್ನು ತಿಳಿಸಿದ್ದಾರೆ.

ಹೌದು ನಟ ಮಹೇಶ್ ಬಾಬು ಅವರಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಮಹೇಶ್ ಬಾಬು ತಮ್ಮ ಪೋಸ್ಟ್ ನಲ್ಲಿ, ನನ್ನ ಎಲ್ಲಾ ಅಭಿಮಾನಿಗಳಿಗೆ ಮತ್ತು ಹಿತೈಷಿಗಳಿಗೆ, ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಸಹ, ಸೌಮ್ಯ ರೋಗಲಕ್ಷಣಗಳೊಂದಿಗೆ ನನಗೆ COVID-19 ಪಾಸಿಟಿವ್ ಆಗಿದೆ. ನಾನು ಮನೆಯಲ್ಲಿ ನನ್ನನ್ನು ನಾನು ಪ್ರತ್ಯೇಕವಾಗಿ ಇರಿಸಿಕೊಂಡಿದ್ದೇನೆ.

ವೈದ್ಯಕೀಯ ಮಾರ್ಗದರ್ಶನವನ್ನು ಅನುಸರಿಸುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಲು ವಿನಂತಿ. ತಮ್ಮ ಲಸಿಕೆಯನ್ನು ತೆಗೆದುಕೊಳ್ಳದ ಪ್ರತಿಯೊಬ್ಬರೂ ತಕ್ಷಣವೇ ಲಸಿಕೆ ಪಡೆಯುವಂತೆ ನಾನು ಒತ್ತಾಯಿಸುತ್ತೇನೆ, ಏಕೆಂದರೆ ಇದು ತೀವ್ರವಾದ ರೋಗಲಕ್ಷಣಗಳು ಮತ್ತು ಆಸ್ಪತ್ರೆಗೆ ದಾಖಲಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ದಯವಿಟ್ಟು COVID ನಿಯಮಗಳನ್ನು ಅನುಸರಿಸಿ ಮತ್ತು ಸುರಕ್ಷಿತವಾಗಿರಿ ಎಂದು ಸಲಹೆಯನ್ನು ನೀಡಿದ್ದಾರೆ.

Leave a Comment