ಎಲ್ಲಾ ಮುಗಿದೇ ಹೋಯ್ತಾ?? ಬಹಳ ಮುಖ್ಯವಾದ ದಿನವೇ ರಶ್ಮಿಕಾ ಮೌನಕ್ಕೆ ಜಾರಿದ್ದೇಕೆ??

Entertainment Featured-Articles Movies News

ಟಾಲಿವುಡ್ ನಲ್ಲಿ ಆಗಾಗ ಸದ್ದು ಮಾಡುವ ಜೋಡಿ ಯಾರು ? ಎನ್ನುವುದಾದರೆ ಅದಕ್ಕೆ ಉತ್ತರ ತಟ್ಟನೆ ಬರುತ್ತದೆ. ರಶ್ಮಿಕಾ ಮಂದಣ್ಣ‌ ಮತ್ತು ವಿಜಯ್ ದೇವರಕೊಂಡ ಎಂದು. ಹೌದು, ತೆಲುಗು ಸಿನಿಮಾ ರಂಗದಲ್ಲಿ ಈ ಜೋಡಿಯ ಬಗ್ಗೆ ಸಾಕಷ್ಟು ಗಾಸಿಪ್ ಗಳು ಆಗಾಗ ಹರಿದಾಡುತ್ತಲೇ ಇರುತ್ತದೆ. ಈ ಜೋಡಿಯ ನಡುವೆ ಸ್ನೇಹಕ್ಕಿಂತ ಹೆಚ್ಚಿನದು ಏನೋ ಇದೆ ಎನ್ನುವುದು ಆಗಾಗ ಸುದ್ದಿಯಾಗಿತ್ತೆ. ಆದರೆ ಈ ಜೋಡಿ ಮಾತ್ರ ತಮ್ಮ ನಡುವೆ ಅಂತಹುದೇನೂ ಇಲ್ಲ, ನಾವು ಉತ್ತಮ ಸ್ನೇಹಿತರು ಎಂದೇ ಹೇಳಿಕೊಂಡು ಬರುತ್ತಿದ್ದಾರ. ಆದರೂ ಅವರ ಬಗ್ಗೆ ಸುದ್ದಿಗಳು ಮಾತ್ರ ಸದ್ದಡಗಿಲ್ಲ.

ಈ ಬಾರಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ‌ ಇಬ್ಬರೂ ಸಹಾ ಹೊಸ ವರ್ಷವನ್ನು ಜೊತೆಯಾಗಿ ಆಚರಸಿಕೊಂಡು, ಹೊಸ ವರ್ಷಕ್ಕೆ ವೆಲ್ ಕಂ ಹೇಳಿದ್ದರು. ಅನಂತರ ಕೂಡಾ ಜಿಮ್ ನಲ್ಲಿ, ರೆಸ್ಟೋರೆಂಟ್ ಗಳ ಬಳಿ ಕಾಣಿಸಿಕೊಂಡಿದ್ದರು ಈ ಜೋಡಿ. ಅವರ ಈ ನಡೆಯನ್ನು ನೋಡಿ ಸಹಜವಾಗಿಯೇ ಒಂದು ಅನುಮಾನವನ್ನು ಮೂಡಿಸಿತ್ತು. ಅಲ್ಲದೇ ಇದು ಯಾವ ಮಟ್ಟಕ್ಕೆ ಹೋಗಿತ್ತು ಎನ್ನುವುದಾದರೆ ಅವರು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಕೂಡಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು.

ಇದಾದ ನಂತರ ನಟ ವಿಜಯ ದೇವರಕೊಂಡ ಮದುವೆಯ ಬಗ್ಗೆ ಎದ್ದಿರುವ ವಿಚಾರಗಳು ಕೇವಲ ಗಾಸಿಪ್ ಮಾತ್ರವೇ ಹೊರತು ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎನ್ನುವ ಸ್ಪಷ್ಟನೆ ಯನ್ನು ನೀಡಿದರು. ರಶ್ಮಿಕಾ ಮತ್ತು ವಿಜಯ ದೇವರಕೊಂಡ ನಡುವಿನ ಸ್ನೇಹ ಮತ್ತು ಆತ್ಮೀಯತೆ ನಡುವೆ ನಾವು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಏಕೆಂದರೆ ಈ ಜೋಡಿಯ ನಡುವಿನ ಸ್ನೇಹ ಈಗಾಗಲೇ ಎಲ್ಲರಿಗೂ ಸಹಾ ತಿಳಿದಿರುವುದೇ ಆಗಿದೆ. ಆದರೆ ಈಗ ಈ ಸ್ನೇಹದಲ್ಲಿ ಏನಾದರೂ ಸಮಸ್ಯೆ ಆಗಿದೆಯೇ? ಎನ್ನುವ ಹೊಸ ಅನುಮಾನ ಹುಟ್ಟಿದೆ.

ಹೌದು, ನಿನ್ನೆ ನಟ ವಿಜಯ್ ದೇವರಕೊಂಡ ಅವರ ಜನ್ಮದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಟಾಲಿವುಡ್ ನ ಅನೇಕ ಕಲಾವಿದರು ಸೋಶಿಯಲ್ ಮೀಡಿಯಾಗಳ ಮೂಲಕ ನಟನಿಗೆ ಜನ್ಮದಿನದ ಶುಭವನ್ನು ಕೋರಿದ್ದಾರೆ. ಆದರೆ ನಟಿ ರಶ್ಮಿಕಾ ಮಾತ್ರ ತಮ್ಮ ಆತ್ಮೀಯ ಗೆಳೆಯನ ಜನ್ಮದಿನಕ್ಕೆ ಯಾವುದೇ ಶುಭಾಶಯವನ್ನು ಕೋರಿಲ್ಲ‌. ರಶ್ಮಿಕಾ ಈ ರೀತಿ ಮೌನಕ್ಕೆ ಜಾರಿರುವುದನ್ನು ಕಂಡು ಎಲ್ಲರೂ ಅಚ್ಚರಿ ಪಡುತ್ತಿದ್ದಾರೆ. ವಿಜಯ್ ದೇವರಕೊಂಡ ವಿಚಾರದಲ್ಲಿ ರಶ್ಮಿಕಾ ಈ ನಡೆ ಪ್ರಶ್ನೆಗಳಿಗೆ ಕಾರಣವಾಗಿದೆ.

ಈ ವಿಚಾರವಾಗಿ ಕೆಲವರು ಇಬ್ಬರ ನಡುವೆ ಎಲ್ಲವೂ ಸರಿಯಾಗಿದೆಯಾ? ಅಥವಾ ಏನಾದ್ರೂ ಸಮಸ್ಯೆ ಆಗಿದೆಯಾ? ಎಂದು ಕಾಮೆಂಟ್ ಗಳನ್ನು ಮಾಡಿದರೆ, ಅಭಿಮಾನಿಗಳು ಮಾತ್ರ ರಶ್ಮಿಕಾಗೆ ಸಪೋರ್ಟ್ ಮಾಡುತ್ತಾ, ಶುಭಾಶಯ ಹೇಳಿದರೆ ಮಾತ್ರವೇ ಜನ್ಮದಿನಾಚರಣೆ ಮಾಡಿದ ಹಾಗಲ್ಲ, ಒಂದು ವೇಳೆ ಇಬ್ಬರೂ ಜೊತೆಯಾಗಿಯೇ ಜನ್ಮದಿನ ಆಚರಣೆ ಮಾಡಿರಬಹುದೇನೋ? ಯಾರಿಗೆ ಗೊತ್ತು ಎನ್ನುವ ಮಾತನ್ನು ಹೇಳಿ, ನಟಿಯ ಪರ ಬ್ಯಾಟಿಂಗ್ ಮಾಡಿದ್ದಾರೆ.

Leave a Reply

Your email address will not be published. Required fields are marked *