ಎಲ್ಲಾ ಮುಗಿದೇ ಹೋಯ್ತಾ? ಅಪ್ಪನ ಮನೆಗೆ ಬಂದ ನಾಗ ಚೈತನ್ಯ, ಮುಂಬೈ ಕಡೆಗೆ ಸಮಂತಾ

Entertainment Featured-Articles News

ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಅವರ ವೈವಾಹಿಕ ಸಂಬಂಧದ ಕುರಿತಾಗಿ ಸಾಕಷ್ಟು ಚರ್ಚೆಯಾಗುತ್ತಿದೆ. ಇವರ ದಾಂಪತ್ಯ ಜೀವನದಲ್ಲಿ, ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ವಿಷಯ ಕಳೆದ ಹಲವು ದಿನಗಳಿಂದಲೂ ಕೂಡ ಬಹಳಷ್ಟು ಸುದ್ದಿಗಳಾಗಿವೆ. ಇಷ್ಟೆಲ್ಲಾ ಸುದ್ದಿಗಳು ಆಗುತ್ತಿದ್ದರೂ ಸಹಾ ನಾಗಚೈತನ್ಯ ಆಗಲೀ ಅಥವಾ ಸಮಂತಾ ಆಗಲೀ ಈ ವಿಷಯವಾಗಿ ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡುತ್ತಿಲ್ಲ. ಅವರ ಕುಟುಂಬ ವರ್ಗಗಳು ಈ ವಿಚಾರದಲ್ಲಿ ಮೌನವನ್ನು ತಾಳಿದಂತೆ ಕಾಣುತ್ತಿದೆ. ಈ ವಿಷಯವಾಗಿ ಯಾವುದೇ ಅಧಿಕೃತ ಮಾಹಿತಿ ಹೊರಗೆ ಬರದಂತೆ ಎಚ್ಚರ ವಹಿಸಿದ್ದಾರೆ.

ಈಗ ಈ ಎಲ್ಲಾ ವದಂತಿಗಳ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ನಾಗಚೈತನ್ಯ ತನ್ನ ಮನೆಯನ್ನು ಬದಲಾಯಿಸಿಕೊಂಡಿದ್ದಾರೆ. ನಟ ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಇದೀಗ ನಾಗ ಚೈತನ್ಯ ಅವರು ತಮ್ಮ ತಂದೆ, ಹಿರಿಯ ನಟ ನಾಗಾರ್ಜುನ ಹಾಗೂ ಅವರ ಪತ್ನಿ ಅಮಲಾ ವಾಸವಿರುವ ಮನೆಗೆ ಮರಳಿ ಬಂದಿದ್ದಾರೆ. ತಂದೆ ತಾಯಿ ಅವರೊಂದಿಗೆ ವಾಸಿಸಲು ನಾಗಚೈತನ್ಯ ಇಚ್ಛಿಸಿದ್ದಾರೆ.

ನಾಗಚೈತನ್ಯ ಹಾಗೂ ಸಮಂತಾ ದಂಪತಿಯ ನಡುವೆ ಹೊಂದಾಣಿಕೆಯನ್ನು ಮೂಡಿಸುವ ಸಲುವಾಗಿ ಅವರ ಎರಡು ಕುಟುಂಬಗಳು ಎಷ್ಟೇ ರೀತಿಯಲ್ಲಿ ಪ್ರಯತ್ನವನ್ನು ನಡೆಸಿದರೂ ಸಹ ಅವೆಲ್ಲವೂ ವಿಫಲವಾಗಿವೆ ಎಂದು ಹೇಳಲಾಗುತ್ತಿದೆ. ನಾಗಚೈತನ್ಯ ತಮ್ಮ ಹೆತ್ತವರೊಂದಿಗೆ ವಾಸಿಸುವ ನಿರ್ಧಾರವನ್ನು ಮಾಡಿದ ನಂತರ ಸಮಂತಾ ಹಾಗೂ ಅವರು ಜೊತೆಯಾಗಿದ್ದ ಮನೆಯನ್ನು ತೊರೆದು ತಂದೆ ತಾಯಿ ಇರುವ ಮನೆಗೆ ಬಂದಿದ್ದಾರೆ.

ಇನ್ನೊಂದು ಕಡೆ ಬಾಲಿವುಡ್ ನಲ್ಲಿ ವೆಬ್ ಸಿರೀಸ್ ಗಳು ಹಾಗೂ ಜಾಹೀರಾತು ಮತ್ತು ಸಿನಿಮಾಗಳ ಅವಕಾಶಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬಾಲಿವುಡ್ ನಲ್ಲೇ ಬ್ಯಸಿ ಆಗಲಿರುವ ನಟಿ ಸಮಂತಾ ಅವರು ಮುಂಬೈ ಮಹಾನಗರದಲ್ಲಿ ಉಳಿದುಕೊಳ್ಳಲು ಅಲ್ಲೇ ಹೊಸ ಮನೆಯೊಂದನ್ನು ನೋಡುತ್ತಿದ್ದಾರೆ. ಶೀಘ್ರದಲ್ಲೇ ಅವರು ಅಲ್ಲಿಗೆ ಶಿಫ್ಟ್ ಆಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್ ಮೂಲಕ ಹಿಂದಿಗೆ ಅಡಿಯಿಟ್ಟ ಸಮಂತಾ ಅವರಿಗೆ ಅದರಲ್ಲಿನ ಪಾತ್ರ ದೊಡ್ಡಮಟ್ಟದ ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಇದು ಅವರ ಬಾಲಿವುಡ್ ಪಯಣಕ್ಕೆ ಪೂರಕವಾಗಿದ್ದು, ಅವಕಾಶಗಳು ಅವರನ್ನು ಅರಸಿ ಬರುತ್ತಿವೆ ಎಂದು ತಿಳಿದುಬಂದಿದೆ. ಬಾಲಿವುಡ್ ನಲ್ಲಿ ಕೆರಿಯರ್ ಮಾಡುವ ಆಸೆಯಿಂದ ಸಮಂತ ಮುಂಬೈ ನಗರಕ್ಕೆ ಶಿಫ್ಟ್ ಆಗಲಿದ್ದಾರೆ.

Leave a Reply

Your email address will not be published. Required fields are marked *