ಎಲ್ಲಾ ಆಯ್ತು, ಈಗ ಕಾಟನ್ ಕ್ಯಾಂಡಿಯನ್ನೇ ಧರಿಸಿದ ಉರ್ಫಿ: ವೀಡಿಯೋ ನೋಡಿ ನೆಟ್ಟಿಗರು ಶಾಕ್!!!

Entertainment Featured-Articles News Viral Video

ಉರ್ಫಿ ಜಾವೇದ್ ಹೆಸರು ಇತ್ತೀಚಿನ ದಿನಗಳಲ್ಲಿ ಮಾದ್ಯಮಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಒಬ್ಬ ಸಿನಿಮಾ‌ ನಟಿಗಿಂತ ಹೆಚ್ಚು ಸದ್ದು ಮಾಡುವ ಉರ್ಫಿ ಸಿನಿಮಾ ಅಥವಾ ಜಾಹೀರಾತಿನಿಂದ ಅಲ್ಲ ಬದಲಿಗೆ ತನ್ನ ಡ್ರೆಸ್ ಗಳಿಂದಾಗಿಯೇ ಸುದ್ದಿಗಳಾಗುತ್ತಾರೆ. ಉರ್ಫಿ ಎಂದರೆ ಪಡ್ಡೆಗಳ ಎದೆಯಲ್ಲಿ ಒಂದು ಚಿಟ್ಟೆಗಳು ಹಾರಲು ಆರಂಭಿಸುತ್ತವೆ. ಉರ್ಫಿ ಧರಿಸುವ ಚಿತ್ರ ವಿಚಿತ್ರವಾದ ಡ್ರೆಸ್ ಗಳನ್ನು ಧರಿಸಿ ಕ್ಯಾಮೆರಾಗಳ‌ ಮುಂದೆ ಬರುವ ಉರ್ಫಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ.

ಓಟಿಟಿ ಯಲ್ಲಿ ಆರಂಭವಾಗಿದ್ದ ಹಿಂದಿಯ ಬಿಗ್ ಬಾಸ್ ನ ಮೊದಲ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದ ಉರ್ಫಿ ಶೋ ನಿಂದ ಹೊರ ಬಂದ ಮೇಲೆ ಸದಾ ಒಂದಲ್ಲಾ ಒಂದು ವಿಷಯವಾಗಿ ಸುದ್ದಿಯಾಗುತ್ತಿರುವುದು ಸಾಮಾನ್ಯವಾದ ವಿಷಯವಾಗಿದೆ. ಉರ್ಫಿಯ ಡ್ರೆಸ್ ಗಳ ಕುರಿತಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತದೆ. ಆದರೆ ಉರ್ಫಿ ಮಾತ್ರ ಇಂತಹ ಟ್ರೋಲ್ ಗಳಿಗೆ ತಲೆ ಕೆಡಿಸಿಕೊಳ್ಳದೇ ತಮ್ಮ‌ ಬಿಂದಾಸ್ ಡ್ರೆಸ್ ಗಳಿಂದ ಸುದ್ದಿಯಾಗುತ್ತಾರೆ.

ಈಗ ಇದೇ ವಿಚಾರವಾಗಿ ಉರ್ಫಿ ಮತ್ತೊಮ್ಮೆ ಸುದ್ದಿಯಾಗಿದ್ದು, ಈ ಬಾರಿ ಉರ್ಫಿ ತೊಟ್ಟ ಡ್ರೆಸ್ ನೋಡಿ ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ಸಹಾ ಶಾ ಕ್ ಆಗಿದ್ದಾರೆ. ಈ ಬಾರಿ ಒಂದು ಹೆಜ್ಜೆ ಮುಂದೆ ಇಟ್ಟ ಉರ್ಫಿ ಯಾರೂ ಸಹಾ ಊಹೆ ಮಾಡಿರದಂತಹ ಡ್ರೆಸ್ ತೊಟ್ಟು ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿದ್ದಾರೆ. ಆಡು ಭಾಷೆಯಲ್ಲಿ ಮಕ್ಕಳು ಅಜ್ಜಿ ಕೂದಲು ಎಂದು ಕರೆಯುವ ಹತ್ತಿ ಮಿಠಾಯಿ ನಿಮಗೆ ನೆನಪಿದೆಯೇ? ಬಾಲ್ಯದ ದಿನಗಳು ಸಹಾ ಈ ಹೆಸರು ಕೇಳಿದಾಗ ನೆನಪಾಗಬಹುದು.

ಈ ಬಾರಿ ಉರ್ಫಿ ತನ್ನ ಹೊಸ ಡ್ರೆಸ್ ಎಂದು ಇದೇ ಕಾಟನ್ ಕ್ಯಾಂಡಿ ಮೇಲೆ ದಾ ಳಿ ಇಟ್ಟಿದ್ದಾರೆ. ಹಸಿರು ಮತ್ತು ಗುಲಾಬಿ ಬಣ್ಣದ ಕಾಟನ್ ಕ್ಯಾಂಡಿಯಿಂದ ಸಿದ್ಧಪಡಿಸಿದ ಡ್ರೆಸ್ ಅನ್ನು ಉರ್ಫಿ ಜಾವೇದ್ ಧರಿಸಿದ್ದಾರೆ. ಅದು ಮಾತ್ರವೇ ಅಲ್ಲದೇ ತಾನು ಧರಿಸಿದ್ದ ಕಾಟನ್ ಕ್ಯಾಂಡಿಯನ್ನು ಕಿತ್ತು ತಿನ್ನುತ್ತಾ ಕ್ಯಾಮೆರಾಗೆ ಉರ್ಫಿ ಜಾವೇದ್ ಪೋಸ್ ನೀಡಿದ್ದಾರೆ. ಉರ್ಫಿ ತಾನು ಕಾಟನ್ ಕ್ಯಾಂಡಿ ಡ್ರೆಸ್ ಧರಿಸಿರುವ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಉರ್ಫಿ ಶೇರ್ ಮಾಡಿದ ವೀಡಿಯೋ ನೋಡಿ ಎಂದಿನಂತೆ ವೈವಿದ್ಯಮಯ ಪ್ರತಿಕ್ರಿಯೆಗಳು ಹರಿದು ಬಂದಿವೆ. ಕೆಲವರು ಉರ್ಫಿಗೆ ಹುಚ್ಚು ಎಂದರೆ, ಇನ್ನೂ ಕೆಲವರು ಇನ್ನು ಎಂತಹ ಡ್ರೆಸ್ ಗಳನ್ನು ಧರಿಸುವರು ಇವರು ಎಂದಿದ್ದಾರೆ. ಉರ್ಫಿಯ ಅಭಿಮಾನಿಗಳು ಮಾತ್ರ ಸೂಪರ್ ಆಗಿದೆ ಎಂದಿದ್ದಾರೆ ಅಲ್ಲದೇ ಉರ್ಫಿಯ ಈ ಡ್ರೆಸ್ ಗಳ ಸೆನ್ಸ್ ಸಖತ್ ಆಗಿದೆ ಎಂದು ಹಾಡಿ ಹೊಗಳುತ್ತಿದ್ದಾರೆ. ಉರ್ಫಿಯ ಈ ಕಾಟನ್ ಕ್ಯಾಂಡಿ ಡ್ರೆಸ್ ವೀಡಿಯೋ ಈಗ ವೈರಲ್ ಆಗಿದೆ.

Leave a Reply

Your email address will not be published.