ಎಲ್ಲರ ಊಹೆ ನಿಜವಾಗೇ ಹೋಯ್ತು:ಜೊತೆ ಜೊತೆಯಲಿ ಸೀರಿಯಲ್ ನ ಭರ್ಜರಿ ಟ್ವಿಸ್ಟ್ ಊಹಿಸಿ ಬಿಟ್ರಾ ಪ್ರೇಕ್ಷಕರು?

Entertainment Featured-Articles Movies News
59 Views

ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಹೊಸ ಹೊಸ ತಿರುವುಗಳು ಇತ್ತೀಚಿಗೆ ಪ್ರೇಕ್ಷಕರಿಗೆ ಅಚ್ಚರಿಯನ್ನು ಮೂಡಿಸಿದೆ. ಊಹಿಸಿರದ ರೋಚಕ ತಿರುವುಗಳು ಪ್ರೇಕ್ಷಕರಿಗೆ ಭರ್ಜರಿ ಶಾ ಕ್ ನೀಡುತ್ತಿದೆ ಎನ್ನುವುದರಲ್ಲೂ ಸಹಾ ಎರಡು ಮಾತಿಲ್ಲ. ಸೀರಿಯಲ್ ನ ಪ್ರಮುಖ ಪಾತ್ರ ಆರ್ಯವರ್ಧನ್ ಆಗಿ ನಟಿಸುತ್ತಿದ್ದ ನಟ ಅನಿರುದ್ಧ್ ಅವರಿಗೆ ಸೀರಿಯಲ್ ತಂಡವು ಗೇಟ್ ಪಾಸ್ ಕೊಟ್ಟ ಮೇಲೆ ಆ ಪಾತ್ರವನ್ನು ಯಾರು ಮಾಡಲಿದ್ದಾರೆ? ಆರ್ಯವರ್ಧನ್ ಪಾತ್ರಕ್ಕೆ ಬರಲಿರುವ ನಟ ಯಾರು? ಅಥವಾ ಆ ಪಾತ್ರವೇ ಇನ್ನು ಮುಂದೆ ಇರುವುದಿಲ್ಲವೇ? ಎನ್ನುವ ಹತ್ತು ಹಲವು ಪ್ರಶ್ನೆಗಳು ಪ್ರೇಕ್ಷಕರನ್ನು ಕಾಡಿತ್ತು. ಅಲ್ಲದೇ ನಟ ಹರೀಶ್ ರಾಜ್ ಅವರು ಆರ್ಯವರ್ಧನ್ ಪಾತ್ರಕ್ಕೆ ಬರಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು.

ಆದರೆ ಹರೀಶ್ ರಾಜ್ ಅವರು ಆರ್ಯವರ್ಧನ್ ಬದಲಾಗಿ, ಅವರ ಸಹೋದರ ವಿಶ್ವಾಸ್ ಪಾತ್ರದ ಮೂಲಕ ಸೀರಿಯಲ್ ಗೆ ಎಂಟ್ರಿ ನೀಡುವ ಮೂಲಕ ತನ್ನದು ಆರ್ಯವರ್ಧನ್ ಪಾತ್ರವಲ್ಲ ಎನ್ನುವಂತೆಯೇ ಬಿಂಬಿಸಲಾಗಿತ್ತು. ಆದರೆ ಇದೀಗ ಸೀರಿಯಲ್ ನಲ್ಲಿ ಹೊಸ ಟ್ವಿಸ್ಟ್ ಒಂದನ್ನು ನೀಡುವ ಮೂಲಕ ನಿರ್ದೇಶಕರು ಆರ್ಯವರ್ಧನ್ ಪಾತ್ರವನ್ನು ಉಳಿಸಿಕೊಳ್ಳಲು ಒಂದು ವಿಶೇಷವಾದ ಹೊಸ ಐಡಿಯಾ ಅಥವಾ ಆಲೋಚನೆಯನ್ನು ಮಾಡಿದ್ದಾರೆ. ವಿಶ್ವಾಸ್ ದೇಸಾಯಿ ಪಾತ್ರದ ಮೂಲಕ ಜೊತೆ ಜೊತೆಯಲಿ ಸೀರಿಯಲ್ ಗೆ ಎಂಟ್ರಿ ಕೊಟ್ಟ ಹರೀಶ್ ರಾಜ್ ಅವರ ಪಾತ್ರಕ್ಕೆ ಒಂದೇ ವಾರದಲ್ಲಿ ಕೊನೆ ಹಾಡಲಾಗಿದೆ.

ಹಾಗೆಂದ ಮಾತ್ರಕ್ಕೆ ಹರೀಶ್ ರಾಜ್ ಅವರ ಪಾತ್ರ ಮುಗಿಯಿತಾ ಎಂದು ಕೊಂಡರೆ ಅಲ್ಲೇ ಈಗ ಹೊಸ ಟ್ವಿಸ್ಟ್ ಎದುರಾಗಿದೆ. ಆರ್ಯವರ್ಧನ್ ಪಾತ್ರ ಅ ಪ ಘಾ ತಕ್ಕೆ ಈಡಾಗಿ ಆಸ್ಪತ್ರೆಗೆ ಸೇರಿದ್ದು ಮುಖವೆಲ್ಲಾ ನಜ್ಜುಗುಜ್ಜಾಗಿದೆ ಎನ್ನಲಾಗಿದೆ. ಇದೇ ವೇಳೆ ವಿಶ್ವಾಸ್ ಕೊನೆಯುಸಿರೆಳೆದ ವಿಚಾರವನ್ನು ವೈದ್ಯರು ಪ್ರಿಯದರ್ಶಿನಿ ಅವರಿಗೆ ತಿಳಿಸಿದ್ದಾರೆ. ಒಂದು ಕಡೆ ಒಬ್ಬ ಮಗನ ಸಾವು, ಇನ್ನೊಂದು ಕಡೆ ಮತ್ತೊಬ್ಬ ಮಗನ ಮುಖಕ್ಕೆ ಆಗಿರುವ ಏಟು, ಈ ಸಂದರ್ಭದಲ್ಲಿ ವೈದ್ಯರು ಫೇಸ್ ಟ್ರಾನ್ಸ್ ಪ್ಲಾಂಟ್ ಮಾಡುವ ಸಲಹೆಯನ್ನು ನೀಡುವರು ಎನ್ನುವ ವಿಚಾರವೊಂದು ಹರಿದಾಡಿದೆ.

ಅಂದರೆ ಈಗ ಅನಿರುದ್ಧ್ ಅವರ ಪಾತ್ರಕ್ಕೆ ಕೊನೆ ಹಾಡಲು, ವಿಶ್ವಾಸ್ ಪಾತ್ರದ ಮುಖವನ್ನು ಆರ್ಯವರ್ಧನ್ ಗೆ ಫೇಸ್ ಟ್ರಾನ್ಸ್ ಪ್ಲಾಂಟ್ ಮಾಡುವ ಹೊಸ ತಂತ್ರಜ್ಞಾನದ ಮೂಲಕ ಆರ್ಯವರ್ಧನ್ ಪಾತ್ರವನ್ನು ಹೊಸ ಮುಖದ ಮೂಲಕ ಜೀವಂತವಾಗಿ ಇಡುವ ಪ್ರಯತ್ನಕ್ಕೆ ಮುಂದಾದಂತೆ ಕಂಡಿದೆ. ಈ ಮೂಲಕ ಹರೀಶ್ ರಾಜ್ ಅವರನ್ನೇ ಆರ್ಯವರ್ಧನ್ ಪಾತ್ರಕ್ಕೆ ಫಿಕ್ಸ್ ಮಾಡಲು ಸೀರಿಯಲ್ ತಂಡವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅಂದ ಮೇಲೆ ಇನ್ಮುಂದೆ ಹರೀಶ್ ರಾಜ್ ಅವರೇ ಆರ್ಯವರ್ಧನ್ ಪಾತ್ರದಲ್ಲಿ ಮುಂದುವರೆಯುವುದು ಪಕ್ಕಾ ಎಂದು ಊಹಿಸಬಹುದಾಗಿದೆ.

Leave a Reply

Your email address will not be published. Required fields are marked *