ಎರಡನೇ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕಿಯಾಗಲಿದ್ದಾರಾ ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ?

Written by Soma Shekar

Published on:

---Join Our Channel---

ಜೊತೆ ಜೊತೆಯಲಿ ಸೀರಿಯಲ್ ನ ಮೂಲಕ ಜನಪ್ರಿಯತೆ ಪಡೆದುಕೊಂಡು ಒಬ್ಬ ಸಿನಿಮಾ ನಟಿಯಷ್ಟೇ ಫೇಮಸ್ ಆಗಿರುವ ನಟಿ ಅನು ಸಿರಿಮನೆ ಪಾತ್ರದ ಮೂಲಕ ಮನೆ ಮನೆ ಮಾತಾಗಿರುವಂತಹ ಮೇಘಾ ಶೆಟ್ಟಿ ಅವರು. ಈ ಸೀರಿಯಲ್ ನಿಂದ ಜನಪ್ರಿಯತೆ ಪಡೆದುಕೊಂಡ ನಟಿ ಮೇಘಾ ಶೆಟ್ಟಿ ಅವರು ಈಗಾಗಲೇ ಸ್ಯಾಂಡಲ್ವುಡ್ ನಲ್ಲೂ ಮೊದಲ ಸಿನಿಮಾ‌ ಮುಗಿಸಿದ್ದಾಗಿದೆ. ಹೌದು ಗೋಲ್ಡನ್ ಸ್ಟಾರ್ ಗಣೇಶ್ ಅವರ ತ್ರಿಬಲ್ ರೈಡಿಂಗ್ ಮೂಲಕ ಮೇಘಾ ಶೆಟ್ಟಿ ಅವರ‌ ಸಿನಿಮಾ ಜರ್ನಿ ಆರಂಭವಾಗಿದೆ. ಇನ್ನು ಸಿನಿಮಾದಲ್ಲಿ ನಟಿಸುತ್ತಲೇ, ಸೀರಿಯಲ್ ನಲ್ಲೂ ಪಾತ್ರ ಮಾಡುತ್ತಿದ್ದಾರೆ ಮೇಘಾ ಶೆಟ್ಟಿ ಅವರು.

ಮೊದಲ ಸಿನಿಮಾ ಮುಗಿದು ಬಿಡುಗಡೆಗೆ ಸಜ್ಜಾಗ್ತಿದೆ. ಆದರೆ ಅಭಿಮಾನಿಗಳಿಗೆ ಸಹಜವಾಗಿಯೇ ಒಂದು ಕುತೂಹಲ ಇರುತ್ತೆ, ಮೇಘಾ ಶೆಟ್ಟಿ ಅವರ ಮುಂದಿನ ಸಿನಿಮಾ ಯಾವುದಾಗಬಹುದು? ಅವರು ಯಾವ ನಾಯಕನ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ? ಎನ್ನುವ ಪ್ರಶ್ನೆಗಳು ಇದ್ದೇ ಇರುತ್ತದೆ. ಈಗ ಅದಕ್ಕೆ ಉತ್ತರ ನೀಡುವಂತಹ ಸುದ್ದಿಯೊಂದು ಮಾದ್ಯಮಗಳಲ್ಲಿ ಹರಿದಾಡಿದೆ. ಮೇಘಾ ಶೆಟ್ಟಿಯವರು ಯಾರ ಜೊತೆ ಮುಂದಿನ ಸಿನಿಮಾ ಮಾಡಲಿದ್ದಾರೆ ಅನ್ನೋ ಸುಳಿವು ದೊರೆತಿದೆ.

ಲವ್ ಮಾಕ್ಟೇಲ್ ಸಿನಿಮಾದ ಮೂಲಕ ದೊಡ್ಡ ಯಶಸ್ಸನ್ನು ಪಡೆದುಕೊಂಡ ನಟ,‌ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರ ಹೊಸ ಸಿನಿಮಾವೊಂದು ಶೀಘ್ರದಲ್ಲೇ ಲಾಂಚ್ ಆಗಲಿದ್ದು, ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇದ್ದಾರೆ ಎನ್ನಲಾಗಿದೆ. ಅದರಲ್ಲಿ ಒಬ್ಬರು ನಿಶ್ವಿಕಾ ನಾಯ್ಡು ಮತ್ತೊಬ್ಬರು ಜೊತೆ ಜೊತೆಯಲಿ ಸೀರಿಯಲ್ ನ ಖ್ಯಾತಿಯ ಮೇಘಾ ಶೆಟ್ಟಿ ಎನ್ನುವ ವಿಷಯ ಸುದ್ದಿಯಾಗಿ ಗಮನ ಸೆಳೆದಿದೆ.

ಡಾರ್ಲಿಂಗ್ ಕೃಷ್ಣ ಅವರ ಈ ಹೊಸ ಸಿನಿಮಾದ ಟೈಟಲ್ ಅನ್ನು ದಕ್ಷ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಬಿಡುಗಡೆ ಮಾಡಲಿದ್ದಾರೆ. ಬಹುಶಃ ಸಿನಿಮಾ ಟೈಟಲ್ ಅಧಿಕೃತವಾಗಿ ಘೋಷಣೆಯಾದ ನಂತರ ಸಿನಿಮಾದ ಇಬ್ಬರು ನಾಯಕಿಯರ ಹೆಸರುಗಳನ್ನು ಸಹಾ ಚಿತ್ರ ತಂಡ ಅಧಿಕೃತವಾಗಿ ಘೋಷಣೆ ಮಾಡಬಹುದು ಎನ್ನುವ ನಿರೀಕ್ಷೆ ಇದೆ. ಸುದ್ದಿ ನಿಜವಾದರೆ ಮೇಘಾ ಶೆಟ್ಟಿ ಅವರು ಎರಡನೇ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿ ಆಗಲಿದ್ದಾರೆ.

ಮೇಘಾ ಶೆಟ್ಟಿ ಅವರು ಕೆಲವೇ ದಿನಗಳ ಹಿಂದೆ ತಮ್ಮ ಮೊದಲ ಸಿನಿಮಾ ತ್ರಿಬಲ್ ರೈಡಿಂಗ್ ಪೂರ್ತಿಯಾದ ಹಿನ್ನೆಲೆಯಲ್ಲಿ ಬೂದುಗುಂಬಳ ಹೊಡೆದು ಸಂಪ್ರದಾಯ ಆಚರಣೆ ಮಾಡಿದ ವೀಡಿಯೋ ಹಾಗೂ ಚಿತ್ರ ತಂಡದ ಗ್ರೂಪ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಅವರು ಶೇರ್ ಮಾಡಿಕೊಂಡ ಫೋಟೋ, ವೀಡಿಯೋ ನೋಡಿ ಅಭಿಮಾನಿಗಳು ಆಲ್ ದಿ ಬೆಸ್ಟ್ ಹೇಳಿದ್ದಾರೆ.

Leave a Comment