ಎಬಿ ಡಿವಿಲಿಯರ್ಸ್ ನಿರ್ಧಾರ ನನಗೆ ಆಘಾತ ಉಂಟು ಮಾಡಿತ್ತು: ಗ್ಲೆನ್‌ ಮ್ಯಾಕ್ಸ್ ವೆಲ್!

0 3

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಕಳೆದ ವರ್ಷ ತಾವು ಎಲ್ಲಾ‌ ಸ್ವರೂಪದ ಕ್ರಿಕೆಟ್ ಗೆ ವಿದಾಯವನ್ನು ಹೇಳಿದ್ದಾರೆಂಬ ವಿಚಾರವನ್ನು ಕೇಳಿದಾಗ ತನಗೆ ಅದೊಂದು ಆ ಘಾ ತ ಎನಿಸಿತ್ತು. ಏಕೆಂದರೆ ಅವರು ಇನ್ನೂ ಒಂದು ವರ್ಷ ಆಡುತ್ತಾರೆಂದು ನಾನು ನಂಬಿದ್ದೆ ಎನ್ನುವ ಮಾತನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಆಲ್ ರೌಂಡರ್ ಆಗಿರುವ ಗ್ಲೆನ್ ಮ್ಯಾಕ್ಸ್ ವೆಲ್ ಅವರು ತಿಳಿಸಿದ್ದಾರೆ. ಕಳೆದ ವರ್ಷ ಅಂದರೆ 2021 ರಲ್ಲಿ ಐಪಿಎಲ್ ಪಂದ್ಯಾವಳಿಗಳು ಮುಗಿದ ಮೇಲೆ ನವೆಂಬರ್ ತಿಂಗಳಿನಲ್ಲಿ ಎಬಿ ಡಿವಿಲಿಯರ್ಸ್ ಎಲ್ಲಾ ವಿಧದ ಕ್ರಿಕೆಟ್‌ ಗೂ ವಿದಾಯವನ್ನು ಹೇಳಿದ್ದರು.

ಎಬಿ ಡಿವಿಲಿಯರ್ಸ್ ಇಂತಹುದೊಂದು ವಿಚಾರವನ್ನು ಹೇಳುವ ಮೂಲಕ ಆರ್ ಸಿ ಬಿ ಜೊತೆಗಿನ ತಮ್ಮ ಸುಮಾರು 10 ವರ್ಷಗಳ ಒಡನಾಟಕ್ಕೆ ಅವರು ವಿದಾಯವನ್ನು ಘೋಷಣೆಯನ್ನು ಮಾಡಿದ್ದರು. ಎಬಿ ಡಿವಿಲಿಯರ್ಸ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಗೆ 2018 ರಲ್ಲೇ ಅಧಿಕೃತವಾಗಿ ವಿದಾಯವನ್ನು ಘೋಷಣೆ ಮಾಡಿದ್ದರು. ಆದರೆ ಅನಂತರ ಅವರು ವಿಶ್ವದಾದ್ಯಂತ ಫ್ರಾಂಚೈಸಿ ಲೀಗ್ ಟೂರ್ನಿ ಗಳಲ್ಲಿ ಮಾತ್ರವೇ ಸಕ್ರಿಯವಾಗಿದ್ದರು. ಅವರು ಕ್ರಿಕೆಟ್ ಗೆ ವಿದಾಯ ಹೇಳಿದ್ದರ ಬಗ್ಗೆ ಮ್ಯಾಕ್ಸ್ ವೆಲ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿರುವ ವೀಡಿಯೋದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಅವರು ತಮ್ಮ ಸಹ ಆಟಗಾರ ಎಬಿ ಡಿವಿಲಿಯರ್ಸ್ ಬಗ್ಗೆ ಸ್ಮರಿಸಿಕೊಂಡು, ಅವರು ವಿದಾಯದ ಮಾತುಗಳನ್ನು ಆಡಿದ್ದು ಕೇಳಿದಾಗ ನನಗೆ ಸ್ವಲ್ಪ ಆ ಘಾ ತ ವಾಗಿತ್ತು ಎನ್ನುವ ಮಾತನ್ನು ಹೇಳಿದ್ದಾರೆ. ಅವರು ಮಾತನಾಡುತ್ತಾ, ಆರ್ ಸಿ ಬಿ ಗೆ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಎಷ್ಟು ಮಹತ್ವ ದ ಆಟಗಾರರು ಎನ್ನುವುದನ್ನು ನಾನು ಅರ್ಥ ಮಾಡಿಕೊಂಡಿದ್ದೆ.

ಅವರಿಬ್ಬರೂ ಸಹಾ ಒಳ್ಳೆಯ ಸ್ನೇಹಿತರಾಗಿದ್ದರು. ನಾನು ತಮಾಷೆಗೆ ಆಗಾಗ ಅವರನ್ನು ಬೇರೆ ಬೇರೆ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದೆ. ಕಳೆದ ವರ್ಷ ಇಬ್ಬರೂ ಒಂದೇ ತಂಡಕ್ಕಾಗಿ ಆಡುವುದನ್ನು ನೋಡಿದಾಗ ಖುಷಿಯಾಗಿತ್ತು. ಪ್ರತಿದಿನ ನಾವು ಆಟಕ್ಕೆ ತೆರಳುವ ಮುನ್ನ ಟೇಬಲ್ ಟೆನ್ನಿಸ್ ಆಡುತ್ತಿದ್ದೆವು. ಅವರು ಕೆಲವೊಮ್ಮೆ ಗರಂ ಆಗಿರುತ್ತಿದ್ದರು, ಇನ್ನೂ ಕೆಲವೊಮ್ಮೆ ಬಹಳ ಖುಷಿಯಾಗಿ ಕಾಣುತ್ತಿದ್ದರು. ಡಿವಿಲಿಯರ್ಸ್ ಅವರ ಜೊತೆಗೆ ಡ್ರಿಂಕ್ಸ್ ಮಾಡುವುದು, ಜೀವನದ ಕುರಿತಾಗಿ ಮಾತನಾಡುವುದು ಅದ್ಭುತವಾಗಿತ್ತು. ಅಂತ ದಿಗ್ಗಜ ಆಟಗಾರನ ಜೊತೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುವ ಅವಕಾಶ ನನಗೆ ಸಿಕ್ಕಿದೆ.

ಆದರೆ ಅವರು ಎಲ್ಲಾ ಸ್ವರೂಪದ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ ಎನ್ನುವುದನ್ನು ಕೇಳಿದಾಗ ನನಗೆ ಸ್ವಲ್ಪ ಆ ಘಾ ತ ಆಗಿತ್ತು. ಅವರು ಇನ್ನೊಂದು ವರ್ಷ ಕ್ರಿಕೆಟ್ ನಲ್ಲಿ ಮುಂದುವರೆಯುತ್ತಾರೆಂದು ನಾನು ಭಾವಿಸಿದ್ದೆ. ಅವರು ಕ್ರಿಕೆಟ್ ಗೆ ವಿದಾಯ ಹೇಳಿದ್ದರೂ ಸಹಾ ಅವರು ಇಂದಿಗೂ ನಮಗೆ ಸೆಲೆಬ್ರಿಟಿ. ಅವರು ಸದಾ ನಮ್ಮ ತಂಡದ ಜೊತೆಗೆ ಇದ್ದೇ ಇರುತ್ತಾರೆ ಎನ್ನುವ ಮಾತುಗಳನ್ನು ಗ್ಲೆನ್ ಮ್ಯಾಕ್ಸ್ ವೆಲ್ ಅವರು ಹೇಳುವ ಮೂಲಕ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Leave A Reply

Your email address will not be published.