ಎದೆ ಮೇಲೆ ಯೋಗಿ ಆದಿತ್ಯನಾಥ್ ಟ್ಯಾಟೂ ಹಾಕಿಸಿಕೊಂಡ ಮುಸ್ಲಿಂ ಯುವಕ: ಅಭಿಮಾನದಿಂದ ಹೇಳಿದ್ದೇನು ನೋಡಿ!!

Entertainment Featured-Articles News

ಮುಸ್ಲಿಂ ಯುವಕನೊಬ್ಬ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರವನ್ನು ತನ್ನ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡು ತನ್ನ ಅಭಿಮಾನವನ್ನು ವ್ಯಕ್ತಪಡಿಸಿದ್ದು, ಆತನ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ಯೋಗಿ ಆದಿತ್ಯ ನಾಥ್ ಅವರ ಚಿತ್ರವನ್ನು ಟ್ಯಾಟೂ ಮಾಡಿಸಿಕೊಂಡಿರುವ ಈ ಯುವಕನ ಹೆಸರು ಯಮೀನ್ ಸಿದ್ದಿಕಿ ಎನ್ನಲಾಗಿದ್ದು ಈತನ ವಯಸ್ಸು 23 ವರ್ಷ. ಈತ ಫರೂಕಾಬಾದ್ ಮತ್ತು ಮೈನ್‍ಪುರಿ ಜಿಲ್ಲೆಗಳ ಗಡಿಯಲ್ಲಿರುವ ಹಳ್ಳಿಯ ನಿವಾಸಿಯಾಗಿದ್ದಾನೆ.

ಸಿದ್ದೀಕಿ ತನ್ನ ಊರಿನಲ್ಲಿ ಪಾದರಕ್ಷೆಗಳ ವ್ಯಾಪಾರಿಯಾಗಿದ್ದು, ಈತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತನ್ನ ರೋಲ್ ಮಾಡೆಲ್ ಎಂದು ಹೇಳಿದ್ದು, ಯೋಗಿ ಆದಿತ್ಯನಾಥ್ ಅವರ ಜನ್ಮದಿನದ ಪ್ರಯುಕ್ತ ಅವರ ಚಿತ್ರವನ್ನು ತನ್ನ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡು ತನ್ನ ಅಭಿಮಾನವನ್ನು ಮೆರೆದಿದ್ದಾನೆ. ಈ ವಿಚಾರವಾಗಿ ಮಾತನಾಡಿರುವ ಸಿದ್ಧೀಕಿ ತಾನು ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಅವರಿಗೆ ಈ ಟ್ಯಾಟೂ ತೋರಿಸಬೇಕೆನ್ನುವ ಆಸೆ ಇದೆ ಎನ್ನುವ ಮಾತನ್ನು ಹೇಳಿದ್ದಾನೆ.

ಸಿದ್ದೀಕಿ ಮಾತನಾಡುತ್ತಾ, ಯೋಗಿ ಆದಿತ್ಯನಾಥ್ ಅವರ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಗೌರವವಿದ್ದು ಅವರು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಇಡೀ ರಾಜ್ಯದಲ್ಲಿ ಬದಲಾವಣೆಯನ್ನು ತಂದಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಎನ್ನುವ ಯಾವುದೇ ತಾರತಮ್ಯವಿಲ್ಲದೇ ಎಲ್ಲರೂ ಸಹಾ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ  ಎಂದು ಯೋಗಿ ಆಡಳಿತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾನೆ.

Leave a Reply

Your email address will not be published.