ಎದೆ ತುಂಬಿ ಹಾಡುವೆನು ಶೋ ನ ಗಾಯನ ಪ್ರತಿಭೆ ಸೂರ್ಯಕಾಂತ್ ಹೊಸ ರೂಪ ನೋಡಿ ಶಾ ಕ್ ಆದ ಜಡ್ಜ್ ಗಳು

0 4

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಸಿಂಗಿಂಗ್ ರಿಯಾಲಿಟಿ ಶೋ ಎದೆ ತುಂಬಿ ಹಾಡುವೆನು ಈಗಾಗಲೇ ಸಂಗೀತ ಪ್ರಿಯರ ಮನಸ್ಸನ್ನು ಗೆದ್ದು, ಅಪಾರ ಜನಾದರಣೆಯನ್ನು ಪಡೆದುಕೊಂಡು ಮುಂದೆ ಸಾಗುತ್ತಿರುವ ವಿಶೇಷ ಗಾಯನ ಕಾರ್ಯಕ್ರಮವಾಗಿದೆ. ನಾಡಿನ ಮೂಲೆ ಮೂಲೆಗಳಿಂದ ಬಂದಿರುವ ಗಾಯನ ಪ್ರತಿಭೆಗಳು ಈ ವೇದಿಕೆಯ ಮೇಲೆ ಹಾಡಿ ಜನರನ್ನು ರಂಜಿಸುತ್ತಿದ್ದಾರೆ. ಇಂತಹ ಅದ್ಭುತ ಗಾಯನ ಪ್ರತಿಭೆಗಳಲ್ಲಿ ಒಬ್ಬರು, ಈಗಾಗಲೇ ಸಾಕಷ್ಟು ಸದ್ದು, ಸುದ್ದಿ ಮಾಡಿರುವ ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡ್ಡದ ಲಿಂಗನ ಹಳ್ಳಿಯ ಸೂರ್ಯಕಾಂತ್.

ಸೂರ್ಯಕಾಂತ್ ಅವರಿಗೆ ಈಗ ಪ್ರತ್ಯೇಕ ಪರಿಚಯದ ಅಗತ್ಯ ಇಲ್ಲ ಎನ್ನುವಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಮಾತಿಗೆ ಅವರ ತೊದಲುವಿಕೆ ಅಡ್ಡಿಯಾದರೂ, ಗಾಯನಕ್ಕೆ ಅದು ತಡೆಯಾಗಿಲ್ಲ. ಅದೇ ಈ ಗಾಯಕನ ವೈಶಿಷ್ಟ್ಯ. ಬಡ ಕುಟುಂಬದಿಂದ ಬಂದ ಸಾಮಾನ್ಯ ಹಾಗೂ ಮುಗ್ಧ ಮನಸ್ಸಿನ ಸೂರ್ಯಕಾಂತ್ ಅವರು ಈ ವಾರ ಕಾರ್ಯಕ್ರಮದಲ್ಲಿ ಹೊಸ ರೂಪದಲ್ಲಿ ವೇದಿಕೆಗೆ ಬಂದಿದ್ದಾರೆ. ಹೌದು ಯಾವಾಗಲೂ ಮೃದು ಸ್ವಭಾವದ ವ್ಯಕ್ತಿಯಾಗಿಯೇ ಜನರ ಮುಂದೆ ಕಂಡಿದ್ದ ಸೂರ್ಯಕಾಂತ್ ಈ ವಾರ ಎಲ್ಲರಿಗೂ ಒಂದು ಸರ್ಪ್ರೈಸ್ ನೀಡಲು ಸಜ್ಜಾಗಿದ್ದಾರೆ.

ಕನ್ನಡ ಸಿನಿಮಾದ ಒಂದು ಪಕ್ಕಾ ಮಾಸ್ ಹಾಡಲು, ತಾನು ಕೂಡಾ ಮಾಸ್ ಆಗಿ ಡ್ರೆಸ್ ಅಪ್ ಆಗಿ ಹಾಡಲು ಬಂದಿದ್ದಾರೆ ಸೂರ್ಯಕಾಂತ್. ಅವರ ಲುಕ್, ಸ್ಟೈಲ್, ಮಾಸ್ ಹಾವ ಭಾವ ನೋಡಿ ಶೋ ನ ಜಡ್ಜ್ ಗಳು ಶಾ ಕ್ ಆಗಿದ್ದಾರೆ. ಹೊಸ ಸೂರ್ಯಕಾಂತ್ ನ ನೋಡ್ತಾ ಇದ್ದೀವಿ ಎಂದಿದ್ದಾರೆ. ಅಲ್ಲದೇ ಸೂರ್ಯಕಾಂತ್ ಅವರನ್ನು ನೋಡಿ ಆಶ್ಚರ್ಯ ಆಯ್ತು ಎಂದಿದ್ದಾರೆ ರಾಜೇಶ್ ಕೃಷ್ಣನ್. ಶೋ ನ ಮತ್ತೊಬ್ಬ ಜಡ್ಜ್ ನಿಮ್ಮೊಳಗೆ ಒಬ್ಬ ಮಾಸ್ ಹೀರೋ ಇದ್ದಾನೆ ಅಂತ ಗೊತ್ತಾಗ್ತಿದೆ ಎಂದು ಸಂತೋಷದಿಂದ ಶಿಳ್ಳೆ ಹೊಡೆದು ಸಂಭ್ರಮಿಸಿದ್ದಾರೆ.

ವೇದಿಕೆಗೆ ಸೂರ್ಯಕಾಂತ್ ಅವರ ತಾಯಿಯನ್ನು ಕರೆಸಿ ಯಾವತ್ತಾದ್ರೂ ಮಗನ ಜೊತೆ ಡಾನ್ಸ್ ಮಾಡಿದ್ದೀರಾ ಎಂದಾಗ ಆ ತಾಯಿ ಇಲ್ಲ ಎಂದಿದ್ದಾರೆ. ಈ ವೇಳೆ ಜೋಗಿ ಸಿನಿಮಾದಲ್ಲಿ ತಾಯಿ, ಮಗ ಡಾನ್ಸ್ ಮಾಡುವ ಮ್ಯೂಸಿಕ್ ಹಾಕಿದಾಗ ಸೂರ್ಯಕಾಂತ್ ತಾಯಿ ಜೊತೆಗೆ ಡಾನ್ಸ್ ಮಾಡಿದ್ದಾರೆ. ಇದೊಂದು ಭಾವನಾತ್ಮಕ ಕ್ಷಣ ಎಂದು ಶೋ ನ ಜಡ್ಜ್ ಆದ ಗುರುಕಿರಣ್ ಅವರು ತಮ್ಮ ಮಾತನ್ನು ಹಂಚಿಕೊಂಡಿದ್ದಾರೆ. ವಾಹಿನಿ ಶೇರ್ ಮಾಡಿದ ಈ ವೀಡಿಯೋ ಎಲ್ಲರ ಗಮನ ಸೆಳೆದಿದೆ.

Leave A Reply

Your email address will not be published.