ರಾಜ್ಯದಲ್ಲಿ ಓಮಿಕ್ರಾನ್ ಹರಡುವಿಕೆಯ ಆ ತಂ ಕ ದಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ನೈಟ್ ಕರ್ಫ್ಯೂ ಜಾರಿಯಾಗಿದೆ. ಮೊದಲನೇ ದಿನದ ನೈಟ್ ಕರ್ಫ್ಯೂ ಮುಗಿದಿದೆ ಕೂಡಾ. ಇನ್ನು ಮೊದಲ ದಿನದ ನೈಟ್ ಕರ್ಫ್ಯೂ ವೇಳೆ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯ ಸುರೇಶ್ ಅವರು ಕುಡಿದ ಮತ್ತಿನಲ್ಲಿ ರಂಪಾಟ ಮಾಡಿರುವಂತಹ ಘಟನೆ ನಡೆದಿದೆ. ಸೆಲೆಬ್ರಿಟಿಗಳ ಜೀವನ ಸಾಮಾನ್ಯರ ಜೀವನದ ಹಾಗೆ ಖಂಡಿತ ಇರೋದಿಲ್ಲ. ಪಾರ್ಟಿ, ಪಬ್ ಸಂಸ್ಕೃತಿ ಅವರ ಜೀವನದ ಒಂದು ಭಾಗವೇ ಆಗಿರುತ್ತದೆಯೇನೋ ಎನ್ನುವುದು ಆಗಾಗ ಅವರ ಲೈಫ್ ಸ್ಟೈಲ್ ನಮ್ಮ ಮುಂದೆ ಬಂದಾಗ ಅರ್ಥವಾಗುತ್ತದೆ.
ಇನ್ನು ಕಳೆದ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸಖತ್ ಸುದ್ದಿ ಮಾಡಿದ, ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ತನ್ನದಾಗಿಸಿಕೊಂಡ ಸ್ಪರ್ಧಿ ದಿವ್ಯ ಸುರೇಶ್ ಅವರು ಎಂದು ಪ್ರತ್ಯೇಕವಾಗಿ ಹೇಳಲೇಬೇಕಾಗಿಲ್ಲ. ದಿವ್ಯ ಸುರೇಶ್ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ, ಅನಂತರ ಮನೆಯಿಂದ ಹೊರಗೆ ಬಂದ ಮೇಲೂ ಸಹಾ ಸುದ್ದಿಗಳಲ್ಲಿ ಇದ್ದಾರೆ. ಬಿಗ್ ಬಾಸ್ ನಿಂದಾಗಿ ಅವರ ಜನಪ್ರಿಯತೆ ಮೊದಲಿಗಿಂತಲೂ ಹೆಚ್ಚಿರುವುದು ನಿಜ. ಸೆಲೆಬ್ರಿಟಿ ಆದ ಕಾರಣ ಒಂದಲ್ಲಾ ಒಂದು ಸುದ್ದಿಯಲ್ಲಿ ಕಾಣಿಸಿಕೊಳ್ಳುವುದು ಸಹಜ.
ಈ ನಟಿ ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ರಂಪಾಟ ಮಾಡಿರುವ ಘಟನೆಯೊಂದು ನಡೆದಿದೆ. ನಟಿ ದಿವ್ಯ ಸುರೇಶ್ ಅವರು ತಮ್ಮ ಸ್ನೇಹಿತರ ಜೊತೆಗೆ ಬ್ರಿಗೇಟ್ ರಸ್ತೆಯಲ್ಲಿನ ಚರ್ಚ್ ಸ್ಟ್ರೀಟ್ ನ ರಾಸ್ತಾ ಎನ್ನುವ ಪಬ್ ನಲ್ಲಿ ಇದ್ದರು ಎನ್ನಲಾಗಿದೆ. ಅವರು ಅಲ್ಲಿಂದ ಕೆಳಗೆ ಬರುವಾಗ ಯಾರೋ ವ್ಯಕ್ತಿ ಅವರ ಮೊಬೈಲ್ ನಲ್ಲಿ ತನ್ನ ವೀಡಿಯೋ ಮಾಡಿದ್ದಾನೆ ಎನ್ನುವ ವಿಷಯಕ್ಕೆ ನಟಿ ರಂಪಾಟ ಮಾಡಿದ್ದು , ವೀಡಿಯೋ ಡಿಲೀಟ್ ಮಾಡುವಂತೆ, ಮೊಬೈಲ್ ಕಿತ್ತು ಕೊಳ್ಳಲು ಪ್ರಯತ್ನ ಮಾಡಿದ್ದರು ಎನ್ನಲಾಗಿದೆ.
ನೈಟ್ ಕರ್ಫ್ಯೂ ಕಾರಣದಿಂದ ಪೋಲಿಸರು ಮೇಲ್ವಿಚಾರಣೆಗೆಂದು ಬಂದಿದ್ದ ವೇಳೆ ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿ ನಟಿಗೆ ಸಮಾಧಾನ ಮಾಡಿದ್ದಾರೆ, ನಿಮ್ಮ ವೀಡಿಯೋಗಳು ಏನಾದರೂ ಇದ್ದರೆ ಡಿಲೀಟ್ ಮಾಡಿಸುತ್ತೇವೆ ಎಂದು ಭರವಸೆಯನ್ನು ನೀಡಿ ನಟಿಯನ್ನು ಅಲ್ಲಿಂದ ಕಳುಹಿಸಿರುವ ಘಟನೆಯು ನಡೆದಿದ್ದು, ಆ ಸಂದರ್ಭದಲ್ಲಿ ನಟಿಯು ಕುಡಿದ ಮತ್ತಿನಲ್ಲಿ ಇದ್ದರು ಎನ್ನಲಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಷಯ ಈಗ ಹರಿದಾಡಿ ಸುದ್ದಿಯನ್ನು ಮಾಡುತ್ತಿದೆ.