ಎಜೆ ಸರ್ಪ್ರೈಸ್ ಗೆ ಲೀಲಾ ಫಿದಾ: ಎಡವಟ್ಟು ಸುಂದರಿ ಮನಸ್ಸಲ್ಲಿ ಕೇಳುತಿದ್ಯಾ ಪ್ರೇಮ ರಾಗ!!

Entertainment Featured-Articles Movies News

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಮನರಂಜನೆಯ ವಿಚಾರದಲ್ಲಿ ಟಾಪ್ ಸ್ಥಾನವನ್ನು ಅಲಂಕರಿಸಿವೆ. ಇಲ್ಲಿನ ಸೀರಿಯಲ್ ಗಳು ಕಿರುತೆರೆಯ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವಲ್ಲಿ ಮುಂದಿನ ಸಾಲಿನಲ್ಲಿದ್ದು ಬೇರೆ ವಾಹಿನಿಗಳ ಸೀರಿಯಲ್ ಗಳಿಗೆ ಪ್ರಬಲ ಸ್ಪರ್ಧೆಯನ್ನು ಒಡ್ಡಿ ಮುಂದೆ ಸಾಗುತ್ತಿವೆ. ಹೀಗೆ ಜನಪ್ರಿಯತೆ ಪಡೆದು ಜನರ ಅಪಾರ ಮನ್ನಣೆ ಹಾಗೂ ಪ್ರೀತಿಯನ್ನು ಪಡೆದಿರುವ ಸೀರಿಯಲ್ ಗಳಲ್ಲಿ ಹಿಟ್ಲರ್ ಕಲ್ಯಾಣ‌ ಸೀರಿಯಲ್ ಸಹಾ ಒಂದಾಗಿದೆ. ಎಡವಟ್ ಲೀಲಾ, ಮಿಸ್ಟರ್ ಪರ್ಫೆಕ್ಟ್ ಎಜೆ ಜೋಡಿ ಜನರ ಮೆಚ್ಚುಗೆಗೆ ಪಾತ್ರವಾಗಿವೆ.

ಎಜೆ ಮತ್ತು ಲೀಲಾ ಜೋಡಿ ಕಿರುತೆರೆಯ ಪ್ರೇಕ್ಷಕರ ಅಚ್ಚು ಮೆಚ್ಚಿನ ಜೋಡಿಗಳಲ್ಲಿ ಒಂದಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಶ್ರೀಮಂತ ಅಭಿರಾಮ್ ಜಯರಾಂ ಅಥವಾ ಎಜೆ ಜೊತೆ ಸಪ್ತಪದಿ ತುಳಿದಿರುವ ಲೀಲಾ ತನ್ನ ಎಡವಟ್ಟುಗಳಿಂದ ಸದಾ ಎಜೆಯ ಕೋಪಕ್ಕೆ ಗುರಿಯಾಗ್ತಾನೇ ಇರ್ತಾಳೆ. ಇನ್ನು ಲೀಲಾಳನ್ನು ಮನೆಯಿಂದ ಓಡಿಸಲು ಎಜೆಯ ಮೂರು ಜನ ಸೊಸೆಯರು ಮಾಡುವ ಯೋಜನೆಗಳಲ್ಲಿ ಸದಾ ಸಿಲುಕುವ ಲೀಲಾಳ ಪರದಾಟ ಅಷ್ಟಿಷ್ಟಲ್ಲ.

ಇನ್ನು ಅಪ್ಪನಿಗೆ ಎಜೆ ಮನೆ ಪಾರ್ಟಿಯಲ್ಲಿ ಆದ ಅವಮಾನದ ನಂತರ ಮನೆ ಬಿಟ್ಟು ತವರು ಮನೆ ಸೇರಿದ್ದ ಲೀಲಾಳನ್ನು ಎಜೆ ಮತ್ತೆ ಮನೆಗೆ ಕರೆ ತಂದು, ಲೀಲಾ ತಂದೆ ಮೇಲೆ ಬಂದಿದ್ದ ಆರೋಪವನ್ನು ಸಹಾ ಎಜೆ ದೂರ ಮಾಡಿದ್ದಾಗಿದೆ. ಲೀಲಾಳಿಗೆ ಮೊದಲಿನಿಂದಲೂ ನಟನೆ ಇಷ್ಟ, ಸೀರಿಯಲ್ ಸ್ಟಾರ್ ಆಗಬೇಕು ಎನ್ನುವ ಹುಚ್ಚು ಹಠ ಆಕೆಯದ್ದು. ಅಲ್ಲದೇ ಅದಕ್ಕಾಗಿ ಆಡಿಷನ್ ನೀಡಲು ಹೋಗುತ್ತಿದ್ದ ಲೀಲಾ ಮದುವೆ ನಂತರ ಅದೆಲ್ಲದಕ್ಕೂ ಬ್ರೇಕ್ ಹಾಕಿದ್ದಾಳೆ. ಲೀಲಾ ಗೆ ಕಿರುತೆರೆಯ ನಟಿ ಗೀತಾ ಮತ್ತು ನಟ ಗುರುಮೂರ್ತಿ ಇಬ್ಬರೂ ಕೂಡಾ ಫೇವರಿಟ್ ಸ್ಟಾರ್ .

ಇದನ್ನು ತಿಳಿದ ಎಜೆ‌ ಲೀಲಾಳಿಗೆ ಒಂದು ಸರ್ಪ್ರೈಸ್ ನೀಡಲು ಲೀಲಾಳನ್ನು ಡಿನ್ನರ್ ಗೆ ಎಂದು ಹೊರಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಗುರು ಮೂರ್ತಿ ಮತ್ತು ಗೀತಾ ರನ್ನು ಕರೆಸಿ ಲೀಲಾ ಜೊತೆ ಭೇಟಿಯನ್ನು ಏರ್ಪಡಿಸಿದ್ದಾರೆ. ಗೀತಾ ಮತ್ತು ಗುರು ಮೂರ್ತಿಯನ್ನು ಕಂಡ ಲೀಲಾ ಥ್ರಿಲ್ ಆಗಿದ್ದಾಳೆ. ಅಲ್ಲದೇ ತನ್ನ ಫೇವರಿಟ್ ಸ್ಟಾರ್ ಗಳು ತನಗಾಗಿ ಬಂದಿದ್ದಾರೆ ಎಂದು ತಿಳಿದ ಲೀಲಾಳ ಖುಷಿಗೆ ಪಾರವೇ ಇಲ್ಲ ಎನ್ನುವಂತೆ ಅನಿಸಿದೆ. ಅಲ್ಲದೇ ಎಜೆ ತನಗಾಗಿ ಮಾಡಿದ ಪ್ಲಾನ್ ಕಂಡು ಥ್ರಿಲ್ ಆಗಿದ್ದಾಳೆ‌ ಲೀಲಾ.

ಇದೇ ವೇಳೆ ಎಜೆ ತನ್ನ ತಾಯಿಯ ಬಳಿ ಮಾತನಾಡುತ್ತಿರುವುದನ್ನು ನೋಡಿದ ಲೀಲಾ ಎಜೆ ಕಡೆ ನೋಡುತ್ತಾ ಒಂದು ಹೊಸ ನೋಟದಲ್ಲಿ ಎಜೆ ಕಡೆ ನೋಡಲು ಆರಂಭಿಸಿದ್ದಾಳೆ. ಇಷ್ಟು ದಿನ ಎಜೆ ಎಂದರೆ ಮನಸ್ಸಿನಲ್ಲೊಂದು ಕಿರಿಕಿರಿ ಫೀಲ್ ಆಗ್ತಾ ಇದ್ದ ಲೀಲಾ ಮನಸ್ಸಿನಲ್ಲಿ ಈಗ ಪ್ರೇಮದ ಹೂವು ಅರಳಲು ಆರಂಭಿಸಿದೆಯಾ?? ಲೀಲಾ ಎಜೆ ನಡುವಿನ ವಿರಸವು ಇನ್ಮುಂದೆ ಸರಸವಾಗಿ ಬದಲಾಗುತ್ತಾ?? ಪ್ರೇಕ್ಷಕರು ಇದನ್ನು ನೋಡಲು ಕಾತರರಾಗಿದ್ದಾರೆ.

Leave a Reply

Your email address will not be published.